ಈ ರಾಶಿಯವರಿಂದು ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅವಿವಾಹಿತರಿಗೆ ವಿವಾಹದ ಸಮಯ. ದೀರ್ಘ ಪ್ರಯಾಣ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ. ಮಾನಸಿಕ ಸಂತಸ. ಶುಭಸಂಖ್ಯೆ: 5

ವೃಷಭ: ಅಧಿಕ ಧನ ಸಂಪಾದನೆಯ ಅಪೇಕ್ಷೆ. ತಿಳಿವಳಿಕೆಯಿಂದ ಕೂಡಿದ ಮಾತುಗಾರಿಕೆಗೆ ಪ್ರಯತ್ನ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಶುಭಸಂಖ್ಯೆ: 9

ಮಿಥುನ: ಆರೋಗ್ಯ ಗಮನಿಸಿ. ಸಾಹಸ ಪ್ರವೃತ್ತಿ ಮಾಡದಿರಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ. ಅಧ್ಯಯನದಲ್ಲಿ ಆಸಕ್ತಿ. ಶುಭಸಂಖ್ಯೆ: 2

ಕಟಕ: ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ಬಂಧುಮಿತ್ರರಿಂದ ಸಹಕಾರ ಲಭಿಸುವುದು. ದಾಂಪತ್ಯ ಸುಖ ವೃದ್ಧಿ. ಶುಭಸಂಖ್ಯೆ: 4

ಸಿಂಹ: ಭೂಮಿ, ವಾಹನ, ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾದಾಯ ಲಭಿಸುವುದು. ದಂಪತಿಗಳಲ್ಲಿ ಅನುರಾಗ ವೃದ್ಧಿ. ಶುಭಸಂಖ್ಯೆ: 7

ಕನ್ಯಾ: ಕಾರ್ಯಗಳಿಂದ ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಆಯಕ್ಕೆ ಸರಿಯಾಗಿ ವ್ಯಯ. ಅನಗತ್ಯ ತೊಂದರೆಗೊಳಗಾಗದಿರಿ. ಶುಭಸಂಖ್ಯೆ: 7

ತುಲಾ: ಧನ ಲಾಭ. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಗೌರವ ಮನ್ನಣೆ ಲಭ್ಯ. ಬಹು ಜನಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ಶುಭಸಂಖ್ಯೆ: 3

ವೃಶ್ಚಿಕ: ನೂತನ ಉದ್ಯೋಗ ಪ್ರಾಪ್ತಿ. ವ್ಯವಹಾರಗಳ ಜವಾಬ್ದಾರಿ. ಧಾರ್ವಿುಕ ಕಾರ್ಯಗಳಿಗೆ ಧನ ವ್ಯಯ. ವಾಹನಗಳ ಸುಖ ಪ್ರಾಪ್ತಿ. ಶುಭಸಂಖ್ಯೆ: 6

ಧನುಸ್ಸು: ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಅನಗತ್ಯ ಖರ್ಚುಗಳಿಗೆ ತಡೆ. ಶುಭಸಂಖ್ಯೆ: 2

ಮಕರ: ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳಬೇಡಿ. ಬಂಧುಮಿತ್ರರ ಸಹಾಯ ಸಹಕಾರ. ಶುಭಸಂಖ್ಯೆ: 7

ಕುಂಭ: ಅವಿವಾಹಿತರಿಗೆ ವಿವಾಹ ಭಾಗ್ಯ. ವಾಕ್​ಚಾತುರ್ಯ. ಕೆಲಸ ಕಾರ್ಯಗಳಲ್ಲಿ ಚುರುಕುತನ. ಗುರುಹಿರಿಯರಿಂದ ಮಾರ್ಗದರ್ಶನ. ಶುಭಸಂಖ್ಯೆ: 7

ಮೀನ: ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಬಂಧುಮಿತ್ರರಿಗಾಗಿ ಸಮಯ ಕೊಡುವಿರಿ. ಸಾಲ ನೀಡದಿರಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net