ನಿತ್ಯ ಭವಿಷ್ಯ: ಈ ರಾಶಿಯವರು ಸಂಬಳದ ಬಗ್ಗೆ ಮೇಲಧಿಕಾರಿಗಳೊಂದಿಗೆ ಜಗಳ ಮಾಡುವ ಸಾಧ್ಯತೆ

Nitya-Bhavishya-vvani-1-2-1
Published on

ಮೇಷ: ನೀವು ದ್ವಿಚಕ್ರ ವಾಹನ ಓಡಿಸುವವರಾದರೆ ಸಾರ್ವಜನಿಕ ವಾಹನ ಬಳಕೆ ಉತ್ತಮ. ಯಾರ ಜತೆಗೂ ಜಗಳ ಮಾಡಬೇಡಿ. ಅದೃಷ್ಟಸಂಖ್ಯೆ: 9

ವೃಷಭ: ನಿಮ್ಮ ಚಿಕ್ಕ ಬದಲಾವಣೆ ದೊಡ್ಡ ಲಾಭ ತರಬಹುದು. ಇಷ್ಟವಿಲ್ಲದ ವ್ಯಕ್ತಿಯನ್ನು ಹೊಗಳಬೇಕಾಗಬಹುದು. ಅದೃಷ್ಟಸಂಖ್ಯೆ: 4

ಮಿಥುನ: ಯಾರಿಗೂ ಸಲಹೆ ಸೂಚನೆ ಕೊಡಬೇಡಿ. ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಅದೃಷ್ಟಸಂಖ್ಯೆ: 2

ಕಟಕ: ಪ್ರಪಂಚದ ಕಣ್ಣಿಗೆ ನೀವು ಸಂತೋಷದಲ್ಲಿದ್ದೀರಿ. ಆದರೆ ನಿಮ್ಮೊಳಗೆ ಚಿಂತೆಯಿದೆ. ಆರೋಗ್ಯದ ಬಗ್ಗೆ ಕೂಡ ಗಮನವಿರಲಿ. ಅದೃಷ್ಟಸಂಖ್ಯೆ: 5

ಸಿಂಹ: ಬಂಗಾರ ಹಾಗೂ ಹಾಲಿನ ಉತ್ಪನ್ನಗಳ ವ್ಯಾಪಾರಿಗಳಿಗೆ ಲಾಭವಿದೆ. ಹಳೆಯ ಸಾಲಗಳನ್ನು ಬೇಗ ತೀರಿಸಿ. ಅದೃಷ್ಟಸಂಖ್ಯೆ: 3

ಕನ್ಯಾ: ಹಣದ ಉಳಿತಾಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೀರಿ. ಅನಿರೀಕ್ಷಿತ ಕೆಲಸಗಳು ನಿಮಗೆ ಕೀರ್ತಿ ತರುತ್ತವೆ. ಅದೃಷ್ಟಸಂಖ್ಯೆ: 1

ತುಲಾ: ಹಣದ ವಿಚಾರದಲ್ಲಿ ಪ್ರಮಾದವಾಗುವ ಸಾಧ್ಯತೆ. ಉದ್ಯೋಗ ಕೊಡಿಸುವೆನೆನ್ನುವವರಿಗೆ ಹಣ ಕೊಡಲು ಹೋಗದಿರಿ. ಅದೃಷ್ಟಸಂಖ್ಯೆ: 5

ವೃಶ್ಚಿಕ: ಹಳೆಯ ಚಿಂತೆ ಇನ್ನೂ ಹಾಗೆಯೇ ಇದೆ. ಅದಕ್ಕೆ ಪರಿಹಾರ ದೊರೆಯಲು ತಪ್ಪದೆ ಗಣೇಶನನ್ನು ಪ್ರಾರ್ಥಿಸಿ. ಅದೃಷ್ಟಸಂಖ್ಯೆ: 6

ಧನಸ್ಸು: ಹೊಸ ಕೆಲಸಗಳನ್ನು ಮಾಡಲು ಖಂಡಿತ ಹಿಂಜರಿಯದಿರಿ. ಹನುಮನನ್ನು ನೆನೆದು ಮುನ್ನಡೆದರೆ ಜಯವಿದೆ. ಅದೃಷ್ಟಸಂಖ್ಯೆ: 2

ಮಕರ: ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಬೇಕೆಂಬ ನಿಮ್ಮ ಲೆಕ್ಕಾಚಾರ ಬುಡಮೇಲಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಅದೃಷ್ಟಸಂಖ್ಯೆ: 4

ಕುಂಭ: ನಿಮಗೆ ಜಾಸ್ತಿಯೇ ಸಿಟ್ಟು ಬರುತ್ತದೆ. ಹತ್ತಿರ ಶಿವನ ದೇವಾಲಯ ಇದ್ದಲ್ಲಿ ಪೂಜೆ ಮಾಡಿಸಿಕೊಂಡು ಬನ್ನಿ. ಅದೃಷ್ಟಸಂಖ್ಯೆ: 7

ಮೀನ: ಸಂಬಳದ ಬಗ್ಗೆ ಮೇಲಧಿಕಾರಿಗಳೊಂದಿಗೆ ಜಗಳ ಮಾಡುವ ಸಾಧ್ಯತೆ. ಆದಷ್ಟು ಶಾಂತವಾಗಿರಲು ಯತ್ನಿಸಿ. ಅದೃಷ್ಟಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net