ನಿತ್ಯ ಭವಿಷ್ಯ: ಈ ರಾಶಿಯವರಿಗೆ ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ

Nitya-Bhavishya-vvani-1-2-1-1
Published on

ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ. ಗೆಳೆಯರಿಂದ ಮೋಸ. ನಿಮ್ಮ ಆತ್ಮಬಲ, ದೈವ ಬಲದಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 9

ವೃಷಭ: ಮಹಿಳಾ ಉದ್ಯಮಿಗಳಿಗೆ ಅನಿರೀತ ತಿರುವು. ಮಾನಸಿಕವಾಗಿ ಅಶಾಂತಿ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿಯಾಲಿದೆ. ಶುಭಸಂಖ್ಯೆ: 5

ಮಿಥುನ: ನಿಮ್ಮ ಅಸಹನೆಯಿಂದ ಸಮಸ್ಯೆ. ಅಸಹಾಯಕರಿಗೆ ಸಹಾಯ ಮಾಡಿದ ಸಮಾಧಾನ. ವ್ಯಾಪಾರದಲ್ಲಿ ಲಾಭ. ಮನೆಯಲ್ಲಿ ಸಡಗರ. ಶುಭಸಂಖ್ಯೆ:3

ಕಟಕ: ಮಕ್ಕಳ ಅವಿಧೇಯತೆ ಮನಸ್ಸಿಗೆ ನೋವುಂಟು ಮಾಡು ವುದು. ಸಂಗಾತಿಯಿಂದ ಸಮಾಧಾನ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 1

ಸಿಂಹ: ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರಯತ್ನ ಮುಂದುವರಿಸಿ. ಹಿತಶತ್ರುಗಳಿಂದ ತೊಂದರೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ:9

ಕನ್ಯಾ: ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ. ನಂಬಿದವರಿಂದಲೇ ಮೋಸ. ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ತುಲಾ: ಅನಗತ್ಯವಸ್ತುಗಳಿಗಾಗಿ ದುಂದುವೆಚ್ಚ. ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆ. ಪರ್ಯಾಯ ವ್ಯವಸ್ಥೆಗೆ ಕುಟುಂಬದ ಚಿಂತನೆ. ಶುಭಸಂಖ್ಯೆ: 3

ವೃಶ್ಚಿಕ: ಸಮಯ ಸಾಧಕರಿಂದ ಅಂತರ ಕಾಯ್ದುಕೊಳ್ಳಿ. ನಂಬಿದವರಿಂದ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ಧನುಸ್ಸು: ನಟರಿಗೆ ವಿಶೇಷ ಪ್ರೋತ್ಸಾಹ ಸಿಗಲಿದೆ. ಸಾಮಾಜಿಕವಾಗಿ ಕಿರಿಕಿರಿ ಅನುಭವಿಸಬೇಕಾದೀತು. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 3

ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ. ದೂರ ದೂರಿಗೆ ಪ್ರಯಾಣ. ಹಳೆಯ ಬಂಧುಮಿತ್ರರ ಭೇಟಿ. ಧಾರ್ಮಿಕ ಕ್ಷೇತ್ರದತ್ತ ಪ್ರಯಾಣ. ಶುಭಸಂಖ್ಯೆ: 6

ಕುಂಭ: ವೈದ್ಯರ ಸಲಹೆಯನ್ನು ನಿರ್ಲಕ್ಷಿಸದೇ ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಕ್ಕಳಿಂದ ಹೆಮ್ಮೆ. ಶುಭಸಂಖ್ಯೆ: 7

ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ರ್ನಿಲಸಿ. ಹೊಸ ಉದ್ದಿಮೆ ಪ್ರಾರಂಭಿಸಲು ನಿರ್ಧಾರ. ಮಗನ ಮದುವೆಗೆ ಮುಹೂರ್ತ ನಿಗದಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net