ಈ ರಾಶಿಯವರಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಬಹುದು...ಕುಲದೇವರನ್ನು ಪೂಜಿಸಿ

Nitya-Bhavishya-vvani-1-2-1
Published on

ಮೇಷ: ಕೌಟುಂಬಿಕ ಮಿತ್ರರ ಭೇಟಿಯಾಗುವಿರಿ. ಅನೇಕ ಮುಖ್ಯ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಶುಭಸಂಖ್ಯೆ: 7

ವೃಷಭ: ಸ್ವಂತ ಮನೆಯನ್ನು ಕಟ್ಟುವ ನಿರ್ಧಾರ ರೂಪುಗೊಳ್ಳಲಿದೆ. ಮನೆಯ ಸದಸ್ಯರೆಲ್ಲರ ಜತೆಗೆ ಬಿಡುವಾಗಿ ಮಾತಾಡಿ. ಶುಭಸಂಖ್ಯೆ: 5

ಮಿಥುನ: ಹತ್ತಿರದವರೇ ನೆಮ್ಮದಿಯ ಬದುಕಿನಲ್ಲಿ ಬಿರುಗಾಳಿಯಾಗಿ ಬಂದಾರು. ತಾಳ್ಮೆಯಿಂದ ವರ್ತಿಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 2

ಕಟಕ: ಬೇಕು-ಬೇಡಗಳ ಬಗೆಗೆ ಮೊದಲೇ ನಿರ್ಧಾರ ಮಾಡಿ. ಅನಗತ್ಯ ಖರ್ಚುಗಳನ್ನು ಜಾಣ್ಮೆಯಿಂದ ನಿಯಂತ್ರಿಸಿ. ಶುಭಸಂಖ್ಯೆ: 8

ಸಿಂಹ: ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಖಂಡಿತವಾಗಿ ಅಪನಂಬಿಕೆ ಇಡುವುದು ಬೇಡ. ದುರ್ಗಾದೇವಿ ಸ್ತೋತ್ರವನ್ನು ಪಠಣ ಮಾಡಿ. ಶುಭಸಂಖ್ಯೆ: 6

ಕನ್ಯಾ: ಅನಾರೋಗ್ಯದ ನಡುವೆಯೂ ಕೆಲಸವನ್ನು ನಿರ್ವಹಿಸಲು ಹೋಗದಿರಿ. ವಿಶ್ರಾಂತಿಯಿಂದ ಹೊಸ ಉತ್ಸಾಹ ಮೂಡಲಿದೆ. ಶುಭಸಂಖ್ಯೆ: 3

ತುಲಾ: ಉತ್ಸಾಹದಿಂದ ಆರಂಭಿಸಿದ ಕೆಲಸಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ಅಡೆತಡೆಗಳು ಎದುರಾಗಬಹುದು. ರಾಮರಕ್ಷಾ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 4

ವೃಶ್ಚಿಕ: ಕುಲದೇವರನ್ನು ಅನನ್ಯವಾದ ಭಕ್ತಿಯಿಂದ ಧ್ಯಾನಿಸಿ. ಹಲವು ಸಮಸ್ಯೆಗಳಿಗೆ ಧನಾತ್ಮಕ ಶಕ್ತಿಯಿಂದ ಪರಿಹಾರ ಲಭ್ಯ. ಶುಭಸಂಖ್ಯೆ: 1

ಧನಸ್ಸು: ಸದ್ಯದ ಸಂಕಷ್ಟದ ವೇಳೆ ನಿಜವಾದ ಬಾಂಧವರ ಪರಿಚಯವಾಗಲಿದೆ. ಗೆಲ್ಲುವುದಕ್ಕೆ ಹೇರಳ ಅವಕಾಶಗಳು ಕೂಡ ಸಿಗಲಿವೆ. ಶುಭಸಂಖ್ಯೆ: 9

ಮಕರ: ಅಪರಿಚಿತರೊಡನೆ ಅನಗತ್ಯ ಮಾತಾಡುವ ಪ್ರಸಂಗ ಬರಬಹುದು. ಸುಮ್ಮನಿದ್ದರೆ ಕೆಲಸಕ್ಕೆ ತೊಂದರೆಯಾಗದು. ಶುಭಸಂಖ್ಯೆ: 5

ಕುಂಭ: ದೊಡ್ಡ ಸಾಲ ಮಾಡುವಂತಹ ಆಲೋಚನೆಗಳು ಬರಬಹುದು. ಅತೀ ಅಗತ್ಯವಿದ್ದರಷ್ಟೇ ಅಲ್ಪ ಪ್ರಮಾಣದಲ್ಲಿ ಸಾಲ ಪಡೆಯಿರಿ. ಶುಭಸಂಖ್ಯೆ: 2

ಮೀನ: ಇಕ್ಕಟ್ಟಿನ ಸಂದರ್ಭಗಳು ಎದುರಾಗಬಹುದು. ಕುಲದೇವರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ. ಇದರಿಂದ ನೆಮ್ಮದಿ ಲಭಿಸಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net