

ಮೇಷ: ಸಾರ್ವಜನಿಕ ರಂಗದಲ್ಲಿ ಅಸಹನೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಮೇಲಧಿಕಾರಿಗಳ ಪ್ರಶಂಸೆ. ಆಸ್ತಿ ವಿಚಾರವಾಗಿ ವಾಗ್ವಾದ. ಶುಭಸಂಖ್ಯೆ: 1
ವೃಷಭ: ವಿದೇಶ ಪ್ರವಾಸ ನಿರೀಕ್ಷೆಯಲ್ಲಿ ಶುಭಸುದ್ದಿ. ಗೃಹೋಪಕರಣ ಖರೀದಿಯಲ್ಲಿ ಮೋಸ. ಅತಿ ವಿಶ್ವಾಸದಿಂದ ನಂಬಿಕೆ ದ್ರೋಹ. ಶುಭಸಂಖ್ಯೆ: 9
ಮಿಥುನ: ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಶುಭಸಂಖ್ಯೆ: 8
ಕಟಕ: ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ. ದಾಂಪತ್ಯದಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ಶುಭಸಂಖ್ಯೆ: 7
ಸಿಂಹ: ಧಾರ್ವಿುಕ, ಸಾಮಾಜಿಕ ಚಿಂತನೆಗಳತ್ತ ಆಸಕ್ತಿ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ. ಅಧ್ಯಯನ ಶೀಲರಿಗೆ ಯಶಸ್ಸು. ಶುಭಸಂಖ್ಯೆ: 3
ಕನ್ಯಾ: ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಜೀವನಕ್ಕೊಂದು ಹೊಸ ತಿರುವು ಬರುವ ನಿರೀಕ್ಷೆ. ಶುಭಸಂಖ್ಯೆ: 6
ತುಲಾ: ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತನ್ನು ಆಲೈಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಹಿತಾನುಭವ. ಶುಭಸಂಖ್ಯೆ: 4
ವೃಶ್ಚಿಕ: ನಿರಾಶೆಯಿಂದ ಹೊರಬಂದು ಕಾರ್ಯಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ಶುಭಸಂಖ್ಯೆ: 5
ಧನುಸ್ಸು: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಯೋಜನೆಗಳಲ್ಲಿ ಹಿತೈಷಿಗಳ ಉತ್ತಮ ಸಲಹೆಯಿಂದ ಯಶಸ್ಸನ್ನು ಕಾಣುವಿರಿ. ಶುಭಸಂಖ್ಯೆ: 3
ಮಕರ: ವೃತ್ತಿಯಲ್ಲಿ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯ ದಿರಿ. ಹಿರಿಯರಿಂದ ಪ್ರಶಂಸೆ. ಶುಭಸಂಖ್ಯೆ: 2
ಕುಂಭ: ಕುಟುಂಬದ ವಿಷಯಗಳಲ್ಲಿ ದೃಢ ನಿಲುವು ಅಮೂಲ್ಯ. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ನೋವು ಕಾಣಿಸಿಕೊಳ್ಳುವ ಸಾಧ್ಯತೆ. ಶುಭಸಂಖ್ಯೆ: 1
ಮೀನ: ನಿಮ್ಮ ಮಾತು, ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಸಂತೋಷಗೊಳಿಸುವಿರಿ. ನಿಮ್ಮ ನಿರ್ಧಾರಕ್ಕೆ ಬಹುಜನರ ಪ್ರಶಂಸೆ. ಶುಭಸಂಖ್ಯೆ: 8