ಈ ರಾಶಿಯವರಿಂದು ಹಣದ ವಿಚಾರದಲ್ಲಿ ತುಂಬಾ ಜೋಪಾನವಾಗಿರಿ, ಇಲ್ದಿದ್ರೆ ಜೇಬಿಗೆ ಕತ್ತರಿ ಗ್ಯಾರೆಂಟಿ

Nitya-Bhavishya-vvani-1-2-1
Published on

ಮೇಷ: ಸ್ನೇಹಿತನಿಂದ ಅಥವಾ ಸಂಗಾತಿಯಿಂದ ಬಹಳ ಮಾರ್ಗದರ್ಶನ ಸಿಗಲಿದೆ. ಬೇಡ ಎನ್ನುವಂತೆಯೂ ಇಲ್ಲ. ಅದೃಷ್ಟಸಂಖ್ಯೆ: 4

ವೃಷಭ: ಸಿಹಿ ತಿನ್ನಬೇಕು ಅಥವಾ ತಿನ್ನಿಸಬೇಕಾದ ದಿನ. ಆದರೆ ಪರಿಸ್ಥಿತಿ ಅದ್ಯಾವುದಕ್ಕೂ ಅವಕಾಶ ನೀಡುತ್ತಿಲ್ಲ. ಅದೃಷ್ಟಸಂಖ್ಯೆ: 6

ಮಿಥುನ: ಸಹಾಯ ಬೇಕು ಎಂದು ಕೇಳುವವರಿಗಾಗಿ ಸಹಾಯ ಮಾಡಲು ಬಂದರೆ ಬೇಡ ಎಂದುಬಿಡುತ್ತಾರೆ. ಅದೃಷ್ಟಸಂಖ್ಯೆ: 5

ಕಟಕ: ಮನಸ್ಸು ಇಲ್ಲವಾದರೂ ಮಾಡಿಕೊಡುತ್ತೇನೆ ಎಂದು ಮಾತು ಕೊಟ್ಟ ಕಾರಣ ಕಷ್ಟವೇ ಆದರೂ ಮಾಡುತ್ತೀರಿ. ಅದೃಷ್ಟಸಂಖ್ಯೆ: 7

ಸಿಂಹ: ಒಬ್ಬರ ಸಹಾಯದಿಂದ ಪ್ರಮುಖ ಕೆಲಸ ಆಗುತ್ತದೆ ಎಂದು ತಿಳಿದರೂ ಇವತ್ತೇ ಭೇಟಿ ಮಾಡಲು ಆಗದು. ಅದೃಷ್ಟಸಂಖ್ಯೆ: 2

ಕನ್ಯಾ: ಹಿಂದೆ ನೀವು ಮಾಡಿದ ಕೆಲಸಗಳನ್ನು ಹೀಯಾಳಿಸಿದ ವ್ಯಕ್ತಿಗಳಿಗೆ ಆ ಕೆಲಸಗಳ ಪ್ರಾಮುಖ್ಯತೆ ತಿಳಿಯಲಿದೆ. ಅದೃಷ್ಟಸಂಖ್ಯೆ: 9

ತುಲಾ: ಎಲ್ಲ ವಿಚಾರಗಳಲ್ಲಿ ನಿಮ್ಮದು ಭಿನ್ನ ರಾಗ. ನಿಮ್ಮದೇ ವಿಚಿತ್ರವಾದ ಹಠದಂತೆ ನಡೆಯಬೇಕು ಎನ್ನುತ್ತೀರಿ. ಅದೃಷ್ಟಸಂಖ್ಯೆ: 5

ವೃಶ್ಚಿಕ: ನಿಮ್ಮ ಮಾತಿಗೆ ಬಹಳ ಬೆಲೆ ಇದೆ. ಯೋಚಿಸಿ ತೀರ್ವನಗಳನ್ನು ತೆಗೆದುಕೊಳ್ಳಿ. ಆತುರ ಖಂಡಿತ ಬೇಡ. ಅದೃಷ್ಟಸಂಖ್ಯೆ: 9

ಧನುಸ್ಸು: ಖರ್ಚಿಲ್ಲದೆ ಆಗಬಹುದಾದ ಕೆಲಸಕ್ಕೆ ಬಹಳ ಖರ್ಚು ಮಾಡುವಂತೆ ಕಾಣುತ್ತಿದೆ. ಯಾವುದಕ್ಕೂ ಎಚ್ಚರ. ಅದೃಷ್ಟಸಂಖ್ಯೆ: 4

ಮಕರ: ಯಾವತ್ತೋ ಒಂದು ದಿನ ಪ್ರಯೋಜನಕ್ಕೆ ಬರುತ್ತದೆ ಎಂದು ತೆಗೆದಿಟ್ಟ ಹೊಸ ವಸ್ತು ಇಂದು ಬೇಕಾಗುತ್ತದೆ. ಅದೃಷ್ಟಸಂಖ್ಯೆ: 1

ಕುಂಭ: ವಹಿಸಿದ ಕೆಲಸವನ್ನು ಸರಿಯಾಗಿ ಮಾಡಲು ಬಹಳ ಕಷ್ಟಪಡುವಿರಿ. ಆದರೆ ಹಣ ಬರುವುದು ಅನುಮಾನ. ಅದೃಷ್ಟಸಂಖ್ಯೆ: 7

ಮೀನ: ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸಿ ತಪ್ಪು ಮಾಡಲು ಹೋಗುವಿರಿ. ಆದರೆ ಸಿಕ್ಕಿಬೀಳುತ್ತೀರಿ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net