ಇಂದು ಈ ರಾಶಿಯವರಿಗೆ ಗೆಳೆಯರೇ ಖಳನಾಯಕರಾಗಬಹುದು: ನಿತ್ಯ ಭವಿಷ್ಯ

Nitya-Bhavishya-vvani-1-2-1
Published on

ಮೇಷ: ನಿರೀಕ್ಷಿಸಿದ್ದಕ್ಕಿಂತ ಕಷ್ಟಕರವಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಬಗೆಗೆ ವಿಶೇಷ ಎಚ್ಚರ ಇದ್ದರಷ್ಟೇ ಕ್ಷೇಮವುಂಟಾಗಲಿದೆ. ಶುಭಸಂಖ್ಯೆ: 9

ವೃಷಭ: ಸ್ವಲ್ಪಮಟ್ಟಿನ ಬಳಲಿಕೆಯಿಂದ ಮಾನಸಿಕವಾದ ವ್ಯಥೆ ಉಂಟಾದರೂ ಹಿಡಿದ ಕೆಲಸವನ್ನು ಮಾತ್ರ ಬಿಡದಿರಿ. ಗೆಲುವು ಲಭಿಸಲಿದೆ. ಶುಭಸಂಖ್ಯೆ: 3

ಮಿಥುನ: ವ್ಯವಹಾರ, ಷೇರು ಇತ್ಯಾದಿ ಅವಸರದ ಗಂಭೀರ ವಹಿವಾಟುಗಳಲ್ಲೇ ಇರಬೇಡಿ. ಕೌಟುಂಬಿಕವಾದ ಆಪ್ತ ಕ್ಷಣಗಳಿಗೂ ಬಿಡುವಿರಲಿ. ಶುಭಸಂಖ್ಯೆ: 1

ಕಟಕ: ಧನಲಾಭಕ್ಕೆಂದು ನಿಖರವಾದ ದಾರಿಗಳಿಲ್ಲದ ಕಾಲಘಟ್ಟ ಇದಾಗಿದೆ. ಆದರೂ ಕೃಷಿಯಲ್ಲಿ ನೀವು ಹೆಚ್ಚಿನದಾದ ಶ್ರಮ ವಹಿಸಬೇಕು. ಶುಭಸಂಖ್ಯೆ: 6

ಸಿಂಹ: ನೇರವಾಗಿ ಸಾಗುತ್ತಿರುವಂತಹ ಮಾರ್ಗವು ಸ್ವಲ್ಪ ಕಷ್ಟಗಳನ್ನು ಉಂಟುಮಾಡುತ್ತದೆ. ಭಕ್ತಿಯಿಂದ ಲಕ್ಷ್ಮೀನರಸಿಂಹನನ್ನು ಸ್ತುತಿಸಿ. ಶುಭಸಂಖ್ಯೆ: 4

ಕನ್ಯಾ: ಗೆಳೆಯರೇ ನಿಮ್ಮ ಪಾಲಿಗೆ ಖಳನಾಯಕನ ಹಾಗಾಗಬಹುದು. ಆದರೆ ಎಲ್ಲ ಮಿತ್ರರ ಬಗೆಗೂ ಸಂಶಯಪಡುವುದೇನೂ ಬೇಡ. ಶುಭಸಂಖ್ಯೆ: 8

ತುಲಾ: ಎಲ್ಲರ ಅನಿಸಿಕೆಗಳನ್ನೂ ಕೇಳಿ. ಆದರೆ ಅಂತಿಮ ತೀರ್ಮಾನ ಎಂಬುದು ಮಾತ್ರ ನಿಮ್ಮದೇ ಆಗಿರಲಿ. ವಿಜಯಶಾಲಿಯಾಗಲಿದ್ದೀರಿ. ಶುಭಸಂಖ್ಯೆ: 2

ವೃಶ್ಚಿಕ: ಮಹತ್ವದ ಸ್ಥಾನವೊಂದರ ಪ್ರಾಪ್ತಿಗಾಗಿ ಬಹಳ ಮುತುವರ್ಜಿಯಿಂದ ಪ್ರಯತ್ನಿಸಿ. ಶೀಘ್ರದಲ್ಲೇ ಕಾರ್ಯಸಿದ್ಧಿ ಉಂಟಾಗಲಿದೆ. ಶುಭಸಂಖ್ಯೆ: 5

ಧನುಸ್ಸು: ಆಕಸ್ಮಿಕವಾಗಿ ಭೇಟಿಯಾಗುವ ಧೂರ್ತರು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಪ್ರಯತ್ನಿಸಬಹುದು. ಅವರಿಗೆ ಅಂಜದೆ ಮುಂದೆ ಸಾಗಿ. ಶುಭಸಂಖ್ಯೆ: 7

ಮಕರ: ದೂರಪ್ರಯಾಣದ ಅವಕಾಶ ಕೂಡಿಬರುತ್ತದೆ. ಸಾವಧಾನದಿಂದ ನಿಮ್ಮ ಕಾರ್ಯಸೂಚಿಯನ್ನು ರೂಪಿಸಿಕೊಳ್ಳಿ. ಲಾಭವಾಗಲಿದೆ. ಶುಭಸಂಖ್ಯೆ: 3

ಕುಂಭ: ನಿಮ್ಮ ನೈಜ ಪ್ರತಿಭೆಯನ್ನು ಅರಿಯುವಂತಹ ಸಂದರ್ಭ ಜನರಿಗೆ ದೊರೆಯಲಿದೆ. ನೀವೂ ಧನ್ಯತಾಭಾವ ಹೊಂದಲಿದ್ದೀರಿ. ಶುಭಸಂಖ್ಯೆ: 9

ಮೀನ: ನಿಮ್ಮದೇ ಸ್ವಂತ ಆಸ್ತಿ ಹಾಗೂ ಹೊಸ ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ಒದಗಬೇಕಾದ ನೆರವು ಬೇಗನೆ ಬಂದೊದಗಲಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net