ಇಂದು ಈ ರಾಶಿಯವರಿಂದ ವಿಲಾಸಿ ಜೀವನಕ್ಕೆ ದುಂದುವೆಚ್ಚ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ನೇಹಪರ ಸ್ವಭಾವದಿಂದಾಗಿ ಕೀರ್ತಿ ವೃದ್ಧಿ. ವಿಶೇಷ ಅಧಿಕಾರ ಲಭ್ಯ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 4

ವೃಷಭ: ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲ. ಸಂಶೋಧಕರಿಗೆ, ನ್ಯಾಯಾಂಗದವರಿಗೆ ಒಳ್ಳೆಯ ದಿನ. ವಿಷ್ಣು ಸಹಸ್ರ ನಾಮ ಪಠಿಸಿ. ಶುಭಸಂಖ್ಯೆ: 2

ಮಿಥುನ: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ವಿದೇಶ ಪ್ರಯಾಣ ಸಾಧ್ಯತೆ. ಮಹಿಳೆಯರಿಗೆ ಮೋಸವಾದೀತು. ಶುಭಸಂಖ್ಯೆ: 8

ಕಟಕ: ದಿನಸಿವ್ಯಾಪಾರಸ್ಥರಿಗೆ ಅಧಿಕ ಲಾಭ. ಕೃಷಿ ಕೆಲಸಗಳು ಸಮರ್ಪಕ. ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಶುಭಸಂಖ್ಯೆ: 7

ಸಿಂಹ: ಕೆಲ ಕಠಿಣ ನಿರ್ಧಾರಗಳಿಂದಾಗಿ ಉತ್ತಮ ಫಲ ಸಿಗಲಿದೆ. ಹುಟ್ಟೂರಿನಿಂದ ಶುಭಸುದ್ದಿಯನ್ನು ಕೇಳುವಿರಿ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 2

ಕನ್ಯಾ: ಪರಿಶ್ರಮಕ್ಕೆ ತಕ್ಕುದಾದ ಪುರಸ್ಕಾರ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ ತೋರಿ. ಮಗಳ ಮದುವೆಯ ಓಡಾಟ. ಶುಭಸಂಖ್ಯೆ: 3

ತುಲಾ: ಗಣ್ಯವ್ಯಕ್ತಿಯ ಭೇಟಿ. ಆದಾಯದಷ್ಟೇ ಖರ್ಚು ಇರುವುದು. ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 5

ವೃಶ್ಚಿಕ: ಜೀವನಶೈಲಿ ಬದಲಾಗುವ ದಿನ. ಹೊಸ ವಿಷಯಗಳು ಅನುಭವಕ್ಕೆ ಬರಲಿವೆ. ಅಪರಿಚಿತರೊಂದಿಗೆ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 6

ಧನುಸ್ಸು: ಅವಿವಾಹಿತರಿಗೆ ವಿವಾಹ ನಿಶ್ಚಯ. ಮನಸ್ಸಿನ ತುಮುಲವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ. ಶುಭಸಂಖ್ಯೆ: 2

ಮಕರ: ಸಣ್ಣ ಪುಟ್ಟ ತೊಡಕುಗಳು ಕಂಡರೂ ಕೆಲಸಗಳು ಅಬಾಧಿತವಾಗಿ ಸಾಗುವವು. ಸೃಜನಶೀಲತೆಗೆ ಉತ್ತಮ ವೇದಿಕೆ ಲಭಿಸಲಿದೆ. ಶುಭಸಂಖ್ಯೆ: 8

ಕುಂಭ: ಉದ್ಯೋಗದಲ್ಲಿ ಅತಂತ್ರತೆ. ವಿಲಾಸಿ ಜೀವನಕ್ಕೆ ದುಂದುವೆಚ್ಚ. ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ಇಂದು ಒಳ್ಳೆಯ ದಿನ. ಶುಭಸಂಖ್ಯೆ: 1

ಮೀನ: ಸಹೋದರರ ಮೇಲೆ ವಿಶಾಲ ಭಾವನೆ ಇರಲಿ. ದೊಡ್ಡ ಯೋಜನೆಗಳಿಗೆ ಅಡೆತಡೆ. ಸಂಬಂಧದಲ್ಲಿ ಸೌಹಾರ್ದ ಕಾಯ್ದುಕೊಳ್ಳುವಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net