ಇಂದು ಈ ರಾಶಿಯ ಸ್ತ್ರೀಯರಿಗೆ ಜವಾಬ್ದಾರಿ, ದಾಂಪತ್ಯದಲ್ಲಿ ಪ್ರೀತಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವ್ಯವಹಾರಗಳಲ್ಲಿ ಅಲ್ಪ ಲಾಭ. ಧನವ್ಯಯ. ಶತ್ರು ಬಾಧೆ. ವಿದ್ಯಾರ್ಥಿಗಳಲ್ಲಿ ಗೊಂದಲ. ಮನಃಸ್ತಾಪ ಉಂಟಾಗಬಹುದು. ಶುಭಸಂಖ್ಯೆ: 9

ವೃಷಭ: ಅಧಿಕ ಖರ್ಚು. ಆರೋಗ್ಯದ ಕಡೆ ಗಮನ ಹರಿಸಿ. ದಾಂಪತ್ಯದಲ್ಲಿ ಪ್ರೀತಿ. ಮಾತಿನ ಮೇಲೆ ನಿಗಾ ಇರಲಿ. ಅಧಿಕ ಕೋಪ ಸಲ್ಲದು. ಶುಭಸಂಖ್ಯೆ: 1

ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭವಾಗಲಿದೆ. ಅನಾರೋಗ್ಯ. ಮಿತ್ರರಿಂದ ಅಪವಾದ. ಪರರ ಕಷ್ಟಕ್ಕೆ ಆಪ್ತವಾಗಿ ಸ್ಪಂದಿಸುವಿರಿ. ಶುಭಸಂಖ್ಯೆ: 8

ಕಟಕ: ವಿವೇಚನೆ ಕಳೆದುಕೊಳ್ಳಬೇಡಿ. ಚಂಚಲ ಮನಸ್ಸು ನಿಯಂತ್ರಿಸಿ. ಅಧಿಕಾರ-ಪ್ರಾಪ್ತಿ. ಸ್ತ್ರೀಯರಿಂದ ನೆರವು. ಕಾರ್ಯಕ್ಷೇತ್ರದಲ್ಲಿ ಸಾಧನೆ. ಶುಭಸಂಖ್ಯೆ:1

ಸಿಂಹ: ಸ್ನೇಹಿತರ ಮಾತಿಗೆ ಗೌರವ. ಅನಿರೀಕ್ಷಿತ ಜವಾಬ್ದಾರಿ ಗಳು. ಆದಾಯ ಉತ್ತಮ. ಭಾಗ್ಯ ವೃದ್ಧಿಯಾಗುವುದು. ಸಾಲ ಮರುಪಾವತಿ. ಶುಭಸಂಖ್ಯೆ: 3

ಕನ್ಯಾ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ. ವ್ಯಾಪಾರದಲ್ಲಿ ನಷ್ಟ. ಮಕ್ಕಳಿಂದ ನೆಮ್ಮದಿ ದೊರೆಯುವುದು. ಮನಃಶಾಂತಿ. ಶುಭಸಂಖ್ಯೆ: 5

ತುಲಾ: ಅನ್ಯರಲ್ಲಿ ದ್ವೇಷ. ಹಣದ ತೊಂದರೆಯಾಗಬಹುದು. ವಾಹನದಿಂದ ಕಂಟಕವಿದೆ. ಅಪವಾದ ನಿಂದನೆ ಎದುರಾದೀತು, ಎಚ್ಚರ. ಶುಭಸಂಖ್ಯೆ: 1

ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ಜಯ. ಮಾನಸಿಕ ಒತ್ತಡ. ಶ್ರಮಕ್ಕೆ ತಕ್ಕ ಫಲ ಸಿಗುವುದು. ಉತ್ತಮ ಪ್ರಗತಿ. ಆಲಸ್ಯ ಮನೋಭಾವ ಬಿಡಿ. ಶುಭಸಂಖ್ಯೆ: 6

ಧನುಸ್ಸು: ನಾನಾ ರೀತಿಯ ಯೋಚನೆ ಬರಲಿದೆ. ಕುಟುಂಬದಲ್ಲಿ ಪ್ರೀತಿ. ಧನಲಾಭ. ಭಯ ಭೀತಿ ನಿವಾರಣೆ. ಹಿತ ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 4

ಮಕರ: ಮಿತ್ರರ ಭೇಟಿಯಿಂದ ಸಂತೋಷ. ಕುಟುಂಬ ಸೌಖ್ಯ. ಸುಖ ಭೋಜನ. ಅಧಿಕ ಖರ್ಚು ಆದೀತು. ಗುರುಹಿರಿಯರ ಆಶೀರ್ವಾದ. ಶುಭಸಂಖ್ಯೆ: 1

ಕುಂಭ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ. ನಾನಾ ರೀತಿಯ ಆದಾಯ ಬರಲಿದೆ. ನಿಮ್ಮ ಮನೋಕಾಮನೆ ಈಡೇರುವುದು. ಶುಭಸಂಖ್ಯೆ: 6

ಮೀನ: ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ. ವಿರೋಧಿಗಳಿಂದ ಕುತಂತ್ರ, ಅಡೆತಡೆ. ಸ್ತ್ರೀಯರಿಗೆ ಜವಾಬ್ದಾರಿ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net