

ಮೇಷ: ನೆರವಿನ ವಿಚಾರದಲ್ಲಿ ತಮಾಷೆ ಮಾಡಬೇಡಿ. ಸಾಧ್ಯವಾಗುವುದಿದ್ದರೆ ಮಾತ್ರವಷ್ಟೇ ನೆರವು ನೀಡುವುದಾಗಿ ಭರವಸೆ ನೀಡಿ. ಶುಭಸಂಖ್ಯೆ: 6
ವೃಷಭ: ಬಾಳಸಂಗಾತಿ ಸಲಹೆಗಳನ್ನು ನೀಡಲಿದ್ದಾರೆ. ನಿಮ್ಮ ಚಿಂತನೆ ಹಾಗೂ ಅವರ ಸಲಹೆ ಎರಡೂ ಸೇರಿ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 8
ಮಿಥುನ: ನಂಬಿ ಕೆಟ್ಟವರಿಲ್ಲ ಎಂಬ ಮಾತಿದೆ. ಅದರಂತೆ ನಿಮ್ಮನ್ನು ನಂಬಿಕೊಂಡವರಿಗೂ ಒಳಿತನ್ನು ಉಂಟುಮಾಡಿದರೆ ಲಾಭವಿದೆ. ಶುಭಸಂಖ್ಯೆ: 2
ಕಟಕ: ನಿಮ್ಮ ವರ್ಚಸ್ವಿ ವ್ಯಕ್ತಿತ್ವದಿಂದಾಗಿ ಅನೇಕ ಪ್ರಭಾವಿ ಜನರೂ ಸಹಾಯ ಮಾಡಲಿದ್ದಾರೆ. ಅದೃಷ್ಟಶಾಲಿಯಾಗುವಿರಿ. ಶುಭಸಂಖ್ಯೆ: 4
ಸಿಂಹ: ಹೊಸ ಊರಿನ ಪ್ರವಾಸಕ್ಕೆ ಸಿದ್ಧತೆ ನಡೆಸುವ ಸಂದರ್ಭ ಒದಗಿಬರಲಿದೆ. ಇದು ಸುದೀರ್ಘ ವಿರಾಮಕ್ಕೆ ಶುಭ ಕಾಲವಾಗಿದೆ. ಶುಭಸಂಖ್ಯೆ: 9
ಕನ್ಯಾ: ಸುಳ್ಳು ವಿಚಾರಗಳು ಎಷ್ಟು ಸೆಳೆಯುವಂತಿದ್ದರೂ ಕೆಡುಕನ್ನೇ ಉಂಟುಮಾಡಲಿವೆ. ಖಂಡಿತವಾಗಿ ಅವಸರ ಮಾಡಲು ಹೋಗದಿರಿ. ಶುಭಸಂಖ್ಯೆ: 7
ತುಲಾ: ಆರೋಗ್ಯದ ವಿಚಾರದಲ್ಲಿ ಶೀಘ್ರ ಪ್ರಗತಿಗೆ ಮಾರ್ಗ ಲಭ್ಯವಾಗುತ್ತದೆ. ಆದರೂ ಯೋಗ್ಯ ವೈದ್ಯರನ್ನು ಸಂದರ್ಶಿಸಿ. ಶುಭಸಂಖ್ಯೆ: 3
ವೃಶ್ಚಿಕ: ಈಗಾಗಲೇ ನೀವು ಸಾಲದ ಒಳಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಹೊಸ ಸಾಲ ಮಾಡಬೇಡಿ. ಗ್ರಹಸ್ಥಿತಿ ಸ್ವಲ್ಪ ನಾಜೂಕಾಗಿದೆ. ಶುಭಸಂಖ್ಯೆ: 5
ಧನುಸ್ಸು: ದೂರದ ಬಂಧುಗಳು ತಲೆನೋವು ತರುವ ಸಾಧ್ಯತೆಗಳು ಹೆಚ್ಚು. ಕಾರ್ಯಭಂಗವಾಗದಂತೆ ಎಚ್ಚರ ವಹಿಸುವುದು ಉತ್ತಮ. ಶುಭಸಂಖ್ಯೆ: 1
ಮಕರ: ಹಿರಿಯರೊಬ್ಬರಿಂದ ಸಹಾಯದಿಂದ ಹೊಸ ಕೆಲಸ ಸಿಗುವ ಸಾಧ್ಯತೆಯಿದೆ. ವಿನಮ್ರತೆಯನ್ನೇನೂ ಬಿಡದಿರಿ. ಶುಭಸಂಖ್ಯೆ: 6
ಕುಂಭ: ಶರಣಾಗತಿಯ ಮನೋಭಾವದಿಂದ ಶಿವನಾಮವನ್ನು ಸ್ಮರಿಸಿ. ಸಂತಸಮಯ ವರ್ತಮಾನ ರೂಪುಗೊಳ್ಳಲಿದೆ. ಶುಭಸಂಖ್ಯೆ: 8
ಮೀನ: ವಿದೇಶ ಪ್ರವಾಸದ ಪ್ರಯತ್ನಗಳಿಗೆ ಅವಕಾಶಗಳು ಸಿಗಲಿವೆ. ಆದರೆ ಈ ಕೂಡಲೇ ನಿಮ್ಮ ಅಂತಿಮ ನಿರ್ಧಾರವನ್ನು ತಿಳಿಸಿಬಿಡದಿರಿ. ಶುಭಸಂಖ್ಯೆ: 2