ನಿತ್ಯಭವಿಷ್ಯ| ಈ ರಾಶಿಯವರ ನಿರೀಕ್ಷೆಗಳು ಹುಸಿಯಾಗಲಿವೆ..

nity
Published on

ಮೇಷ: ನಿರೀಕ್ಷೆಗಳು ಹುಸಿ ಆಗಬಹುದು, ಬೇಸರಿಸಿದರು. ಕೆಲಸದ ಕ್ಷೇತ್ರದಲ್ಲಿ ಒತ್ತಡ ಹೆಚ್ಚುವುದು. ಗುರುವನ್ನು ಆರಾಧಿಸಿ. ಶುಭಸಂಖ್ಯೆ: 2

ವೃಷಭ: ಜನ್ಮದ ರಾಹು ಆರೋಗ್ಯ ಸಮಸ್ಯೆಗೆ ಕಾರಣನಾಗುತ್ತಾನೆ. ಮಾನಸಿಕ ತಳಮಳ. ಅಶಾಂತಿ. ದೇವಿಯನ್ನು ಪೂಜಿಸಿ. ಶುಭಸಂಖ್ಯೆ: 8

ಮಿಥುನ: ಮಕ್ಕಳಿಂದ ಸಿಹಿ ಸುದ್ದಿ ದೊರೆತು ಸಂತಸ. ಹಲವು ದಿನಗಳಿಂದ ಬಾಕಿ ಇದ್ದ ಭೂ ವಿವಾದ ಸುಖಾಂತ್ಯ ಕಾಣಲಿದೆ. ಶುಭಸಂಖ್ಯೆ:3

ಕಟಕ: ಬಂಧುಗಳ ಆಗಮನ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತಾಯಿಯ ಸಲಹೆ ತೆಗೆದುಕೊಳ್ಳಿ. ಒಳ್ಳೆಯದಾಗುವುದು. ಶುಭಸಂಖ್ಯೆ: 4

ಸಿಂಹ: ನಿಮ್ಮ ದುಶ್ಚಟಗಳಿಂದ ಮನೆಯಲ್ಲಿ ಅಸಮಾಧಾನ. ಸಹೋದ್ಯೋಗಿಗಳಿಂದ ಸಾಂತ್ವನ. ಸ್ಕಂದನನ್ನು ಏಕಾಗ್ರತೆಯಿಂದ ಪೂಜಿಸಿ. ಶುಭಸಂಖ್ಯೆ: 9

ಕನ್ಯಾ: ನಿಮ್ಮ ಧೋರಣೆ ಅವಮಾನಕ್ಕೆ ಕಾರಣ ಆಗಬಹುದು. ಸಮಾಧಾನದಿಂದ ಇರಿ. ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 6

ತುಲಾ: ಸ್ನೇಹಿತರ ಸಹಕಾರ ದೊರೆಯಲಿದೆ. ಭವಿಷ್ಯದ ಉನ್ನತಿಯ ಸಾಕಾರವಾಗಿ ಸಮಾಧಾನ. ದಿನಾಂತ್ಯದಲ್ಲಿ ನಿರಾಸೆ. ಶುಭಸಂಖ್ಯೆ: 3

ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲವಿಲ್ಲ. ಬಹಳ ದಿನಗಳಿಂದ ನನೆಗುದಿಯಲ್ಲಿದ್ದ ಕೆಲಸಕ್ಕೆ ಮರುಚಾಲನೆ. ಗಣೇಶನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7

ಧನಸ್ಸು: ಸಾಮಾಜಿಕ ಜೀವನದಲ್ಲಿ ಸಹನೆ ಇರಲಿ. ದುಡುಕು ಸ್ವಭಾವ ನಿಮ್ಮ ಅವನತಿಗೆ ಕಾರಣವಾಗಬಹುದು. ಮರೆಯಬೇಡಿ. ಶುಭಸಂಖ್ಯೆ: 1

ಮಕರ: ಉದ್ಯೋಗ ಅರಸುವವರಿಗೆ ಕಾರ್ಯ ಸಿದ್ದಿ. ವ್ಯಾಪಾರದಲ್ಲಿ ನಷ್ಟ. ಸಂಜೆಯ ವೇಳೆಗೆ ಶುಭಸುದ್ದಿ ಬಂದು ಸಂತಸ. ಶುಭಸಂಖ್ಯೆ: 2

ಕುಂಭ: ಸಂಬಂಧವಿಲ್ಲದ ವಿಷಯಕ್ಕೆ ತಲೆ ಕೆಡಿಸಿಕೊಳ್ಳದೇ ಇರುವುದು ಒಳ್ಳೆಯದು. ಅನವಶ್ಯಕ ಖರ್ಚು, ದುಂದುವೆಚ್ಚ. ಶಿವನನ್ನು ಪೂಜಿಸಿ. ಶುಭಸಂಖ್ಯೆ: 6

ಮೀನ : ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಕಚೇರಿಯಲ್ಲಿ ಹೊಸ ಅನುಭವ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net