

ಮೇಷ: ವ್ಯಾಪಾರದಲ್ಲಿ ಲಾಭವಾಗಲಿದೆ. ಕುಟುಂಬ ಸೌಖ್ಯ ಇರುವುದು. ದಾನ- ಧರ್ಮಗಳಲ್ಲಿ ಆಸಕ್ತಿ ತಾಳುವಿರಿ. ಶರೀರದಲ್ಲಿ ಆಯಾಸ. ಶುಭಸಂಖ್ಯೆ: 5
ವೃಷಭ: ದೂರ ಪ್ರಯಾಣ ಮಾಡಬೇಕಾಗುವುದು. ಅಧಿಕಾರಿಗಳಲ್ಲಿ ಸಹಕಾರ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 9
ಮಿಥುನ: ಉತ್ತಮ ಅವಕಾಶ ಪಡೆದುಕೊಳ್ಳುವಿರಿ. ಮನಃಶಾಂತಿ ಸಿಗಲಿದೆ. ಜಮೀನು ವಿಷಯಗಳಲ್ಲಿ ಗೊಂದಲ ನಿವಾರಿಸಿಕೊಳ್ಳುವಿರಿ. ಶುಭಸಂಖ್ಯೆ: 7
ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ. ಮಾನಸಿಕ ಚಿಂತೆ ಕಾಡಲಿದೆ. ಅನಾರೋಗ್ಯ. ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಶುಭಸಂಖ್ಯೆ: 2
ಸಿಂಹ: ದುಂದುವೆಚ್ಚಕ್ಕೆ ಕಡಿವಾಣ ಅಗತ್ಯ. ಶತ್ರು ಬಾಧೆ ನಿವಾರಣೆ. ಮನಕ್ಲೇಷ. ವಿದೇಶ ವ್ಯವಹಾರಕ್ಕಾಗಿ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ: 6
ಕನ್ಯಾ: ಜನ ಬೆಂಬಲ ಹೆಚ್ಚುವುದು. ನಿರೀಕ್ಷೆಗೆ ತಕ್ಕಂತೆ ಆದಾಯ ಬರಲಿದೆ. ಸರ್ಕಾರಿ ಕೆಲಸಗಳಿಗಾಗಿ ಹೆಚ್ಚು ಓಡಾಟ ಮಾಡಬೇಕಾಗುವುದು. ಶುಭಸಂಖ್ಯೆ: 4
ತುಲಾ: ಯತ್ನ ಕಾರ್ಯದಲ್ಲಿ ಜಯ. ವ್ಯಾಪಾರದಲ್ಲಿ ಜಾಣ್ಮೆಯಿರಲಿ. ಮಹಿಳೆಯರಿಗೆ ಶುಭದಿನ. ಇಷ್ಟ ದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 1
ವೃಶ್ಚಿಕ: ತಾತ್ಕಾಲಿಕ ಸಮಸ್ಯೆ ಬಗೆಹರಿಯಲಿದೆ. ದಾಂಪತ್ಯದಲ್ಲಿ ಕಲಹ ಆಗಬಹುದು, ಸಮಾಧಾನ ಮುಖ್ಯ. ಸ್ತ್ರೀಯರಿಗೆ ಶುಭ. ದ್ರವ್ಯಲಾಭ. ಶುಭಸಂಖ್ಯೆ: 3
ಧನುಸ್ಸು: ಯೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ. ಅವಸರದಿಂದ ಅಪಾಯ ಸಾಧ್ಯತೆ. ದಾಂಪತ್ಯದಲ್ಲಿ ಸಾಮರಸ್ಯ ಇರುವುದು. ಶುಭಸಂಖ್ಯೆ: 7
ಮಕರ: ಅಧಿಕ ಪ್ರಮಾಣದಲ್ಲಿ ತಿರುಗಾಟ. ಸಗಟು ವ್ಯಾಪಾರದಲ್ಲಿ ಹೆಚ್ಚಿನ ಲಾಭ. ಅಕಾಲ ಭೋಜನ. ಅನ್ಯ ಜನರಲ್ಲಿ ವೈಮನಸ್ಸು. ಶುಭಸಂಖ್ಯೆ: 9
ಕುಂಭ: ಪರರಿಗೆ ಉಪಕಾರ ಮಾಡುವಿರಿ. ಋಣಬಾಧೆ ಕಾಡಬಹುದು. ನಂಬಿದ ಜನರಿಂದ ಮೋಸ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 2
ಮೀನ: ಕಾರ್ಯ ವಿಕಲ್ಪ. ನೆಮ್ಮದಿ ಇಲ್ಲದ ಜೀವನ ನಿಮ್ಮದಾಗಬಹುದು. ಕೋಪ ಜಾಸ್ತಿಯಾಗದಂತೆ ನಿಯಂತ್ರಿಸಿ. ವಿನಾಕಾರಣ ನಿಷ್ಠುರ. ಶುಭಸಂಖ್ಯೆ: 4