ಈ ರಾಶಿಯವರ ಕುಟುಂಬದಲ್ಲಿ ಇಂದು ಶುಭ ಕೆಲಸಕ್ಕೆ ಚಾಲನೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ದೂರದ ಊರಿಂದ ಬಂಧುಗಳ ಆಗಮನ. ಸಹೋದರರೊಂದಿಗೆ ವಾಗ್ವಾದ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ಮಾನ. ಶುಭಸಂಖ್ಯೆ: 9

ವೃಷಭ: ಸಾರ್ವಜನಿಕ ಸೇವೆಯಲ್ಲಿ ಉತ್ತಮ ಅವಕಾಶ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಮಗಳ ಮದುವೆ ವಿಷಯದಲ್ಲಿ ಅಸಮಾಧಾನ. ಶುಭಸಂಖ್ಯೆ: 2

ಮಿಥುನ: ಅಷ್ಟಮದ ಶನಿ ಅನಿರೀಕ್ಷಿತ ತಿರುವುಗಳಿಗೆ ಕಾರಣ ಆಗಬಹುದು. ದುರ್ಗೆಯನ್ನು ಆರಾಧಿಸಿ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 3

ಕಟಕ: ಪತ್ನಿಯೊಂದಿಗೆ ವಿಹಾರ. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಹಿರಿಯರ ಸಲಹೆ ತೆಗೆದುಕೊಳ್ಳಿ. ದಿನಾಂತ್ಯದಲ್ಲಿ ಸಂತಸ. ಶುಭಸಂಖ್ಯೆ:3

ಸಿಂಹ: ಮಿತ್ರರೇ ಶತ್ರುಗಳಾದಾರು, ಸಹನೆಯಿರಲಿ. ಮಹತ್ವದ ತೀರ್ವನಕ್ಕೆ ಮನೆಯವರಿಂದ ವಿರೋಧ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 6

ಕನ್ಯಾ: ಆಸ್ತಿ ವಿಚಾರದ ತೀರ್ಪು ಪ್ರಕಟ. ಕುಟುಂಬದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಶುಭಸಂಖ್ಯೆ:2

ತುಲಾ: ಮಕ್ಕಳ ಬೇಡಿಕೆಗೆ ಸ್ಪಂದಿಸಿ. ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಂದನೆ. ಶುಭಸಂಖ್ಯೆ: 6

ವೃಶ್ಚಿಕ: ಸಹೋದರರೊಂದಿಗೆ ಅಸಮಾಧಾನ. ಸಹೋದರಿಯರೊಂದಿಗೆ ಭೋಜನ. ಸ್ನೇಹಿತನ ಸಲಹೆ. ಧಾರ್ವಿುಕ ಕೇಂದ್ರಕ್ಕೆ ಭೇಟಿ. ಶುಭಸಂಖ್ಯೆ: 5

ಧನುಸ್ಸು: ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಹುದು. ಅಪವ್ಯಯ ಬೇಡ. ಯೋಚಿಸಿ ಮಾತನಾಡಿ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿರಲಿ. ಶುಭಸಂಖ್ಯೆ: 2

ಮಕರ: ಮಾನಸಿಕ ಕ್ಲೇಶ. ಆಹಾರ ಸೇವಿಸುವಾಗ ಮಿತಿ ಇರಲಿ. ದಿನಾಂತ್ಯದಲ್ಲಿ ಶುಭ ಸುದ್ದಿ ಬರಲಿದೆ. ಧನ್ವಂತರಿಯನ್ನು ಭಜಿಸಿ. ಶುಭಸಂಖ್ಯೆ: 7

ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ಸಂಗೀತಗಾರರಿಗೆ ವಿಶೇಷ ದಿನ. ಹಣಕಾಸಿನ ಸಮಸ್ಯೆ ತಲೆದೋರಬಹುದು. ಶುಭಸಂಖ್ಯೆ: 3

ಮೀನ: ಅನಪೇಕ್ಷಿತ ಘಟನೆ ನಡೆಯಬಹುದು. ಮಕ್ಕಳ ಬಗ್ಗೆ ಹೆಮ್ಮೆ. ಕುಟುಂಬದಲ್ಲಿ ಶುಭ ಕೆಲಸಕ್ಕೆ ಚಾಲನೆ. ಮಗಳ ಮದುವೆ ನಿಶ್ಚಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net