

ಮೇಷ: ವ್ಯಾಪಾರದಲ್ಲಿ ಅಧಿಕ ಲಾಭ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರಿಕೆ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಶುಭಸಂಖ್ಯೆ: 6
ವೃಷಭ: ಪೂರ್ವತಯಾರಿ ಮಾಡಿ ಯೋಜನೆಗಳನ್ನು ಕಾರ್ಯಗತ ಮಾಡಿ. ಹಣಕಾಸಿನ ವಿಚಾರದಲ್ಲಿ ಬಂಧುಗಳೊಂದಿಗೆ ಮನಸ್ತಾಪ. ಶುಭಸಂಖ್ಯೆ: 9
ಮಿಥುನ: ಕೂಡಿಟ್ಟ ಹಣ ಹಾನಿಯಾಗುವ ಸಂಭವವಿದೆ. ಅಣ್ಣತಮ್ಮಂದಿರಲ್ಲಿ ಅಸಹಕಾರದಿಂದ ಆಸ್ತಿ ವಿಚಾರದಲ್ಲಿ ಗೊಂದಲ. ಶುಭಸಂಖ್ಯೆ:1
ಕಟಕ: ಮಹಿಳೆಯರಿಗೆ ಇಷ್ಟಾರ್ಥಸಿದ್ಧಿ. ಸರ್ಕಾರಿ ಕೆಲಸಗಳಲ್ಲಿ ನಿರ್ವಿಘ್ನ ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪು ಬಂದು ಸಂತಸ. ಶುಭಸಂಖ್ಯೆ:2
ಸಿಂಹ: ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ದೂರ ಪ್ರಯಾಣದ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 9
ಕನ್ಯಾ: ಆಸ್ತಿಗೆ ಸಂಬಂಧಿಸಿದಂತೆ ತೊಂದರೆಯಾಗುವ ಸಂಭವ. ನೌಕರಿಯಲ್ಲಿ ಕೆಲಸಗಾರರ ಅಸಹಕಾರ. ಮಾನಸಿಕ ನೆಮ್ಮದಿ ಇಲ್ಲ. ಶುಭಸಂಖ್ಯೆ: 4
ತುಲಾ: ವಿದೇಶ ಪ್ರವಾಸ ಯೋಗ. ದಿನಸಿ ವ್ಯಾಪಾರಿಗಳಿಗೆ ಸರಕು ನಷ್ಟ. ಸಂಗಾತಿಯ ಸಲಹೆಯಿಂದ ದೊಡ್ಡ ಪ್ರಮಾಣದ ಲಾಭ. ಶುಭಸಂಖ್ಯೆ: 9
ವೃಶ್ಚಿಕ: ಉದ್ಯೋಗ ಕ್ಷೇತ್ರದ ನಿಮ್ಮ ಪರಿಶ್ರಮಕ್ಕೆ ಫಲ. ಕೌಟುಂಬಿಕ ಜೀವನ ಆನಂದದಾಯಕ. ಮಗನ ವಿವಾಹ ಯತ್ನದಲ್ಲಿ ಯಶ. ಶುಭಸಂಖ್ಯೆ: 3
ಧನುಸ್ಸು: ಅನವಶ್ಯಕ ಖರೀದಿಯಲ್ಲಿ ಧನನಷ್ಟ ಸಾಧ್ಯತೆ. ನೌಕರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ. ಆಸ್ತಿ ವಿವಾದದ ತಾರ್ಕಿಕ ಅಂತ್ಯ. ಶುಭಸಂಖ್ಯೆ: 7
ಮಕರ: ಸಾಲದ ಸಮಸ್ಯೆ ತಲೆದೋರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಕೌಟುಂಬಿಕ ನಿರ್ಧಾರಗಳಲ್ಲಿ ಗೊಂದಲ. ಶುಭಸಂಖ್ಯೆ: 6
ಕುಂಭ: ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಮಾನಸಿಕ ನೆಮ್ಮದಿ. ಉದ್ಯೋಗ ಬದಲಾವಣೆ ಸಾಧ್ಯತೆ. ಸರ್ಕಾರಿ ಕಾರ್ಯ ಯತ್ನ ಸಫಲ. ಶುಭಸಂಖ್ಯೆ: 8
ಮೀನ: ನಿಮ್ಮ ಹಠದಿಂದ ಸಂಗಾತಿಗೆ ತೊಂದರೆ. ಕುಟುಂಬದ ಹಿರಿಯ ಸದಸ್ಯರಿಗೆ ಕಷ್ಟ. ದಿನಾಂತ್ಯದಲ್ಲಿ ಅನಾರೋಗ್ಯ ಬಾಧಿಸಲಿದೆ. ಶುಭಸಂಖ್ಯೆ: 1