ಈ ರಾಶಿಯವರಿಗೆ ಇಂದು ಅಸಾಧ್ಯವೆನಿಸಿದ್ದು ಪವಾಡದಂತೆ ನೆರವೇರಲಿದೆ !

Nithya Bhavishya vvani
Published on

ಮೇಷ: ಸಂಗೀತ ಸಂಬಂಧಿ ವ್ಯವಹಾರಗಳು,

ಉಪಕರಣಗಳ ಮಾರಾಟಗಾರರಿಗೆ ಹೆಚ್ಚಿನ

ಲಾಭಕ್ಕೆ ದಾರಿ ತೆರೆದುಕೊಳ್ಳಲಿದೆ. ಶುಭಸಂಖ್ಯೆ: 4

ವೃಷಭ: ಧೂರ್ತರು ನಿಮ್ಮ ಮನದಲ್ಲಿ

ಗೊಂದಲ ಮೂಡಿಸಬಹುದು. ತಾಳ್ಮೆಯನ್ನು

ಕಳೆದುಕೊಳ್ಳದೆ ಅವರನ್ನು ದೂರವಿಡಿ. ಶುಭಸಂಖ್ಯೆ: 6

ಮಿಥುನ: ಕಾನೂನುಗಳ ಮುಖಾಂತರ

ಬಗೆಹರಿಯಬೇಕಾಗಿದ್ದ ಕೆಲವು ವಿವಾದಗಳು

ಸರಳವಾಗಿಯೇ ಪರಿಹಾರಗೊಳ್ಳಲಿವೆ. ಶುಭಸಂಖ್ಯೆ: 2

ಕಟಕ: ಅಸಾಧ್ಯ ಎಂದುಕೊಂಡಿದ್ದ ಕೆಲವು

ಲಾಭಗಳು ನಿಮ್ಮ ಪಾಲಿಗೆ ಆಶ್ಚರ್ಯಕರವಾದ

ರೀತಿಯಲ್ಲಿ ಒದಗಿಬರಲಿವೆ. ಶುಭಸಂಖ್ಯೆ: 7

ಸಿಂಹ: ಆರೋಗ್ಯ ಸಂಬಂಧಿ ಸಂಸ್ಥೆಗಳು ಅಥವಾ

ಘಟಕಗಳಲ್ಲಿ ಕೆಲಸ ಮಾಡುವವರಿಗೆ

ಬಹು ಮುಖ್ಯ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 9

ಕನ್ಯಾ: ಶ್ರಮವಿರದೆ ಧನಲಾಭಕ್ಕಾಗಿ ಪ್ರಯತ್ನ

ಮಾಡುತ್ತೀರಿ. ಅದರ ದಾರಿಗಳು ಅಪಾಯಕಾರಿ

ಎನಿಸಬಹುದು. ಎಚ್ಚರ. ಶುಭಸಂಖ್ಯೆ: 3

ತುಲಾ: ಗೆಳೆಯರನ್ನು ಗೌರವಿಸುವ

ಮನೋಭಾವದವರು ನೀವು. ಆದರೆ ಅವರಲ್ಲಿ

ಸಾಲ ಕೇಳಬೇಡಿ. ಕೊಡಲೂಬೇಡಿ. ಶುಭಸಂಖ್ಯೆ: 8

ವೃಶ್ಚಿಕ: ಪ್ರೌಢಿಮೆಯ ಪ್ರದರ್ಶನಕ್ಕೆ ಹೇರಳ

ಅವಕಾಶಗಳು ಒದಗಿಬರಲಿವೆ. ಕಾರ್ಯಸಿದ್ಧಿಯ

ಸಂತಸವನ್ನೂ ಪಡೆಯುವಿರಿ. ಶುಭಸಂಖ್ಯೆ: 5

ಧನುಸ್ಸು: ನಿಮ್ಮಲ್ಲಿ ಸ್ವಾರ್ಥ ಭಾವನೆ ಇದೆ.

ಆದರೆ ಅದರಿಂದ ಅನ್ಯರಿಗೆ ತೊಂದರೆ ಆಗದ

ಹಾಗೆ ನೋಡಿಕೊಂಡರೆ ಒಳಿತಿದೆ. ಶುಭಸಂಖ್ಯೆ: 1

ಮಕರ: ಪದೋನ್ನತಿಯ ನಿರೀಕ್ಷೆಗಳು

ಕೈಗೂಡಲು ಕೆಲಸದ ಪ್ರದೇಶದಲ್ಲಿ ವಿಶಿಷ್ಟವಾದ

ಅವಕಾಶವೊಂದು ಎದುರಾಗಲಿದೆ. ಶುಭಸಂಖ್ಯೆ: 4

ಕುಂಭ: ಏಕಾಗ್ರತೆ ಮತ್ತು ಪರಿಶ್ರಮಗಳಿಂದ

ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.

ಆರೋಗ್ಯದ ಬಗ್ಗೆ ಗಮನ ಹರಿಸಿ. ಶುಭಸಂಖ್ಯೆ: 6

ಮೀನ: ಆರ್ಥಿಕ ವಿಚಾರದಲ್ಲಿ ಬಾಳಸಂಗಾತಿಯಿಂದ

ಸಕಾರಾತ್ಮಕವಾದ ಬೆಂಬಲ ಸಿಗಲಿದೆ.

ಮಹಾಲಕ್ಷ್ಮಿಯನ್ನು ಧ್ಯಾನಿಸಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net