

ಮೇಷ: ಹಿರಿಯರ ಭೇಟಿ. ಉದ್ಯೋಗದಲ್ಲಿ ಆಲಸ್ಯ. ತಾಯಿಯಿಂದ ನೆರವು. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ. ಪಿತ್ರಾರ್ಜಿತ ಆಸ್ತಿ ಲಾಭ. ಶುಭಸಂಖ್ಯೆ: 9
ವೃಷಭ: ಆಕಸ್ಮಿಕ ಪ್ರಯಾಣ. ಉದ್ಯೋಗದಲ್ಲಿ ಹಿನ್ನಡೆ. ಪತ್ರ ವ್ಯವಹಾರಗಳಲ್ಲಿ ಎಳೆದಾಟ. ಅಪಮೃತ್ಯು ಭಯ. ತಂದೆಯಿಂದ ಸಹಕಾರ. ಶುಭಸಂಖ್ಯೆ:1
ಮಿಥುನ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಅನಿರೀಕ್ಷಿತ ಧನಾಗಮನ. ಪಿತ್ರಾರ್ಜಿತ ಆಸ್ತಿಯಿಂದ ನಷ್ಟ. ಪ್ರಯಾಣದಲ್ಲಿ ಹಿನ್ನಡೆ. ಶುಭಸಂಖ್ಯೆ: 8
ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ದಾಂಪತ್ಯದಲ್ಲಿ ಕಲಹ ಬೇಡ. ಸ್ವಯಂಕೃತ ನಿಂದನೆ. ಗುಪ್ತ ಮಾರ್ಗಗಳಿಂದ ಆಪತ್ತು. ಶುಭಸಂಖ್ಯೆ: 1
ಸಿಂಹ: ಸಾಲಬಾಧೆ. ಶತ್ರು ಕಾಟ ಜಾಸ್ತಿಯಾದೀತು. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಬಾಡಿಗೆದಾರರೊಂದಿಗೆ ಮನಸ್ತಾಪ. ಶುಭಸಂಖ್ಯೆ: 1
ಕನ್ಯಾ: ಹೆಸರು ಮಾಡುವ ಆಸೆ. ಮೋಜು ಮಸ್ತಿಯ ಆಲೋಚನೆ. ಆರೋಗ್ಯದಲ್ಲಿ ಚೇತರಿಕೆ. ಉದ್ಯೋಗ ದಲ್ಲಿ ಅವಕಾಶ ವಂಚಿತರಾಗುವಿರಿ. ಶುಭಸಂಖ್ಯೆ: 4
ತುಲಾ: ಗೃಹ ನಿರ್ಮಾಣದ ಆಲೋಚನೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳಿಂದ ನಷ್ಟ. ಸಂಬಂಧಿಕರಿಂದ ಸಹಾಯ. ಶುಭಸಂಖ್ಯೆ: 6
ವೃಶ್ಚಿಕ: ಅದೃಷ್ಟದ ದಿವಸ. ಕಾರ್ಯಜಯ. ಪ್ರಯಾಣದಲ್ಲಿ ಅನುಕೂಲ. ಬಂಧುಗಳಿಂದ ಸಹಕಾರ. ಕರಾರು ವ್ಯವಹಾರಗಳಲ್ಲಿ ಅನುಕೂಲ. ಶುಭಸಂಖ್ಯೆ: 4
ಧನುಸ್ಸು: ಮಂದಗತಿಯ ಆರ್ಥಿಕ ಸ್ಥಿತಿ. ಷೇರು ವ್ಯವಹಾರದಲ್ಲಿ ನಷ್ಟ. ಅಪವಾದಗಳು. ಮಾನಸಿಕ ಸೋಲು. ಸ್ವಂತ ವ್ಯಾಪಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 1
ಮಕರ: ಸ್ವಯಂಕೃತ ಅಪರಾಧ. ಶುಭಕಾರ್ಯದ ಚಿಂತೆ. ಪಾಲುದಾರಿಕೆ ವ್ಯವಹಾರದ ಯೋಚನೆ. ಅಧಿಕ ಖರ್ಚು. ಅನಾರೋಗ್ಯ ಚಿಂತೆ. ಶುಭಸಂಖ್ಯೆ: 9
ಕುಂಭ: ಕಾರ್ವಿುಕರಿಂದ, ಕೆಲಸಗಾರರಿಂದ ಅಪನಿಂದನೆ. ವಸ್ತುಗಳು ಕಳವು. ಆರ್ಥಿಕ ನಷ್ಟ. ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ. ಶುಭಸಂಖ್ಯೆ: 9
ಮೀನ: ದುಶ್ಚಟಗಳತ್ತ ಮನಸ್ಸು. ಸಹವಾಸದಿಂದ ಸಮಸ್ಯೆ. ವೃತ್ತಿಪರರಿಗೆ ಅನುಕೂಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ರೋಗದಿಂದ ಮುಕ್ತಿ. ಶುಭಸಂಖ್ಯೆ: 3