ಈ ರಾಶಿಯವರು ಇಂದು ಮಿತವಾಗಿ ಮಾತನಾಡಿದರೆ ಒಳ್ಳೆಯದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಟ್ಟಡ ಸಾಮಗ್ರಿಗಳ ವ್ಯಾಪಾರಿಗಳಿಗೆ ನಷ್ಟ. ನಿಮ್ಮ ಸಂಕಲ್ಪಿತ ಕಾರ್ಯಗಳಲ್ಲಿ ಹಿನ್ನಡೆ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 9

ವೃಷಭ: ಕುಟುಂಬದ ಹಿರಿಯರಿಗೆ ಅನಾರೋಗ್ಯ ಉಲ್ಬಣ. ವಿದ್ಯಾರ್ಥಿಗಳಿಗೆ ವಿಶೇಷ ಪ್ರಗತಿ. ಅವಿವಾಹಿತರಿಗೆ ವಿವಾಹ ಪ್ರಯತ್ನ ಸಫಲ. ಶುಭಸಂಖ್ಯೆ: 7

ಮಿಥುನ: ಸಹೋದ್ಯೋಗಿಗಳೊಂದಿಗೆ ವಿರೋಧ. ಆಸ್ತಿ ತೀರ್ಪು ಮುಂದಕ್ಕೆ. ಸಹೋದರರೊಂದಿಗೆ ಮನಸ್ತಾಪ. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 8

ಕಟಕ: ಶುಭಕಾರ್ಯ ಯತ್ನ ಸಫಲ. ರಾಜಕೀಯ ರಂಗದಲ್ಲಿ ಇರುವವರಿಗೆ ವಿಶೇಷ ದಿನ ಕಾದಿದೆ. ಕುಟುಂಬದೊಂದಿಗೆ ವಿಹಾರ. ಶುಭಸಂಖ್ಯೆ: 6

ಸಿಂಹ: ಪ್ರತಿಭಾನ್ವಿತರಿಗೆ ಪೋ›ತ್ಸಾಹ. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ. ಸಾರ್ವಜನಿಕ ರಂಗದಲ್ಲಿ ಮನ್ನಣೆ. ಶುಭಸಂಖ್ಯೆ: 9

ಕನ್ಯಾ: ಸಂಗಾತಿಯೊಂದಿಗೆ ಧಾರ್ವಿುಕ ಕೇಂದ್ರಕ್ಕೆ ಭೇಟಿ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಿದ್ದಿ. ಆಸ್ತಿ ವಿಚಾರದಲ್ಲಿ ವಾಗ್ವಾದ. ಶುಭಸಂಖ್ಯೆ: 2

ತುಲಾ: ಹಿರಿಯರ ಮಾರ್ಗದರ್ಶನ ಪಡೆಯಿರಿ. ಸ್ನೇಹಿತನ ಭೇಟಿ. ಅನವಶ್ಯಕ ತಿರುಗಾಟ. ಆತ್ಮಸ್ಥೈರ್ಯದಿಂದ ಮುನ್ನುಗ್ಗಿ, ಯಶವಿದೆ. ಶುಭಸಂಖ್ಯೆ: 4

ವೃಶ್ಚಿಕ: ಆತ್ಮವಿಶ್ವಾಸದಿಂದ ಮುಂದುವರಿಯಿರಿ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ಹಿತಶತ್ರುಗಳಿಂದ ಅಪಪ್ರಚಾರ. ಶುಭಸಂಖ್ಯೆ: 8

ಧನುಸ್ಸು: ದ್ವಿತೀಯದ ಶನಿ ಕುಟುಂಬ ಸಮಸ್ಯೆಗಳಿಗೆ ಕಾರಣನಾಗುತ್ತಾನೆ. ಮಿತವಾಗಿ ಮಾತನಾಡಿದರೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಯಶ. ಶುಭಸಂಖ್ಯೆ:6

ಮಕರ: ನಕಾರಾತ್ಮಕ ಚಿಂತನೆ ಬಿಟ್ಟುಬಿಡಿ. ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ರಾಜಕೀಯ ರಂಗದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 3

ಕುಂಭ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಕುಟುಂಬದಲ್ಲಿ ಅನವಶ್ಯಕ ಖರ್ಚು. ವಿದೇಶ ಪ್ರಯಾಣ ಸಾಧ್ಯತೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1

ಮೀನ: ರಾಜಕೀಯದಲ್ಲಿರುವವರು ಅಧಿಕಾರ ಕಳೆದುಕೊಳ್ಳುವ ಭೀತಿ. ಕುಟುಂಬದಲ್ಲಿ ಮನಸ್ತಾಪ. ಸಗಟು ವ್ಯಾಪಾರಿಗಳಿಗೆ ತೊಂದರೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net