

ಮೇಷ: ಜಗಜ್ಜನನಿ ಶ್ರೀ ಚಾಮುಂಡಿಯನ್ನು ಸ್ತುತಿಸಿ. ಮನಸ್ಸಿನ ಸತ್ಸಂಕಲ್ಪಗಳಿಗೆ ಸಿದ್ಧಿಯ ಸಾಕಾರ ಒದಗಿಬರಲು ಸಾಧ್ಯವಿದೆ. ಶುಭಸಂಖ್ಯೆ: 2
ವೃಷಭ: ಬಾಂಧವರಿಂದ ಬರಬೇಕಿದ್ದ ಹಳೆಯ ಹಣ ಮರಳಿ ಬರಲಿದೆ. ಕುಬೇರ ಅಷ್ಟೋತ್ತರ ಶತನಾಮಾವಳಿ ಪಠಿಸಿ. ಶುಭಸಂಖ್ಯೆ: 1
ಮಿಥುನ: ಬೆಟ್ಟಿಂಗ್ ಮೇಲಿನ ಅಗಾಧವಾದ ಸೆಳೆತದಿಂದ ಕಷ್ಟ ಅನುಭವಿಸುತ್ತಿದ್ದೀರಿ. ದೃಢಸಂಕಲ್ಪದಿಂದ ಬಿಟ್ಟುಬಿಟ್ಟರೆ ಕ್ಷೇಮವಿದೆ. ಶುಭಸಂಖ್ಯೆ: 5
ಕಟಕ: ಕೈಗೊಂಡ ಕೆಲಸಕಾರ್ಯಗಳೆಲ್ಲ ಸದ್ಗುರು ದತ್ತಾತ್ರೇಯಸ್ವಾಮಿಯ ಕರುಣೆಯಿಂದ ಬಹು ಬೇಗನೆ ಕೈಗೂಡಲಿವೆ. ಶುಭಸಂಖ್ಯೆ: 4
ಸಿಂಹ: ಕುಟುಂಬದಲ್ಲಿನ ಹಿರಿಯ ಸದಸ್ಯರ ಕುರಿತು ಅನಾದರದ ಭಾವನೆ ಬೇಡ. ಅವರೇ ನಿಮ್ಮನ್ನು ಚೆನ್ನಾಗಿ ತಿದ್ದಬಲ್ಲವರಾಗಿದ್ದಾರೆ. ಶುಭಸಂಖ್ಯೆ: 8
ಕನ್ಯಾ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತನ್ನು ನಂಬಿದರೆ ಸಂಭಾವ್ಯ ತೊಂದರೆಗಳಿಂದ ಪಾರಾಗಬಹುದಾಗಿದೆ. ಶುಭಸಂಖ್ಯೆ: 7
ತುಲಾ: ವರ್ತಮಾನಕ್ಕೆ ಸಂಬಂಧಿತ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಅಭಿವೃದ್ಧಿಗೆ ಹೊಸದಾದ ದಾರಿ ಸಿಗಲಿದೆ. ಶುಭಸಂಖ್ಯೆ: 9
ವೃಶ್ಚಿಕ: ನಿಮ್ಮಲ್ಲಿ ಮಾತಿನ ಚಾತುರ್ಯವಿದೆ. ಅದು ಮಿತಿಯಲ್ಲಿರಲಿ. ನಿಮಗಿಂತಲೂ ಜಾಣರು ಸಿಕ್ಕಿದರೆ ಮೌನಿಯಾಗಿರಿ. ಶುಭಸಂಖ್ಯೆ: 3
ಧನಸ್ಸು: ಆಮದು ರಫ್ತು ವ್ಯವಹಾರಗಳಲ್ಲಿ ನಿರತರಾದ ಜನರಿಗೆ ಸಂಕಷ್ಟ ಎದುರಾಗಬಹುದು. ಈ ಬಗ್ಗೆ ಎಚ್ಚರ ವಹಿಸಿದರೆ ಉತ್ತಮ. ಶುಭಸಂಖ್ಯೆ: 6
ಮಕರ: ವ್ಯಾಪಾರದ ವಿಚಾರದಲ್ಲಿ ತುಸು ದಿಟ್ಟತನದ ಮನೋಭಾವವನ್ನು ಪ್ರದರ್ಶಿಸಿ. ಇದು ನಿಮ್ಮ ಒಳಿತಿಗೆ ನಾಂದಿಯಾಗಲಿದೆ. ಶುಭಸಂಖ್ಯೆ: 5
ಕುಂಭ: ಪ್ರಸಿದ್ಧಿಯ ಜತೆಜತೆಗೆ ಪದೋನ್ನತಿಯೂ ಕೂಡಿಬರಲಿದೆ. ತನ್ಮೂಲಕ ಧನಾಭಿವೃದ್ಧಿಗೂ ಹೆಚ್ಚಿನ ಅವಕಾಶ ಸಿಗಲಿದೆ. ಶುಭಸಂಖ್ಯೆ: 2
ಮೀನ: ಕುಲದೇವರ ಕೃಪಾಶೀರ್ವಾದ ನಿಮ್ಮ ಪಾಲಿಗಿದೆ. ಒಳಗಿನ ಭಯವನ್ನು ದೂರ ಮಾಡಿಕೊಂಡು ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಶುಭಸಂಖ್ಯೆ: 1