

ಮೇಷ: ಹೊಸ ಯೋಜನೆ ಲಾಭ ತರುವ ಸಾಧ್ಯತೆ. ಕುಟುಂಬದೊಂದಿಗೆ ಸಂವಹನ ಸಂತೋಷ ಕೊಡುತ್ತದೆ. ಧನಲಾಭವಾದೀತು. ಶುಭಸಂಖ್ಯೆ: 9
ವೃಷಭ: ಸತತ ಕೆಲಸಗಳಿಂದ ದಣಿವು. ಕಳ್ಳತನವಾದೀತು. ಪ್ರಭಾವಿಗಳೊಂದಿಗೆ ನಿಕಟ ಸಂಪರ್ಕ. ದುಶ್ಚಟದಿಂದ ಕುಟುಂಬಕ್ಕೆ ಕಿರಿಕಿರಿ. ಶುಭಸಂಖ್ಯೆ: 5
ಮಿಥುನ: ನಿಮ್ಮ ಮುಂಗೋಪ, ಅಸಹನೆ ಕಚೇರಿಯಲ್ಲಿ ಸಮಸ್ಯೆಗೆ ಕಾರಣ. ತೃಪ್ತಿಕರ ಫಲಿತಾಂಶ ಪಡೆಯಲು ಕಾರ್ಯಯೋಜನೆ ರೂಪಿಸಿ. ಶುಭಸಂಖ್ಯೆ:1
ಕಟಕ: ಆಲೋಚನೆಗಳಿಗೆ ಮೂರ್ತರೂಪ ಸಿಗಲಿದೆ. ಪ್ರಮುಖ ನಿರ್ಧಾರ ಬದಲಾಗಬಹುದು. ಶ್ರದ್ಧೆಯಿಂದ ನಿರ್ವಹಿಸಿದರೆ ಯಶ. ಶುಭಸಂಖ್ಯೆ: 7
ಸಿಂಹ: ಕಚೇರಿಯಲ್ಲಿ ಸಹನೆಯಿರಲಿ. ಗಾಯಕರಿಗೆ ವಿಶೇಷ ಪೋ›ತ್ಸಾಹ. ವಿದ್ಯಾರ್ಥಿಗಳಿಗೆ ವಿಶೇಷ ಪ್ರಗತಿ. ಧಾರ್ವಿುಕ ಮಂದಿರಕ್ಕೆ ಭೇಟಿ. ಶುಭಸಂಖ್ಯೆ: 7
ಕನ್ಯಾ: ಕೆಲಸಗಾರರ ಮೇಲೆ ಒತ್ತಡ ಹೇರಬೇಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಕುಟುಂಬದಲ್ಲಿ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 3
ತುಲಾ: ನಿಮ್ಮ ಹತಾಶೆ ಮತ್ತು ಕೆಟ್ಟ ನಿರ್ಧಾರಗಳು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ಮಧುರ ಬಾಂಧವ್ಯಕ್ಕೆ ಒತ್ತುಕೊಡಿ. ಶುಭಸಂಖ್ಯೆ: 6
ವೃಶ್ಚಿಕ: ಮಂದಹಾಸದಿಂದಿರಿ, ಸಮಸ್ಯೆಗಳು ಪರಿಹಾರವಾಗುತ್ತವೆ. ವ್ಯಾಪಾರಿಗಳಿಗೆ ಸರಕು ನಷ್ಟ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ.ಶುಭಸಂಖ್ಯೆ: 3
ಧನುಸ್ಸು: ಅವಕಾಶವಾದಿಗಳು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು ಜೋಕೆ. ಕಚೇರಿಯಲ್ಲಿ ಸಹನೆಯಿಂದ ಇರಿ. ಶುಭಸಂಖ್ಯೆ:1
ಮಕರ: ಹಿರಿಯರಿಂದ ಒತ್ತಡ. ಏಕಾಗ್ರತೆಗೆ ಧಕ್ಕೆ. ಅಧಿಕ ಖರ್ಚು. ವೈಯಕ್ತಿಕ ಜೀವನಕ್ಕೆ ಪ್ರಾಶಸ್ತ್ಯ ಕೊಡಿ. ಕುಟುಂಬದೊಂದಿಗೆ ಪ್ರವಾಸ. ಶುಭಸಂಖ್ಯೆ: 7
ಕುಂಭ: ಅಹಂಭಾವದ ಪ್ರದರ್ಶನ ಬೇಡ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಹಣದ ಅಪವ್ಯಯ. ಆಸ್ತಿ ವಿವಾದ ತಾರಕಕ್ಕೆ. ಶುಭಸಂಖ್ಯೆ: 6
ಮೀನ: ಆರ್ಥಿಕ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಹೊಸ ನಿವೇಶನ ಖರೀದಿ ಸಾಧ್ಯತೆ. ಮಗಳ ಮದುವೆ ಯತ್ನ ಸಫಲ. ಶುಭಸಂಖ್ಯೆ: 5