

ಮೇಷ: ಒಂದೇ ಬಾರಿಗೆ ವಿವಿಧ ವಿಚಾರಗಳ ಕುರಿತು ಗಮನವನ್ನು ಕೊಡಬೇಕಾಗುತ್ತದೆ. ಕೆಲಸವನ್ನು ಕೂಡ ಆನಂದಿಸಿ. ಗೆಲುವಿದೆ. ಶುಭಸಂಖ್ಯೆ: 6
ವೃಷಭ: ವಿಭಿನ್ನವಾದ ಧೋರಣೆಗಳ ಜನರೊಡನೆ ಹೊಂದಿಕೊಳ್ಳಲು ಶ್ರಮಿಸುತ್ತೀರಿ. ಧೈರ್ಯದಿಂದಲೇ ಸಂದಿಗ್ಧತೆಯನ್ನು ಎದುರಿಸಿ. ಶುಭಸಂಖ್ಯೆ: 8
ಮಿಥುನ: ಸಕಾರಾತ್ಮಕ ನಿರ್ಣಯಗಳನ್ನು ನಾಳೆಗೆ ಮುಂದೂಡದಿರಿ. ಇಂದಿನ ವೈಫಲ್ಯವೂ ನಾಳೆಗೆ ಆಶಾಕಿರಣವಾಗುತ್ತದೆ. ಶುಭಸಂಖ್ಯೆ: 2
ಕಟಕ: ಎದುರಿಗೇ ಇರುವ ಬಿಕ್ಕಟ್ಟನ್ನು ಹಾಗೆಯೇ ಬಿಟ್ಟುಬಿಡದಿರಿ. ಅದನ್ನು ಸರಿಪಡಿಸಿದರೆ ನಿಶ್ಚಿತವಾಗಿಯೂ ಯಶಸ್ಸು ಲಭ್ಯ. ಶುಭಸಂಖ್ಯೆ: 7
ಸಿಂಹ: ವಿರೋಧಿಗಳು ಬಲಿಷ್ಠರಾಗಿದ್ದಾರೆ. ಹೀಗಾಗಿ ಅಪರೂಪದ ಚಾತುರ್ಯ ಪ್ರದರ್ಶಿಸಿಯೇ ಸಾಫಲ್ಯ ಪಡೆಯಬೇಕು. ಶುಭಸಂಖ್ಯೆ: 3
ಕನ್ಯಾ: ಧಾವಂತದ, ಒತ್ತಡದ ಬದುಕು ಬೇಸರ ತಂದಿರಬಹುದು. ಕೆಲಸದಿಂದ ವಿಶ್ರಾಂತಿ ಪಡೆದರೆ ಸಂತಸಕ್ಕೆ ದಾರಿ ಇದೆ. ಶುಭಸಂಖ್ಯೆ: 1
ತುಲಾ: ಜೀವನದ ಸಮೃದ್ಧಿಗೆ, ಲಾಭಕ್ಕೆ ಅವಕಾಶವು ಸುಗಮವಾಗಿದೆ. ನಿಮಗೆ ಇಷ್ಟದೇವತೆಯ ಕೃಪಾಶೀರ್ವಾದವೂ ಲಭಿಸುತ್ತದೆ. ಶುಭಸಂಖ್ಯೆ: 5
ವೃಶ್ಚಿಕ: ಅನಿರೀಕ್ಷಿತ ಪ್ರಯಾಣವೊಂದು ತೊಂದರೆ ಉಂಟುಮಾಡುತ್ತದೆ. ಅನುಕೂಲಕರವಾದ ಸಿದ್ಧಿಯನ್ನೂ ತಂದುಕೊಡಲಿದೆ. ಶುಭಸಂಖ್ಯೆ: 9
ಧನುಸ್ಸು: ಮನೆಯಲ್ಲಿ ಕಿರಿಕಿರಿ ಎದುರಿಸಬೇಕಾಗುತ್ತದೆ. ತಾಳ್ಮೆಯೇ ಆಯುಧವಾಗಿರಲಿ. ಕುಲದೇವರನ್ನು ಸ್ಮರಿಸಿ. ಒಳಿತು ಉಂಟಾಗಲಿದೆ. ಶುಭಸಂಖ್ಯೆ: 4
ಮಕರ : ವ್ಯಾಪಾರೋದ್ಯಮದಲ್ಲಿ ಏರಿಳಿತಗಳು ಸಂಭವಿಸುತ್ತವೆ. ಆದರೂ ಪಾಲುದಾರರ ಜತೆ ವಾದವಿವಾದಗಳು ಬೇಡ. ಶುಭಸಂಖ್ಯೆ: 6
ಕುಂಭ: ವೈವಾಹಿಕ ಜೀವನದ ಏಳಿಗೆಗೆ ಸಕಾಲವಿದು. ವಿವಾಹಾಪೇಕ್ಷಿಗಳಿಗೆ ಮದುವೆಯ ನಿಶ್ಚಯಕ್ಕೆ ಬೇಗನೆ ಕಾಲ ಕೂಡಿ ಬರಲಿದೆ. ಶುಭಸಂಖ್ಯೆ: 8
ಮೀನ: ತುಂಬಿರದ ಖಜಾನೆಯ ಕೊಡ ತುಂಬಬಹುದು. ಧನಲಾಭ ಕೂಡ ಉಂಟಾಗಲಿದೆ. ಭಕ್ತಿಯಿಂದ ಮಹಾಲಕ್ಷ್ಮಿಯ ಸ್ತುತಿ ಮಾಡಿ. ಶುಭಸಂಖ್ಯೆ: 2