ಈ ರಾಶಿಯವರಿಗೆ ಇಂದು ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಆತ್ಮೀಯರ ಭೇಟಿಯಿಂದ ಸಂತಸ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ. ಶುಭಸಂಖ್ಯೆ: 9

ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ ಉಂಟಾಗಬಹುದು. ಶುಭಸಂಖ್ಯೆ: 5

ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ ತರುವ ಘಟನೆ. ಮನಸ್ಸಿನ ಚಂಚಲತೆಯೇ ಸಮಸ್ಯೆಗಳಿಗೆ ಕಾರಣವಾದೀತು. ಶುಭಸಂಖ್ಯೆ: 1

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ವಸ್ತುಲಾಭ ಸಾಧ್ಯತೆ. ಶುಭಸಂಖ್ಯೆ: 7

ಸಿಂಹ: ಮನಸ್ಸಿಗೆ ಕ್ಲೇಶ. ಸಾರ್ವಜನಿಕವಾಗಿ ಅವಮಾನ ಸಾಧ್ಯತೆ. ತಾಳ್ಮೆಯಿಂದಿರಿ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ: 3

ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತವಾಗಿ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಬಂಧುಗಳ ಭೇಟಿ. ಶುಭಸಂಖ್ಯೆ: 1

ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಶುಭಸಂಖ್ಯೆ:9

ವೃಶ್ಚಿಕ: ಎಲ್ಲ ಕೆಲಸಗಳಲ್ಲಿ ವಿಲಂಬ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಪರಿಶ್ರಮಕ್ಕೆ ಸರಿಯಾದ ಕಾರ್ಯಸಿದ್ಧಿ. ಶುಭಸಂಖ್ಯೆ: 7

ಧನುಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 4

ಮಕರ: ದೈಹಿಕ ಶ್ರಮ. ಮಕ್ಕಳ ಪ್ರಗತಿಯ ಬಗ್ಗೆ ನಿರಾಸೆ ಕಾಡೀತು. ಒತ್ತಡದ ಜೀವನ. ಸ್ನಾಯುಗಳಿಗೆ ಸಂಬಂಧಪಟ್ಟಂತೆ ನೋವು. ಶುಭಸಂಖ್ಯೆ: 2

ಕುಂಭ: ಶತ್ರುಗಳಿಂದ ತೊಂದರೆ. ದೃಢತೆ ಇಲ್ಲ. ಆಹಾರ ಸೇವಿಸುವಾಗ ಎಚ್ಚರ, ಮಿತಿ ಇರಲಿ. ಆಪ್ತರ ಮಾತಿಗೆ ಮನ್ನಣೆ ಕೊಡಿ. ಶುಭಸಂಖ್ಯೆ: 5

ಮೀನ: ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಉತ್ತಮ ಭೋಜನ. ಧನಲಾಭವೂ ಆಗಲಿದೆ. ಪಿತ್ರಾರ್ಜಿತ ಆಸ್ತಿಗೆ ವಿವಾದ ಅಂತ್ಯ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net