

ಮೇಷ: ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ. ಆಕಸ್ಮಿಕ ಅವಘಡ ಸಂಭವಿಸೀತು. ಉದ್ಯೋಗದಲ್ಲಿ ಆಲಸ್ಯ ಕಾಡಲಿದೆ. ಶುಭಸಂಖ್ಯೆ:1
ವೃಷಭ: ಪತ್ರ ವ್ಯವಹಾರಗಳಲ್ಲಿ ಜಾಗರೂಕಾಗಿರಬೇಕು. ವಾಹನ, ಗೃಹ ಮತ್ತು ಸ್ಥಳ ಬದಲಾವಣೆ, ಅಣ್ಣನ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 9
ಮಿಥುನ: ಕೌಟುಂಬಿಕವಾಗಿ ಅನುಕೂಲ. ಆರೋಗ್ಯದಲ್ಲಿ ಏರುಪೇರು ಆದೀತು. ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಶುಭಸಂಖ್ಯೆ: 8
ಕಟಕ: ಚಿನ್ನ ಮತ್ತು ಲೋಹದ ವರ್ತಕರಿಗೆ ಧನಾಗಮನ. ಮಕ್ಕಳಿಂದ ಕಿರಿಕಿರಿ. ರೋಗ ಬಾಧೆ. ಸಾಲಗಾರರಿಂದ, ಶತ್ರುಗಳಿಂದ ಮುಕ್ತಿ. ಶುಭಸಂಖ್ಯೆ: 2
ಸಿಂಹ: ಅನಗತ್ಯ ಖರ್ಚು ಮಾಡಬೇಕಾಗುವುದು. ಮನೋರೋಗಗಳು ಕಾಡಬಹುದು. ಮಕ್ಕಳಿಗಾಗಿ ಅಗತ್ಯ ವಸ್ತುಗಳ ಖರೀದಿ. ಶುಭಸಂಖ್ಯೆ: 3
ಕನ್ಯಾ: ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಕಾಣದ ಪರಿಹಾರ. ಸ್ಥಿರಾಸ್ತಿ ನಷ್ಟ. ಸಹೋದರಿಯಿಂದ ಅನುಕೂಲ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 7
ತುಲಾ: ಉದ್ಯೋಗ ಸಮಸ್ಯೆಯಿಂದ ಮುಕ್ತಿ. ಆರ್ಥಿಕವಾಗಿ ಸಂತೃಪ್ತಿ. ಕುಟುಂಬದಲ್ಲಿ ಕಿರಿಕಿರಿ. ಸಮಾಧಾನಚಿತ್ತದಿಂದ ವ್ಯವಹರಿಸಿ. ಶುಭಸಂಖ್ಯೆ: 5
ವೃಶ್ಚಿಕ: ಉದ್ಯೋಗ ನಿಮಿತ್ತ ದೂರ ಪ್ರಯಾಣ. ಆರೋಗ್ಯ ಸಮಸ್ಯೆ. ಕಚೇರಿಯಲ್ಲಿ ಬಡ್ತಿ ಸಾಧ್ಯತೆ. ತಂದೆಯಿಂದ ಧನಾಗಮನ. ಶುಭಸಂಖ್ಯೆ: 2
ಧನುಸ್ಸು: ದೀರ್ಘಕಾಲದ ಆರ್ಥಿಕ ಸಮಸ್ಯೆಯಿಂದ ಮುಕ್ತಿ. ನೀರಿನಿಂದ ತೊಂದರೆ. ಕೌಟುಂಬಿಕ ಸಮಸ್ಯೆ. ಬಂಧುಗಳೊಂದಿಗೆ ಕಲಹ. ಶುಭಸಂಖ್ಯೆ: 7
ಮಕರ: ದೈವ ಕಾರ್ಯಗಳಿಗಾಗಿ ಖರ್ಚು. ಸಹೋದರನಿಂದ ಕಿರಿಕಿರಿ. ದಾಂಪತ್ಯದಲ್ಲಿ ಸಮಸ್ಯೆ. ರಾಜಕೀಯ ನಾಯಕರಿಗೆ ಅಶುಭ ಫಲ. ಶುಭಸಂಖ್ಯೆ: 4
ಕುಂಭ: ಆರೋಗ್ಯದಲ್ಲಿ ಚೇತರಿಕೆ. ಮಾನಸಿಕ ಸಮತೋಲನ ಕಾಯ್ದುಕೊಳ್ಳಿ. ಸಾಲ ಬಾಧೆಯಿಂದ ಮುಕ್ತಿ, ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ 5
ಮೀನ: ಮಿತ್ರರೇ ಶತ್ರುಗಳಾಗುವರು, ಕೆಲಸ ಕಾರ್ಯಗಳಿಗೆ ಸಾಲ ಮಾಡುವ ಸನ್ನಿವೇಶ, ಹೆಣ್ಣುಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ 7