ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಮಕ್ಕಳಿಂದ ಸಿಹಿ ಸುದ್ದಿ ಬರಲಿದೆ

nity
Published on

ಮೇಷ: ನಿರೀಕ್ಷೆಗಳು ಹುಸಿ ಆಗಬಹುದು. ಕೆಲಸದಲ್ಲಿ ಒತ್ತಡ ತಲೆದೋರಿ ಗಲಿಬಿಲಿ. ಗುರುವನ್ನು ಆರಾಧಿಸಲು ಮರೆಯಬೇಡಿ. ಶುಭಸಂಖ್ಯೆ: 2

ವೃಷಭ: ಜನ್ಮದ ರಾಹು ಆರೋಗ್ಯ ಸಮಸ್ಯೆಗೆ ಕಾರಣನಾಗುತ್ತಾನೆ. ಮಾನಸಿಕ ತಳಮಳ. ಅಶಾಂತಿ. ದೇವಿಯನ್ನು ಪೂಜಿಸಿ. ಶುಭಸಂಖ್ಯೆ: 8

ಮಿಥುನ: ಮಕ್ಕಳಿಂದ ಸಿಹಿ ಸುದ್ದಿ ಬರಲಿದೆ. ಹಲವು ದಿನಗಳಿಂದ ಬಾಕಿ ಇದ್ದ ಭೂ ವಿವಾದಕ್ಕೆ ಸುಖಾಂತ್ಯ ದೊರೆತು ನೆಮ್ಮದಿ. ಶುಭಸಂಖ್ಯೆ: 3

ಕಟಕ: ಮನೆಗೆ ದೂರದ ಬಂಧುಗಳ ಆಗಮನ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತಾಯಿಯ ಸಲಹೆ ಪಡೆಯಿರಿ. ಒಳ್ಳೆಯದಾಗುವುದು. ಶುಭಸಂಖ್ಯೆ: 4

ಸಿಂಹ: ದುಶ್ಚಟಗಳಿಂದ ಮನೆಯಲ್ಲಿ ಅಸಮಾಧಾನ. ಸಹೋದ್ಯೋಗಿಗಳಿಂದ ಸಾಂತ್ವನ. ಮನಸ್ಸನ್ನು ನಿಯಂತ್ರಿಸಿ. ಸ್ಕಂದನ ಪೂಜಿಸಿ. ಶುಭಸಂಖ್ಯೆ: 9

ಕನ್ಯಾ: ನಿಮ್ಮ ಧೋರಣೆ ಅವಮಾನಕ್ಕೆ ಕಾರಣ ಆಗಬಹುದು. ಸಮಾಧಾನದಿಂದ ಇರಿ. ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 6

ತುಲಾ: ಸ್ನೇಹಿತರ ಸಹಕಾರ ದೊರೆಯಲಿದೆ. ಭವಿಷ್ಯದ ಉನ್ನತಿಯ ಸಾಕಾರವಾಗಿ ಸಂತಸ. ಸಂಜೆಯ ವೇಳೆಗೆ ನಿರಾಸೆಯ ಅನುಭವ. ಶುಭಸಂಖ್ಯೆ: 3

ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲವಿಲ್ಲ. ಬಹಳ ದಿನಗಳಿಂದ ನನೆಗುದಿಯಲ್ಲಿದ್ದ ಕೆಲಸಕ್ಕೆ ಪುನರ್‌ಚಾಲನೆ. ಗಣೇಶನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7

ಧನಸ್ಸು: ಸಾಮಾಜಿಕ ಜೀವನದಲ್ಲಿ ಸಹನೆ ಇರಲಿ. ದುಡುಕು ಸ್ವಭಾವ ನಿಮ್ಮ ಅವನತಿಗೆ ಕಾರಣವಾಗಬಹುದು. ವರ್ತನೆಯಲ್ಲಿ ಎಚ್ಚರ. ಶುಭಸಂಖ್ಯೆ: 1

ಮಕರ: ಉದ್ಯೋಗ ಅರಸುವವರಿಗೆ ಕಾರ್ಯ ಸಿದ್ದಿ. ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಅಧಿಕ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 2

ಕುಂಭ: ಸಂಬಂಧವಿಲ್ಲದ ವಿಷಯಕ್ಕೆ ತಲೆಕೆಡಿಸಿಕೊಳ್ಳದೇ ಇರುವುದು ಒಳ್ಳೆಯದು. ಅನವಶ್ಯಕ ಖರ್ಚು. ಈಶ್ವರನನ್ನು ಪೂಜಿಸಿ. ಶುಭಸಂಖ್ಯೆ: 6

ಮೀನ : ಮಕ್ಕಳ ಭವಿಷ್ಯದ ಚಿಂತೆ. ಭಯಬೇಡ. ದೃಢ ನಿರ್ಧಾರ ತೆಗೆದುಕೊಳ್ಳಿ. ದಿನಾಂತ್ಯದಲ್ಲಿ ಸಡಗರ, ಸುಖಭೋಜನ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net