ಈ ರಾಶಿಯವರಿಗೆ ಇಂದು ಸ್ತ್ರೀಯರಿಂದ ಸಹಾಯ ಸಿಗುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಯಶಸ್ಸು ಗೋಚರಿಸಲಿದೆ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ಕಾರ್ಯಕ್ಕೆ ಹಿರಿಯರ ಹಾರೈಕೆ. ಶುಭಸಂಖ್ಯೆ: 9

ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಋಣಾತ್ಮಕ ಚಿಂತನೆಯಿಂದ ಹೊರಬನ್ನಿ. ಗೆಳೆಯನ ಭೇಟಿ. ಶುಭಸಂಖ್ಯೆ: 2

ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಬಹುದು. ಎಚ್ಚರದಿಂದ ವ್ಯವಹರಿಸಿ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ. ಶುಭಸಂಖ್ಯೆ: 8

ಕಟಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ: 6

ಸಿಂಹ: ಅನವಶ್ಯಕ ತಿರುಗಾಟ. ಸ್ವಂತಗ್ರಾಮಕ್ಕೆ ಭೇಟಿ ಸಾಧ್ಯತೆ. ವಾದಕರಿಗೆ ವಿಶೇಷ ಲಾಭವಿದೆ. ಭೂ ವಿವಾದದ ತೀರ್ಪು ಬರುವುದು. ಶುಭಸಂಖ್ಯೆ: 7

ಕನ್ಯಾ: ಅನಿರೀಕ್ಷಿತವಾಗಿ ಧನಲಾಭ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಗುಣಗಾನ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 9

ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಸಂಗಾತಿ ಜತೆೆ ವಿರಸ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 3

ವೃಶ್ಚಿಕ: ಮನೆ ಬದಲಾವಣೆಯ. ಭೂಮಿ ವಿವಾದದ ತೀರ್ಪ. ಕುಟುಂಬದೊಂದಿಗೆ ಸಮಾಲೋಚನೆ. ಸಂಜೆ ಶುಭಸುದ್ದಿ. ಶುಭಸಂಖ್ಯೆ: 1

ಧನುಸ್ಸು: ಕೆಲವೊಂದು ಘಟನೆಗಳು ಅಸಹನೆಗೆ ಕಾರಣ ಆಗಬಹುದು. ಸಾರ್ವಜನಿಕವಾಗಿ ಅವಮಾನ. ಸ್ನೇಹಿತನಿಂದ ಸಮಾಧಾನ. ಶುಭಸಂಖ್ಯೆ: 8

ಮಕರ: ವಿದ್ಯಾರ್ಥಿಗಳಿಗೆ ಪ್ರಗತಿ. ಸಹೋದ್ಯೋಗಿಗಳ ಮೇಲೆ ಅಸಮಾಧಾನ. ಸ್ತ್ರೀಯರಿಂದ ಸಹಾಯ ದೊರೆಯುವುದು. ಶುಭಸಂಖ್ಯೆ: 3

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಪುರಸ್ಕಾರ. ಪತ್ನಿಯೊಂದಿಗೆ ಮಂದಿರಕ್ಕೆ ಭೇಟಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 6

ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸವಾದೀತು. ಹಣಕಾಸಿನ ವ್ಯವಹಾರದಲ್ಲಿ ವಂಚನೆ ಸಾಧ್ಯತೆ. ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net