ಈ ರಾಶಿಯವರು ಇಂದು ಲಕ್ಷ್ಮಿಯ ಆರಾಧನೆ ಮಾಡಿದ್ರೆ ಸಿಗೋದು ದುಡ್ಡಲ್ಲ..

Nithya Bhavishya
Published on

ಮೇಷ: ಮೊದಲು ನಿಮ್ಮನ್ನು ನೀವು ನಿಯಂತ್ರಣ

ಮಾಡಿಕೊಳ್ಳಿ. ವಿರೋಧಿಗಳನ್ನು ವಿಧಿಗೆ

ಬಿಟ್ಟುಬಿಡಿ. ರಕ್ಷಣೆ ಸಿಗಲಿದೆ. ಶುಭಸಂಖ್ಯೆ: 1

ವೃಷಭ: ಕೆಲವು ಮಾತುಕತೆಗಳು ಕೇವಲ ಸಮಯವನ್ನು

ವ್ಯರ್ಥಗೊಳಿಸುತ್ತವೆ. ಆಡುವ ಮಾತಿನಲ್ಲಿ

ಚಾತುರ್ಯ, ತರ್ಕಗಳೂ ಇರಲಿ. ಶುಭಸಂಖ್ಯೆ: 9

ಮಿಥುನ: ಗಣೇಶನನ್ನು ಸ್ತುತಿಸುತ್ತ ಎಲ್ಲ ವಿಘ್ನಗಳನ್ನು

ನಿವಾರಣೆ ಮಾಡಿಕೊಳ್ಳಿ. ಅನಿರೀಕ್ಷಿತ ಗೆಲುವಿನ

ಅವಕಾಶ ಲಭ್ಯವಾಗಲಿದೆ. ಶುಭಸಂಖ್ಯೆ: 8

ಕಟಕ: ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಯಶಸ್ಸಿದೆ.

ವಿರೋಧಿಗಳ ಕಾಟವನ್ನು ಮಾತ್ರ ಹೆಚ್ಚಿನ

ತಾಳ್ಮೆಯಿಂದ ಎದುರಿಸಿ. ಶುಭಸಂಖ್ಯೆ: 2

ಸಿಂಹ: ನೀವು ನಿಮ್ಮ ಮಿತಿಗಳನ್ನು ಮೀರಿ ನಿಲ್ಲುವಂತಹ

ಪ್ರಯತ್ನವನ್ನು ಮಾಡಿ. ಅನ್ಯರಿಗೂ ಕೂಡ

ನೀವು ಮಾದರಿ ಎನಿಸುತ್ತೀರಿ. ಶುಭಸಂಖ್ಯೆ: 4

ಕನ್ಯಾ: ಸಂಬಂಧಿಕರು ಕಿರಿಕಿರಿ ಮಾಡುತ್ತಾರೆ ಎಂಬ

ಅನಿಸಿಕೆ ಮೂಡಬಹುದು. ಆದರೆ ಅವರೂ

ಸಜ್ಜನಿಕೆ ತೋರಲಿದ್ದಾರೆ. ಶುಭಸಂಖ್ಯೆ: 3

ತುಲಾ: ಮಕ್ಕಳ ವಿದ್ಯಾಭ್ಯಾಸ ಸಂಬಂಧಿ ವಿಚಾರದಲ್ಲಿ

ಗಮನವಿರಲಿ. ನಿಮ್ಮ ಮನೋಭಾವದಂತೆ

ಅವರನ್ನು ಮೃದುವಾಗಿ ಬೆಳೆಸಿ. ಶುಭಸಂಖ್ಯೆ: 5

ವೃಶ್ಚಿಕ: ಜಯ ಸಾಧಿಸುವ ಮೊದಲೇ ಸೋಲುತ್ತೇನೆ

ಎಂಬ ತೀರ್ಮಾನವನ್ನು ಕೈಗೊಳ್ಳಬೇಡಿ.

ಮಿತ್ರರ ಸಹಕಾರ ಸಿಗಲಿದೆ. ಶುಭಸಂಖ್ಯೆ: 7

ಧನುಸ್ಸು: ದೂರವೇ ಇರಬಹುದು ಎಂದುಕೊಂಡಂತಹ

ಪ್ರವಾಸವೊಂದು ಥಟ್ಟನೆ ಪ್ರತ್ಯಕ್ಷವಾದೀತು.

ಗಾಬರಿಪಡದೆಯೇ ನಿರ್ವಹಿಸಿ. ಶುಭಸಂಖ್ಯೆ: 6

ಮಕರ: ಅಪರಿಚಿತ ಜನರು ಬಂದು ತಗಾದೆಯನ್ನೇ

ತೆಗೆದಾರು. ನೀವು ಸಂಯಮದಿಂದ ಇದ್ದಷ್ಟು

ನಿಮಗೆ ಹೆಚ್ಚಿನ ಲಾಭವಿದೆ. ಶುಭಸಂಖ್ಯೆ: 8

ಕುಂಭ: ಛಾಯಾಗ್ರಾಹಕರು, ನೃತ್ಯಕಲಾವಿದರು,

ಶಿಲ್ಪ ವೃತ್ತಿಗಳವರಿಗೆ ಇದು ಅದ್ಭುತ ಯಶಸ್ಸಿನ

ಕಾಲವಾಗಲಿದೆ. ಶಿವಸ್ತುತಿ ಮಾಡಿ. ಶುಭಸಂಖ್ಯೆ: 9

ಮೀನ: ಲಕ್ಷ್ಮಿಯ ಆರಾಧನೆಯಿಂದ ಮನಸ್ಸಿಗೆ ಶಾಂತಿ,

ಸಮಾಧಾನಗಳು ಸಿಗಲಿವೆ. ಆರೋಗ್ಯದ

ಬಗ್ಗೆ ಕೂಡ ಕಾಳಜಿ ಇರಲಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net