

ಮೇಷ: ವಾಸ್ತವವಾಗಿ ಯಾರ ಆಸೆಗಳಿಗೂ ಮಿತಿ
ಇರದು. ಆದರೆ ಅವುಗಳನ್ನು ಸಕಾರಾತ್ಮಕವಾದ
ರೀತಿಯಲ್ಲಿ ಪೂರೈಸಬಹುದು. ಶುಭಸಂಖ್ಯೆ: 3
ವೃಷಭ: ನಿಮ್ಮ ಧನಾತ್ಮಕ ವಿಚಾರಗಳಿಗೆ ಸಂಗಾತಿಯಿಂದ
ಸ್ಪಂದನೆ ಅಪಾರವಾಗಿರಲಿದೆ. ಮನೆಯಲ್ಲಿ
ಸಂತಸದ ವಾತಾವರಣವಿದೆ. ಶುಭಸಂಖ್ಯೆ: 6
ಮಿಥುನ: ಶ್ರೀ ಧನ್ವಂತರಿ ಸ್ತೋತ್ರವನ್ನು ಭಕ್ತಿಯಿಂದ
ಪಠಿಸಿ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ
ಚೇತರಿಕೆ ಸಾಧ್ಯವಾಗಲಿದೆ. ಶುಭಸಂಖ್ಯೆ: 9
ಕಟಕ: ಮಕ್ಕಳ ಉತ್ತಮ ಭವಿಷ್ಯ ರೂಪಿಸುವ
ನಿಟ್ಟಿನಲ್ಲಿ ಕೆಲವು ಉತ್ತಮ ಬೆಳವಣಿಗೆಗಳಿಗೆ
ದಾರಿಯೊಂದು ಸಿಗಲಿದೆ. ಶುಭಸಂಖ್ಯೆ: 2
ಸಿಂಹ: ಮನಸ್ಸಿನಲ್ಲಿ ಧನಾತ್ಮಕ ಯೋಚನೆಗಳಷ್ಟೇ
ತುಂಬಿರಲಿ. ಉಳಿದಿದ್ದನ್ನು ದೇವರಿಗೆ ಬಿಡಿ.
ಗೆಲುವು ದೊರೆಯಲಿದೆ. ಶುಭಸಂಖ್ಯೆ: 8
ಕನ್ಯಾ: ನಿಮ್ಮನ್ನು ನೀವು ವಿಮರ್ಶೆ ಮಾಡಿಕೊಳ್ಳುವುದು
ಒಳ್ಳೆಯದು. ಆದರೆ ಅನಗತ್ಯವಾಗಿರುವ
ಪಾಪಪ್ರಜ್ಞೆಯಿಂದ ಬಳಲದಿರಿ. ಶುಭಸಂಖ್ಯೆ: 5
ತುಲಾ: ಕುಪಿತರಾಗುವ ಸಂದರ್ಭಗಳಿಂದ ದೂರವಿರಿ.
ಅದರಿಂದ ನಿಮ್ಮ ದಿಕ್ಕು ತಪ್ಪಿ ವೈಫಲ್ಯಗಳಿಗೆ
ಒಳಗಾಗಿಬಿಡುತ್ತೀರಿ. ಶುಭಸಂಖ್ಯೆ: 4
ವೃಶ್ಚಿಕ: ನಿಮ್ಮ ಮನೋಭೀಷ್ಟೆಗಳಿಗೆ ಸ್ಪಂದಿಸಬಲ್ಲ
ಸ್ನೇಹಿತರು ಸಿಗಲಿದ್ದಾರೆ. ಆದರೆ ತುಸು
ತಾಳ್ಮೆ ಇರಲೇಬೇಕಾಗುತ್ತದೆ. ಶುಭಸಂಖ್ಯೆ: 7
ಧನುಸ್ಸು: ಹಣದ ವಿಚಾರದಲ್ಲಿ ದೊಡ್ಡವರ ತಪ್ಪುಗಳನ್ನೇ
ಮುಂದುವರಿಸದಿರಿ. ಕಡಿಮೆ ಖರ್ಚುಗಳೇ
ದೊಡ್ಡ ಹೂಡಿಕೆ ಎನಿಸಲಿದೆ. ಶುಭಸಂಖ್ಯೆ: 3
ಮಕರ: ಸಾಲಗಳಿಗಾಗಿ ಹೊಸ ಹೊಸ ದಾರಿಗಳನ್ನು
ಹುಡುಕಾಡಲು ಹೋಗಬೇಡಿ. ಕಷ್ಟವು ನೀಗಲು
ಬೇಕಾದ ದಾರಿಗಳು ಕ್ಲಿಷ್ಟವಾಗಿಲ್ಲ. ಶುಭಸಂಖ್ಯೆ: 2
ಕುಂಭ:ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರುವ ಸ್ವಾತಂತ್ರ್ಯ
ಬಯಸುತ್ತಿದ್ದೀರಿ. ಲಲಿತಾಷ್ಟಕ ಪಠಣದಿಂದ
ಸ್ವಾತಂತ್ರ್ಯದ ಸವಿ ಲಭಿಸಲಿದೆ. ಶುಭಸಂಖ್ಯೆ: 9
ಮೀನ: ಆರೋಗ್ಯದಲ್ಲಿ ತುಸು ಏರಿಳಿತ ಉಂಟಾದೀತು.
ವೈದ್ಯರ ಭೇಟಿ ಮಾಡಿ. ಭಕ್ತಿಯಿಂದ ಶಿವನನ್ನು
ಧ್ಯಾನಿಸಿದರೆ ಒಳಿತಾಗಲಿದೆ. ಶುಭಸಂಖ್ಯೆ: 1