

ಮೇಷ: ವೃತ್ತಿಜೀವನದಲ್ಲಿ ಮಹತ್ತರ ಬದಲಾವಣೆ. ನಿಮ್ಮ ಶ್ರಮಕ್ಕೆ ಭಾಗ್ಯದ ಸಹಾಯ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 7
ವೃಷಭ: ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಲಾಭ. ಉದ್ಯೋಗದಲ್ಲಿ ಸ್ಪರ್ಧೆಯ ಭೀತಿ. ಅಧಿಕ ಖರ್ಚು. ಭಾಗ್ಯೋದಯದ ಅನುಭವ. ಶುಭಸಂಖ್ಯೆ: 4
ಮಿಥುನ: ಹಿರಿಯ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಮಿತ್ರರಿಂದ ಸಮಸ್ಯೆಯ ಸೃಷ್ಟಿ. ಶುಭಸಂಖ್ಯೆ: 9
ಕಟಕ: ಪ್ರಗತಿ ಮತ್ತು ಉತ್ಕರ್ಷಕ್ಕೆ ಈ ದಿನ ಸಾಕ್ಷಿ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶ್ರದ್ಧೆಯಿಂದ ಜವಾಬ್ದಾರಿ ನಿರ್ವಹಿಸಿ. ಶುಭಸಂಖ್ಯೆ: 8
ಸಿಂಹ: ಆರ್ಥಿಕ ಸಮಸ್ಯೆ ಕಾಡುತ್ತದೆ. ಜತೆಗೆ ಆರೋಗ್ಯ ತೊಂದರೆ ಕಾಡಬಹುದು. ತೀರ ಆತಂಕ ಬೇಡ. ಅದೃಷ್ಟದಿಂದ ಅವಕಾಶ ಸಿದ್ಧಿ. ಶುಭಸಂಖ್ಯೆ: 9
ಕನ್ಯಾ: ಕಾರ್ಯನಿಮಿತ್ತ ಪ್ರಯಾಣ ಸಾಧ್ಯತೆ. ಪರಿಶ್ರಮಕ್ಕೆ ತಕ್ಷಣ ಫಲ ಸಿಗುವುದಿಲ್ಲ. ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 2
ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1
ವೃಶ್ಚಿಕ: ನಿಮ್ಮ ಅನುಭವ ನೆರವಿಗೆ ಬರಲಿದೆ. ಅರ್ಹತೆ ಇಲ್ಲದಿದ್ದರೂ ಅವಕಾಶಗಳ ಪ್ರಾಪ್ತಿ. ಭೂಮಿ ಖರೀದಿಯಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 3
ಧನುಸ್ಸು: ಆಸ್ತಿ ಲಾಭ ಆಗುತ್ತದೆ, ನಿರೀಕ್ಷಿಸಿದಷ್ಟು ಅಲ್ಲ. ಅಡಚಣೆ, ತೊಂದರೆಯಿಂದ ವಿಳಂಬ. ಹೃದಯ ಸಮಸ್ಯೆ ಇರುವವರು ಜಾಗ್ರತೆ. ಶುಭಸಂಖ್ಯೆ: 8
ಮಕರ: ಕೆಲಸಗಳು ಯಶಸ್ವಿಯಾಗುತ್ತವೆ. ವಿವಾಹಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯಿಂದ ತೊಂದರೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7
ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಯಶಸ್ಸು ಸಾಧಿಸುವಲ್ಲಿ ಪ್ರಯತ್ನಶೀಲರಾಗಿ. ಹೃದಯ ಸಮಸ್ಯೆ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 5
ಮೀನ: ಉದ್ಯೋಗದಲ್ಲಿ ಚೇತರಿಕೆೆ. ಸಾರ್ವಜನಿಕ ರಂಗದಲ್ಲಿ ಪೋ›ತ್ಸಾಹ. ಸಹೋದರರೊಂದಿಗೆ ವಾದ, ಮುಂಗೋಪವೂ ಬೇಡ. ಶುಭಸಂಖ್ಯೆ: 4