ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭವಾಗಲಿದೆ

Nitya-Bhavishya-vvani-1-2-1
Published on

ಮೇಷ: ಹೊಸ ಯೋಜನೆ ಲಾಭ ತಂದೀತು. ಕುಟುಂಬದೊಂದಿಗೆ ನಿಮ್ಮ ಸಂವಹನ ಸಂತೋಷ ಕೊಡುತ್ತದೆ. ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 9

ವೃಷಭ: ಬಿಡುವಿಲ್ಲದ ಕೆಲಸಗಳಿಂದ ದಣಿವು. ಹಣದ ಕಳ್ಳತನ ಸಾಧ್ಯತೆ. ಪ್ರಭಾವಿಗಳೊಂದಿಗೆ ನಿಕಟ ಸಂಪರ್ಕ. ದುಶ್ಚಟದಿಂದ ಕಿರಿಕಿರಿ. ಶುಭಸಂಖ್ಯೆ: 5

ಮಿಥುನ: ಮುಂಗೋಪ ಮತ್ತು ಅಸಹನೆ ಸಮಸ್ಯೆಗೆ ಕಾರಣವಾದೀತು. ತೃಪ್ತಿಕರ ಫಲಿತಾಂಶಕ್ಕೆ ಸರಿಯಾದ ಕಾರ್ಯಯೋಜನೆ ರೂಪಿಸಿ. ಶುಭಸಂಖ್ಯೆ: 8

ಕಟಕ: ನಿಮ್ಮ ಆಲೋಚನೆಗಳ ಮೇಲೆ ಸ್ನೇಹಿತನಿಂದ ಪ್ರಭಾವ. ನಿರ್ಧಾರ ಬದಲಾವಣೆ ಸಾಧ್ಯತೆ. ಕಾಯಕವೇ ಕೈಲಾಸ. ಯಶ ಸಿಗುತ್ತದೆ. ಶುಭಸಂಖ್ಯೆ: 4

ಸಿಂಹ: ಕಚೇರಿಯಲ್ಲಿ ಸಹನೆಯಿರಲಿ. ಗಾಯಕರಿಗೆ ಪೋ›ತ್ಸಾಹ. ವಿದ್ಯಾರ್ಥಿಗಳಿಗೆ ಪ್ರಗತಿ. ವ್ಯಕ್ತಿತ್ವ, ನೋಟವನ್ನು ಬದಲಾಯಿಸಿಕೊಳ್ಳಿ. ಶುಭಸಂಖ್ಯೆ: 1

ಕನ್ಯಾ: ಕೆಲಸಗಾರರ ಮೇಲೆ ಒತ್ತಡ ಹೇರಬೇಡಿ. ವಾಹನ ಚಾಲನೆಯಲ್ಲಿ ಎಚ್ಚರ. ಕುಟುಂಬದಲ್ಲಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 4

ತುಲಾ: ಹತಾಶೆ ಮತ್ತು ಕೆಟ್ಟ ನಿರ್ಧಾರ ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಸಾರ್ವಜನಿಕವಾಗಿ ಮಧುರ ಬಾಂಧವ್ಯಕ್ಕೆ ಒತ್ತುಕೊಡಿ. ಶುಭಸಂಖ್ಯೆ: 8

ವೃಶ್ಚಿಕ: ಮಂದಹಾಸದಿಂದ ಇರಿ. ಸಮಸ್ಯೆಗಳು ಪರಿಹಾರವಾಗುತ್ತವೆ. ವ್ಯಾಪಾರಿಗಳಿಗೆ ನಷ್ಟ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಶುಭಸಂಖ್ಯೆ: 4

ಧನುಸ್ಸು: ಅವಕಾಶವಾದಿಗಳು ದುರುಪಯೋಗ ಮಾಡಿಕೊಂಡಾರು. ಕಚೇರಿಯಲ್ಲಿ ಸಹನೆಯಿಂದಿರಿ. ಸಮಯ ವ್ಯರ್ಥಮಾಡಬೇಡಿ. ಶುಭಸಂಖ್ಯೆ: 6

ಮಕರ: ಕೆಲಸಕ್ಕೆ ಹಿರಿಯರಿಂದ ವಿಪರೀತ ಒತ್ತಡ. ಏಕಾಗ್ರತೆಗೆ ತೊಂದರೆ. ಅಧಿಕ ಖರ್ಚು. ವೈಯಕ್ತಿಕ ಜೀವನಕ್ಕೆ ಪ್ರಾಶಸ್ತ್ಯ ಕೊಡಿ. ಶುಭಸಂಖ್ಯೆ: 2

ಕುಂಭ: ಅಹಂಭಾವದ ಪ್ರದರ್ಶನ ಬೇಡ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಹಣದ ಅಪವ್ಯಯ. ಆಸ್ತಿ ವಿವಾದ ತಾರಕಕ್ಕೆ. ಶುಭಸಂಖ್ಯೆ:1

ಮೀನ: ಏಕಾದಶದ ಶನಿಯಿಂದ ಕಷ್ಟ. ಆರ್ಥಿಕ ವಿಚಾರದಲ್ಲಿ ಗೊಂದಲ. ನಿವೇಶನ ಖರೀದಿ ಸಾಧ್ಯತೆ. ಮಗಳ ಮದುವೆ ಯತ್ನ ಸಫಲ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net