ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಚಿಂತೆ, ಕಷ್ಟಗಳು ಬರುವ ಸಾಧ್ಯತೆ ಇದೆ

Nitya-Bhavishya-vvani-1-2-1
Published on

ಮೇಷ: ಎಲ್ಲರೂ ಬಯಸುವ ಅವಕಾಶ ನಿಮಗೆ ಸಿಕ್ಕಿದರೂ, ದಯವಿಟ್ಟು ಬೇರೆಯವರಿಗೆ ಕೊಡಿ ಎಂದು ಹೇಳುತ್ತೀರಿ. ಅದೃಷ್ಟಸಂಖ್ಯೆ: 9

ವೃಷಭ: ಬಹಳ ಜನ ನಿಮ್ಮನ್ನು ಹುರಿದುಂಬಿಸಿ ತಮ್ಮ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಅದೃಷ್ಟಸಂಖ್ಯೆ: 4

ಮಿಥುನ: ಬೊಗಳುವ ನಾಯಿ ಕಚ್ಚಲಾರದು ಎಂಬ ನಂಬಿಕೆ ಸುಳ್ಳಾಗುತ್ತದೆ. ಪ್ರಮುಖ ವ್ಯಕ್ತಿಯ ಮಾತು ಅಲ್ಲಗಳೆದರೆ ನಷ್ಟ. ಅದೃಷ್ಟಸಂಖ್ಯೆ: 7

ಕಟಕ: ಯಾರೂ ನೆರವಿಗೆ ಬರುವುದಿಲ್ಲ. ಯಾರಿಗೂ ಕಾಯದೆ ನಿಮ್ಮ ಕೆಲಸಗಳನ್ನೆಲ್ಲ ನೀವೇ ಮಾಡಿಕೊಳ್ಳಬೇಕು. ಅದೃಷ್ಟಸಂಖ್ಯೆ: 1

ಸಿಂಹ: ಆರ್ಥಿಕ ವಿಚಾರದಲ್ಲಿ ಚಿಂತೆ ಅಥವಾ ಕಷ್ಟಗಳು ಬರುವ ಸಾಧ್ಯತೆ ಇದೆ. ಹಣ ಖರ್ಚು ಮಾಡಿಕೊಳ್ಳಬೇಡಿ. ಅದೃಷ್ಟಸಂಖ್ಯೆ: 2

ಕನ್ಯಾ: ಮುಂದೆ ಹೀಗೆಯೇ ಆಗಬಹುದು ಎಂದು ಆಲೋಚಿಸಿ ಅದಕ್ಕೆ ತಕ್ಕಂಥ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತೀರಿ. ಅದೃಷ್ಟಸಂಖ್ಯೆ: 5

ತುಲಾ: ನಿಮ್ಮ ಬಗ್ಗೆ ಮನೆಯವರೇ ಅನುಮಾನ ವ್ಯಕ್ತಪಡಿಸಬಹುದು. ನೀವು ಕೆಲವು ತಪ್ಪನ್ನೂ ಮಾಡುವಂತೆ ಕಾಣುತ್ತಿದೆ. ಅದೃಷ್ಟಸಂಖ್ಯೆ: 6

ವೃಶ್ಚಿಕ: ನಿಮ್ಮ ಬಗ್ಗೆ ಯಾರೂ ಕೂಡ ಏನೂ ತಲೆ ಕೆಡಿಸಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಬೇಸರ ಮಾಡಿಕೊಳ್ಳುತ್ತೀರಿ. ಅದೃಷ್ಟಸಂಖ್ಯೆ: 2

ಧನುಸ್ಸು: ಸಾಲ ಮಾಡಬೇಕೆನಿಸುತ್ತದೆ. ಆದರೆ ಮಾಡದೆ ಇರುವುದೇ ಉತ್ತಮ ಎಂದು ಬಾಳಸಂಗಾತಿ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಅದೃಷ್ಟಸಂಖ್ಯೆ: 3

ಮಕರ: ಬಯ್ಯುವುದು, ಹಣ ಕೇಳುವುದು ಹೀಗೆ ಮನಸ್ಸಿಲ್ಲದ ಮನಸ್ಸಿನಿಂದ ಬಹಳ ಕೆಲಸ ಮಾಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 1

ಕುಂಭ: ಮಕ್ಕಳ ಬಗ್ಗೆ ಹೆಚ್ಚು ಹೆಚ್ಚು ಚಿಂತಿಸುತ್ತೀರಿ, ಕಾಳಜಿ ವಹಿಸುತ್ತೀರಿ. ಬಹಳ ಪ್ರೀತಿಯಿಂದ ಅವರ ಕೆಲಸ ಮಾಡುತ್ತೀರಿ. ಅದೃಷ್ಟಸಂಖ್ಯೆ: 7

ಮೀನ: ಒಳ್ಳೆಯ ಹೆಸರು ಬರುವ ಏನಾದರೂ ಮಾಡಬೇಕೆಂದು ದಾನ ಮಾಡುತ್ತೀರಿ. ಅಪಾತ್ರ ದಾನ ಆಗದಿರಲಿ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net