

ಮೇಷ: ಸ್ನೇಹಿತರಿಂದ ಸಹಾಯ ಅಪೇಕ್ಷಿಸದೆ ಆತ್ಮಾಭಿಮಾನದಿಂದಿರಿ. ಧನಹಾನಿ. ದಿನಾಂತ್ಯಕ್ಕೆ ಬಂಧುಗಳ ಆಗಮನ. ಶುಭಸಂಖ್ಯೆ: 4
ವೃಷಭ: ಮನೆಯಲ್ಲಿ ಆಹ್ಲಾದಕರ ವಾತಾವರಣ. ಕೈಕೊಂಡ ಕೆಲಸದಲ್ಲಿ ಕಾರ್ಯಸಿದ್ಧಿ. ಹಿತಕರ ವಿದ್ಯಮಾನಗಳು ನಡೆಯುತ್ತವೆ. ಶುಭಸಂಖ್ಯೆ: 5
ಮಿಥುನ: ಸಾಲಗಾರರಿಂದ ಕಿರಿಕಿರಿ ಸಾಧ್ಯತೆ. ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದು ಸಕಾಲ. ಅವ್ಯಕ್ತ ಭೀತಿ ನಿಮ್ಮನ್ನು ಕಾಡಬಹುದು. ಶುಭಸಂಖ್ಯೆ: 7
ಕಟಕ: ಮಾಡದ ತಪ್ಪಿಗೆ ಜೀವನದಲ್ಲಿ ಅಪವಾದಗಳು. ಕಾರ್ಯಸಾಧನೆಯ ಸಾಧ್ಯತೆ ಕಡಿಮೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8
ಸಿಂಹ: ಕುಟುಂಬದಲ್ಲಿ ಮನಸ್ತಾಪ. ಸ್ಪರ್ಧಾಳುಗಳಿಗೆ ಅಂತಿಮ ಹಂತದಲ್ಲಿ ಸೋಲು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಯಶ. ಶುಭಸಂಖ್ಯೆ: 7
ಕನ್ಯಾ: ವ್ಯಾಪಾರ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ವಿಶೇಷ ಅಧಿಕಾರ ಪ್ರಾಪ್ತಿ. ಮನೋಧೈರ್ಯ. ಬಂಧು ಮಿತ್ರರ ಸಹಾಯ. ಶುಭಸಂಖ್ಯೆ: 3
ತುಲಾ: ಟೀಕಾಕಾರರಿಗೆ ನಿಮ್ಮ ಕಾರ್ಯವೈಖರಿಯಿಂದಲೇ ಉತ್ತರ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಧನನಷ್ಟ. ಶುಭಸಂಖ್ಯೆ: 2
ವೃಶ್ಚಿಕ: ಮನಸ್ಸಿಗೆ ನೋವುಂಟಾಗುವ ಘಟನೆಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಪ್ರತಿಭಾನ್ವಿತರಿಗೆ ಅವಕಾಶ. ಶುಭಸಂಖ್ಯೆ: 6
ಧನುಸ್ಸು: ತೃತೀಯದ ಗುರುವಿನಿಂದ ಆಸ್ತಿ ವಿವಾದ ಇತ್ಯರ್ಥ. ಆರೋಗ್ಯ ಕೆಡಬಹುದು. ವೈದ್ಯರ ಸಲಹೆ ಪಾಲಿಸಿ. ಗಾಯಕರಿಗೆ ಲಾಭ. ಶುಭಸಂಖ್ಯೆ: 3
ಮಕರ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಬೆಳವಣಿಗೆ. ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ದಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಶಾಕಿರಣ. ಶುಭಸಂಖ್ಯೆ: 7
ಕುಂಭ: ಸಹೋದ್ಯೋಗಿಗಳು ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಸಂಗಾತಿಯಿಂದ ಆತ್ಮವಿಶ್ವಾಸಕ್ಕೆ ಪೆಟ್ಟು. ಶುಭಸಂಖ್ಯೆ: 6
ಮೀನ: ದ್ವಾದಶ ಗುರುವಿನಿಂದ ವಿಫಲತೆ ಕಾಡಬಹುದು. ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಅನಿರೀಕ್ಷಿತ ಧನ ನಷ್ಟ ಸಾಧ್ಯತೆ. ಶುಭಸಂಖ್ಯೆ: 6