

ಮೇಷ: ನಿಮ್ಮ ಸ್ನೇಹಪರ ಸ್ವಭಾವದಿಂದಾಗಿ ಕೀರ್ತಿ ವೃದ್ಧಿ. ವಿಶೇಷ ಅಧಿಕಾರ ಲಭ್ಯ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 4
ವೃಷಭ: ಮನೆ ಖರೀದಿ ನಿರ್ಧಾರ. ವರ್ಗಾವಣೆ. ಸಂಶೋಧಕ ರಿಗೆ, ನ್ಯಾಯಾಂಗದಲ್ಲಿರುವವರಿಗೆ ಒಳ್ಳೆಯ ದಿನ. ವಿಷ್ಣು ಸಹಸ್ರ ನಾಮ ಪಠಿಸಿ. ಶುಭಸಂಖ್ಯೆ: 2
ಮಿಥುನ: ಪಿತ್ರಾರ್ಜಿತ ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ವಿದೇಶ ಪ್ರಯಾಣ ಸಾಧ್ಯತೆ ಇದೆ. ಮಹಿಳೆಯರಿಗೆ ಮೋಸವಾದೀತು, ಎಚ್ಚರವಾಗಿರಿ. ಶುಭಸಂಖ್ಯೆ: 8
ಕಟಕ: ದಿನಸಿ ವ್ಯಾಪಾರಸ್ಥರಿಗೆ ಅಧಿಕ ಲಾಭವಾಗಲಿದೆ. ಕೃಷಿ ಕೆಲಸಗಳು ಸಮರ್ಪಕ. ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಶುಭಸಂಖ್ಯೆ: 7
ಸಿಂಹ: ಕಠಿಣ ನಿರ್ಧಾರಗಳಿಂದಾಗಿ ಉತ್ತಮ ಫಲ ಸಿಗಲಿದೆ. ಹುಟ್ಟೂರಿನಿಂದ ಶುಭಸುದ್ದಿ. ವೈದ್ಯರ ಸಲಹೆ ನಿರ್ಲಕ್ಷ್ಯದಿಂದ ಅನಾರೋಗ್ಯ. ಶುಭಸಂಖ್ಯೆ: 2
ಕನ್ಯಾ: ಪರಿಶ್ರಮಕ್ಕೆ ತಕ್ಕುದಾದ ಪುರಸ್ಕಾರ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದ ಗಮನ ತೋರಿ. ಮಗಳ ಮದುವೆಯ ಓಡಾಟ. ಶುಭಸಂಖ್ಯೆ:3
ತುಲಾ: ಗಣ್ಯವ್ಯಕ್ತಿಯ ಭೇಟಿ ಮಾಡುವಿರಿ. ಆದಾಯದಷ್ಟೇ ಖರ್ಚು ಇರುವುದು. ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಶುಭಸಂಖ್ಯೆ: 5
ವೃಶ್ಚಿಕ: ಜೀವನ ಶೈಲಿ ಬದಲಾಗುವ ದಿನ. ಹೊಸ ವಿಷಯ ಗಳು ಅನುಭವಕ್ಕೆ ಬರಲಿವೆ. ಅಪರಿಚಿತರೊಂದಿಗೆ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 6
ಧನುಸ್ಸು: ಅವಿವಾಹಿತರಿಗೆ ವಿವಾಹ ನಿಶ್ಚಯ. ಮನಸ್ಸಿನ ತುಮುಲವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ. ಶುಭಸಂಖ್ಯೆ:2
ಮಕರ: ಸಣ್ಣ ಪುಟ್ಟ ತೊಡಕು ಕಂಡರೂ ಕೆಲಸ ಅಬಾಧಿತ. ಸೃಜನಶೀಲತೆಗೆ ಉತ್ತಮ ವೇದಿಕೆ ಲಭಿಸಲಿದೆ. ಬಡಗಿ ವೃತ್ತಿಯವರಿಗೆ ಧನಲಾಭ. ಶುಭಸಂಖ್ಯೆ: 8
ಕುಂಭ: ಉದ್ಯೋಗದಲ್ಲಿ ಅತಂತ್ರತೆ. ವಿಲಾಸಿ ಜೀವನಕ್ಕೆ ದುಂದುವೆಚ್ಚ. ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ಇಂದು ಒಳ್ಳೆಯ ದಿನ. ಶುಭಸಂಖ್ಯೆ: 1
ಮೀನ: ಸಹೋದರರ ಮೇಲೆ ವಿಶಾಲ ಭಾವನೆ ಇರಲಿ. ದೊಡ್ಡ ಯೋಜನೆಗಳಿಗೆ ಅಡೆತಡೆ. ಸಂಬಂಧದಲ್ಲಿ ಸೌಹಾರ್ದ ಕಾಯ್ದುಕೊಳ್ಳುವಿರಿ. ಶುಭಸಂಖ್ಯೆ: 9