ಈ ರಾಶಿಯವರಿಗಿಂದು ಹಿತಶತ್ರುಗಳ ಬಾಧೆ, ಸ್ತ್ರೀಯರ ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಾಲಬಾಧೆ ಕಾಡಬಹುದು. ಪಾಪಬುದ್ಧಿ. ಚರ್ಮವ್ಯಾಧಿ. ಕುಟುಂಬ ಸೌಖ್ಯ. ದಾಂಪತ್ಯದಲ್ಲಿ ಪ್ರೀತಿ. ವ್ಯಾಪಾರದಲ್ಲಿ ಚೇತರಿಕೆ. ಶುಭಸಂಖ್ಯೆ: 9

ವೃಷಭ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಮನಸ್ಸಿನಲ್ಲಿ ಭಯ. ಶತ್ರು ಬಾಧೆ. ಅನಗತ್ಯ ಸುತ್ತಾಟ ಮಾಡದೇ ಇರುವುದು ಒಳ್ಳೆಯದು. ಶುಭಸಂಖ್ಯೆ: 5

ಮಿಥುನ: ಹಣಕಾಸಿನ ವಿಷಯದಲ್ಲಿ ಎಚ್ಚರ. ಆಹಾರ ಸೇವನೆಯಲ್ಲಿ ಜಾಗ್ರತೆಯಿರಲಿ. ಮಾನಸಿಕ ಚಿಂತೆ. ಅಕಾಲ ಭೋಜನ ಆದೀತು. ಶುಭಸಂಖ್ಯೆ: 8

ಕಟಕ: ಮಾತಿನ ಮೇಲೆ ಹಿಡಿತವಿರಲಿ. ತಾಳ್ಮೆ ತೀರ ಅಗತ್ಯವಾಗಿ ಬೇಕು. ಮಕ್ಕಳಿಗೆ ಅನಾರೋಗ್ಯ ಕಾಡಬಹುದು. ವಿಪರೀತ ಖರ್ಚು. ಶುಭಸಂಖ್ಯೆ: 1

ಸಿಂಹ: ಕಾರ್ಯ ವಿಕಲ್ಪ. ಅಲ್ಪ ಆದಾಯವಿದ್ದರೂ ಅಧಿಕ ಖರ್ಚು ತಲೆದೋರುವುದು. ಅಭಿವೃದ್ಧಿ ಕುಂಠಿತ. ಹೇಳಿಕೆ ಮಾತನ್ನು ಕೇಳಬೇಡಿ. ಶುಭಸಂಖ್ಯೆ: 6

ಕನ್ಯಾ: ಖಾಸಗಿ ಕಂಪನಿಗಳಿಗೆ ನಷ್ಟ. ಗುರು ಹಿರಿಯರಲ್ಲಿ ಭಕ್ತಿ ತೋರಿಸುವಿರಿ. ಶತ್ರು ನಾಶವಾಗಿ ನೆಮ್ಮದಿ. ಮಾನಸಿಕ ಒತ್ತಡ. ಶುಭಸಂಖ್ಯೆ: 8

ತುಲಾ: ವಿನಾಕಾರಣ ಕಲಹ. ಚಂಚಲ ಮನಸ್ಸು. ವಿದ್ಯಾರ್ಥಿಗಳಲ್ಲಿ ಗೊಂದಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಮೋಸ. ಶುಭಸಂಖ್ಯೆ: 8

ವೃಶ್ಚಿಕ: ಅತಿಯಾದ ಕೋಪ ಒಳ್ಳೆಯದಲ್ಲ. ಆರೋಗ್ಯದಲ್ಲಿ ವ್ಯತ್ಯಾಸ. ದೃಷ್ಟಿ ದೋಷದಿಂದ ತೊಂದರೆಯಾಗುವುದು. ಮನಕ್ಲೇಷ. ಶುಭಸಂಖ್ಯೆ: 4

ಧನುಸ್ಸು: ತಾಯಿಯಿಂದ ಲಾಭ. ಸ್ನೇಹಿತರಿಂದ ನೆರವು. ಸುಖ ಭೋಜನ. ಪ್ರೀತಿಯ ಸಮಾಗಮ. ಶರೀರದಲ್ಲಿ ಸ್ವಲ್ಪ ತಳಮಳ. ಶುಭಸಂಖ್ಯೆ: 8

ಮಕರ: ಅಲ್ಪ ಪ್ರಗತಿ. ಉದರ ಬಾಧೆ. ವ್ಯರ್ಥ ಧನಹಾನಿ. ಪುತ್ರರಲ್ಲಿ ದ್ವೇಷ. ಯಾರನ್ನೂ ನಂಬಬೇಡಿ. ಆಲಸ್ಯ ಮನೋಭಾವ ಬಿಡಿ. ಶುಭಸಂಖ್ಯೆ: 2

ಕುಂಭ: ವಾದ-ವಿವಾದ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ವೈರಿಗಳಿಂದ ದೂರವಿರಿ. ಪರಿಶ್ರಮಕ್ಕೆ ತಕ್ಕ ವರಮಾನ ಬರುವುದು. ಶುಭಸಂಖ್ಯೆ: 2

ಮೀನ: ತಂಪು ಪಾನೀಯಗಳಿಂದ ಅನಾರೋಗ್ಯ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಹಿತಶತ್ರುಗಳ ಬಾಧೆ. ಸ್ತ್ರೀಯರ ಸಹಾಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net