ನಿತ್ಯ ಭವಿಷ್ಯ: ಈ ರಾಶಿಯವರು ಪಂಢರಪುರದ ವಿಠ್ಠಲನನ್ನು ಭಕ್ತಿಯಿಂದ ಸ್ತುತಿಸಿ. ಮೈಮನ ಹಗುರಾಗಲಿದೆ

Nitya-Bhavishya-vvani-1-2-1
Published on

ಮೇಷ: ಅನೇಕ ಬದಲಾವಣೆಗಳಿಗಾಗಿ ದಿನದ ವರ್ತಮಾನವು ನಿಮಗೆ ಬಹಳ ಅನುಕೂಲಕರವಾಗಲಿದೆ. ಶುಭಸಂಖ್ಯೆ: 5

ವೃಷಭ: ಅನವಶ್ಯಕವಾಗಿ ಶ್ರಮಪಡಬೇಕಾಗಿ ಬರಬಹುದು. ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿದರೆ ಕ್ಷೇಮ. ಶುಭಸಂಖ್ಯೆ: 1

ಮಿಥುನ: ಮಕ್ಕಳ ಕಿರಿಕಿರಿಯನ್ನು ಎದುರಿಸುವ, ಅವರದುರು ಅಸಹಾಯಕರಾಗುವ ಸ್ಥಿತಿ ಎದುರಾಗಬಹುದು. ಶುಭಸಂಖ್ಯೆ: 3

ಕಟಕ: ನೆರೆಹೊರೆಯ ಜನರ ಕೊಂಕು ಮಾತುಗಳನ್ನು ಕೇಳಿಸಿಕೊಳ್ಳುವ ಸಾಧ್ಯತೆಗಳು ಸದ್ಯ ಅಧಿಕವಾಗಿದೆ. ಶುಭಸಂಖ್ಯೆ: 9

ಸಿಂಹ: ಪಂಢರಪುರದ ವಿಠ್ಠಲನನ್ನು ಭಕ್ತಿಯಿಂದ ಸ್ತುತಿಸಿ. ಮೈಮನ ಹಗುರಾಗಿ ಹೊಸದೇ ಉತ್ಸಾಹ ಬರಲಿದೆ. ಶುಭಸಂಖ್ಯೆ: 7

ಕನ್ಯಾ: ನಿಮಗೆ ವೈಯಕ್ತಿಕವಾಗಿ ಬಿಕ್ಕಟ್ಟಿನ ಸನ್ನಿವೇಶವೇ ಇದ್ದರೂ, ಕುಟುಂಬದವರ ಜತೆ ಸೂಕ್ತವಾಗಿ ಸಹಕರಿಸಿ. ಶುಭಸಂಖ್ಯೆ: 2

ತುಲಾ: ನ್ಯಾಯಯುತವಾದ ದಾರಿಯಲ್ಲಿಯೇ ಇದ್ದುದರಿಂದ ಒಳಿತಿನ ಫಲವೊಂದು ಲಭ್ಯವಾಗಿ ಹರ್ಷವಿದೆ. ಶುಭಸಂಖ್ಯೆ: 8

ವೃಶ್ಚಿಕ: ಅಪರಿಚಿತರ ಮಾತು ನಿಮ್ಮಲ್ಲಿ ಆಸೆ ಹುಟ್ಟಿಸಿ ನಷ್ಟಕ್ಕಾಗಿನ ದಾರಿಯನ್ನು ನಿರ್ಮಾಣ ಮಾಡಬಹುದು. ಶುಭಸಂಖ್ಯೆ: 4

ಧನಸ್ಸು: ವೃಥಾ ಕಾಣಸಿಗದ ಕಡತವೊಂದು ನಿಮಗೆ ದೊಡ್ಡ ತಲೆನೋವನ್ನು ತರಬಹುದು. ಎಚ್ಚರ. ಶುಭಸಂಖ್ಯೆ: 9

ಮಕರ: ಕೈಗೊಂಡ ವಿವಿಧ ರೀತಿಯ ಯೋಜನೆಗಳು ನಿರೀಕ್ಷಿತ ಫಲಗಳನ್ನು ನೀಡಲು ಸದ್ಯ ಅವಕಾಶಗಳು ಜಾಸ್ತಿ ಇವೆ. ಶುಭಸಂಖ್ಯೆ: 6

ಕುಂಭ: ಮಹಾವಿಷ್ಣುವಿನ ಧ್ಯಾನ ಹಾಗೂ ಆರಾಧನೆಯಿಂದಾಗಿ ಸದ್ಯದಲ್ಲಿಯೇ ಧನಲಾಭ ಸಾಧ್ಯವಾಗಲಿದೆ. ಶುಭಸಂಖ್ಯೆ: 8

ಮೀನ: ಬೆಲೆಬಾಳುವ ವಸ್ತುಗಳು, ಆಭರಣಗಳನ್ನು ಸುರಕ್ಷಿತ ಸ್ಥಳದಲ್ಲೇ ಇಡಿ. ಆ ಬಗ್ಗೆ ಅಲಕ್ಷ್ಯ ಮಾಡಬೇಡಿ. ಶುಭಸಂಖ್ಯೆ: 2 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net