ನಿತ್ಯ ಭವಿಷ್ಯ: ಈ ರಾಶಿಯವರು ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ...

Nitya-Bhavishya-vvani-1-2-1
Published on

ಮೇಷ: ಧೈರ್ಯದಿಂದ ಮುನ್ನುಗ್ಗುವ ಮೂಲಕ ನಿಮ್ಮದೇ ಆದಂತಹ ಯಶಸ್ಸಿನ ಪ್ರಯತ್ನವನ್ನು ಕೈಗೊಳ್ಳಿ. ಶುಭಸಂಖ್ಯೆ: 3

ವೃಷಭ: ಜಾಗ್ರತೆಯಿಂದ ಇರುವುದು ಸೂಕ್ತವಾಗಿದೆ. ಆರೋಗ್ಯದ ಬಗೆಗಿನ ವಿಚಾರಗಳ ಕುರಿತು ನಿಗಾ ಇರಲಿ. ಶುಭಸಂಖ್ಯೆ: 8

ಮಿಥುನ: ನಿಮ್ಮ ವಿರುದ್ಧ ವೃಥಾ ಆರೋಪದಲ್ಲಿ ತೊಡಗುವಂತಹ ಮಂದಿಯಿಂದ ಕಿರುಕುಳ, ತೊಂದರೆ ಸಾಧ್ಯ. ಶುಭಸಂಖ್ಯೆ: 6

ಕಟಕ: ಕುಟುಂಬದ ಎಲ್ಲ ಸದಸ್ಯರ ಸಹಾಯದಿಂದ ಹೆಚ್ಚಿನದಾದ ಯಶಸ್ಸನ್ನು ಬಹು ಬೇಗನೆ ಸಾಧಿಸಲಿದ್ದೀರಿ. ಶುಭಸಂಖ್ಯೆ: 4

ಸಿಂಹ: ನೀವು ನಿಜವಾಗಿ ನಿರೀಕ್ಷಿಸಿದಷ್ಟು ಫಲಗಳು ಪ್ರಾಪ್ತಿಯಾಗುವುದು ಸ್ವಲ್ಪ ಕಷ್ಟಕರವೇ ಆಗಬಹುದು. ಶುಭಸಂಖ್ಯೆ: 9

ಕನ್ಯಾ: ಮಕ್ಕಳ ವಿಚಾರದಲ್ಲಿ ನಿಮ್ಮ ನಿರೀಕ್ಷೆಗಳು ಪರಿಣಾಮಕಾರಿಯಾಗಲು ಸಾಧ್ಯವಿದೆ. ಹಾಗಾಗಿ ಚಿಂತೆ ಬೇಡ. ಶುಭಸಂಖ್ಯೆ: 5

ತುಲಾ: ಜನರಿಂದ ಪ್ರಶಂಸಾತ್ಮಕವಾದ ಮಾತುಗಳು ಕೇಳಿಬರುವಂತೆ ಜನಪ್ರಿಯ ಕೆಲಸಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 1

ವೃಶ್ಚಿಕ: ಮಾರುತಿರಾಯನನ್ನು ಆರಾಧಿಸುವ ಕೆಲಸದಿಂದಾಗಿ ಗ್ರಹಚಾರದ ತೊಂದರೆಗಳಿಂದ ದೂರವಾಗುವಿರಿ. ಶುಭಸಂಖ್ಯೆ: 8

ಧನಸ್ಸು: ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅಗತ್ಯ. ರ್ತಾಕವಾಗಿ ನಿರ್ಧಾರಕ್ಕೆ ಬಂದರೆ ಉತ್ತಮ. ಶುಭಸಂಖ್ಯೆ: 2

ಮಕರ: ದೇವತ ಕಾರ್ಯಕ್ರಮಗಳ ಸಂದರ್ಭದಲ್ಲಿ ನಿಮ್ಮ ಮುಂದಾಳತ್ವಕ್ಕೆ ಆದ್ಯತೆ ದೊರೆಯಲು ಸಾಧ್ಯವಿದೆ. ಶುಭಸಂಖ್ಯೆ: 9

ಕುಂಭ: ಮುಂದುವರಿದು ಗೆಲುವನ್ನು ಸಾಧಿಸಬಹುದಾದ ವಿಚಾರದಲ್ಲಿ ಸಂಗಾತಿಯು ನಿಮಗೆ ಸಹಾಯ ನೀಡುವರು. ಶುಭಸಂಖ್ಯೆ: 7

ಮೀನ: ವ್ಯಾಜ್ಯದ ಬಗೆಗಿನ ಕಗ್ಗಂಟುಗಳನ್ನು ನಿವಾರಿಸಲು, ಮನದ ಕಾಮನೆ ನೆರವೇರಲು ಗಣಪತಿಯನ್ನು ಸ್ತುತಿಸಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net