

ಮೇಷ: ಮನೆಯಲ್ಲಿ ಸಂತಸ. ಆಸ್ತಿ ವಿಚಾರಗಳಲ್ಲಿ ಗೊಂದಲ. ನೂತನ ಬಂಧುಮಿತ್ರರ ಸಮಾಗಮ. ಸಾಹಸ ಪ್ರವೃತ್ತಿಯಿಂದ ಅಭಿವೃದ್ಧಿ. ಶುಭಸಂಖ್ಯೆ: 6
ವೃಷಭ: ವಿದೇಶಿ ಮೂಲದಿಂದ ಧನಾಗಮ. ಕಬ್ಬಿಣದ ವ್ಯಾಪಾರದಲ್ಲಿ ಪ್ರಗತಿ. ಹಿರಿಯರ ಮಾರ್ಗದರ್ಶನ ದಿಂದ ಅಡಚಣೆಗಳ ನಿವಾರಣೆ. ಶುಭಸಂಖ್ಯೆ: 8
ಮಿಥುನ: ಗುರುಹಿರಿಯರ ಸಹಕಾರ, ಪೋ›ತ್ಸಾಹದಿಂದ ಗೌರವಾದರಗಳು ವೃದ್ಧಿ. ನಿರಂತರ ಧನಾರ್ಜನೆ. ವಾಕ್ ಚತುರತೆಯಿಂದ ಪ್ರಗತಿ. ಶುಭಸಂಖ್ಯೆ: 1
ಕಟಕ: ಗೃಹೋಪಕರಣ ವಸ್ತುಗಳಿಗೆ ಧನವ್ಯಯ. ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಶುಭಸಂಖ್ಯೆ: 4
ಸಿಂಹ: ದೀರ್ಘ ಪ್ರಯಾಣ ಸಂಭವ. ಉದ್ದಿಮೆದಾರರಿಗೆ ಪ್ರಗತಿ. ಆರ್ಥಿಕವಾಗಿ ತಾಳ್ಮೆಯಿದ್ದರೆ ಯಶ. ಹಿರಿಯರ ಆರೋಗ್ಯ ಗಮನಿಸಿ. ಶುಭಸಂಖ್ಯೆ: 5
ಕನ್ಯಾ: ಉದ್ಯೋಗದಲ್ಲಿ ಗೌರವ ವೃದ್ಧಿ. ಉತ್ತಮ ಧನಾರ್ಜನೆ. ಕುಟುಂಬದಲ್ಲಿ ಸಂತಸ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶ. ಶುಭಸಂಖ್ಯೆ: 6
ತುಲಾ: ಕೀರ್ತಿ ಸಂಪಾದನೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕೆಯಲ್ಲಿ ಅಭಿವೃದ್ಧಿಗೆ ಅವಕಾಶ. ಜಾಗ್ರತೆಯ ನಡೆ ಅಗತ್ಯ. ಆರೋಗ್ಯ ಹುಷಾರು. ಶುಭಸಂಖ್ಯೆ: 4
ಧನುಸ್ಸು: ಜವಾಬ್ದಾರಿಯಿಂದ ಕಾರ್ಯ ಮಾಡುವಿರಿ. ನಿರೀಕ್ಷಿತ ಗೌರವಾದರ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಶುಭಸಂಖ್ಯೆ: 7
ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆ ಸಾಧ್ಯತೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಸಹಾಯ. ಪ್ರಯಾಣ ಸಂಭವ. ಆರ್ಥಿಕ ಸ್ಥಿತಿ ವೃದ್ಧಿ. ಶುಭಸಂಖ್ಯೆ:1
ಕುಂಭ: ಆರೋಗ್ಯ ಉತ್ತಮ. ಕೆಲಸ ಕಾರ್ಯಗಳಲ್ಲಿ ಸಫಲತೆ. ದೂರದ ವ್ಯವಹಾರದಿಂದ ಧನ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 8
ಮೀನ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಆಯಾಸ ಆಗದಂತೆ ನಿರ್ವಹಿಸಿ. ಆರೋಗ್ಯ ಗಮನಿಸಿ ಕೊಳ್ಳಿ. ಮಾತಿನಲ್ಲಿ ತಾಳ್ಮೆ ಅಗತ್ಯ. ಶುಭಸಂಖ್ಯೆ: 2