ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣ ಬಂದರೂ ಉಳಿಯುವದಿಲ್ಲ

Nitya-Bhavishya-vvani-1-2-1-1
Published on

ಮೇಷ: ಉತ್ತಮ ಪ್ರಗತಿ. ತಾಳ್ಮೆಯಿಂದ ಇರಿ. ಆರೋಗ್ಯದಲ್ಲಿ ವ್ಯತ್ಯಾಸ. ವಿವಾದಾತ್ಮಕ ವಿಷಯಗಳಿಂದ ದೂರವಿರುವುದು ಕ್ಷೇಮ. ಶುಭಸಂಖ್ಯೆ: 5

ವೃಷಭ: ಅಪರಿಚಿತರಿಂದ ತೊಂದರೆ ಉಂಟಾದೀತು. ಸಹೋದ್ಯೋಗಿಗಳಿಂದ ಸಹಾಯ. ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ. ಶುಭಸಂಖ್ಯೆ: 7

ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ವಿನಾಕಾರಣ ದ್ವೇಷ ಉಂಟಾಗಬಹುದು. ಮಾನಸಿಕ ಒತ್ತಡ. ಸಹನೆ ಕಾಪಾಡಿಕೊಳ್ಳಿ. ಶುಭಸಂಖ್ಯೆ: 1

ಕಟಕ: ಮನೋವ್ಯಥೆ. ಸಲ್ಲದ ಅಪವಾದ ಎದುರಿಸಬೇಕಾ ದೀತು. ಅತಿಯಾದ ನಿದ್ರೆ. ವ್ಯಾಪಾರ ವ್ಯವಹಾರಗಳಲ್ಲಿ ಮೋಸ. ಶುಭಸಂಖ್ಯೆ: 7

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಅನ್ಯರಿಂದ ಸಹಾಯ. ಧನ ಲಾಭ. ಕುಟುಂಬದಲ್ಲಿ ಪ್ರೀತಿ. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 3

ಕನ್ಯಾ: ಅನಗತ್ಯ ಖರ್ಚು. ಅಧಿಕ ಕೆಲಸದಿಂದ ವಿಶ್ರಾಂತಿ. ಶತ್ರುಧ್ವಂಸ. ಅನಾರೋಗ್ಯ. ಇತರರ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ: 9

ತುಲಾ: ದಾಂಪತ್ಯದಲ್ಲಿ ಬಿರುಕು. ಕೋಪ ಅನರ್ಥಕ್ಕೆ ಕಾರಣವಾಗುತ್ತದೆ. ಸೌಜನ್ಯದಿಂದ ವರ್ತಿಸಿ. ಮಾಡುವ ಕೆಲಸದಲ್ಲಿ ಹಿಂಜರಿಕೆ. ಶುಭಸಂಖ್ಯೆ:1

ವೃಶ್ಚಿಕ: ಉದ್ಯೋಗದಲ್ಲಿ ಭಡ್ತಿ. ಪ್ರಿಯ ಜನರ ಭೇಟಿ. ಶರೀರದಲ್ಲಿ ತಳಮಳದ ಅನುಭವ. ಭೂ ಲಾಭ, ಮಾತಿನ ಮೇಲೆ ನಿಗಾ ವಹಿಸಿ. ಶುಭಸಂಖ್ಯೆ: 4

ಧನುಸ್ಸು: ಬಣ್ಣದ ಮಾತಿಗೆ ಮರುಳಾಗುವಿರಿ. ಪುಣ್ಯಕ್ಷೇತ್ರ ದರ್ಶನ ಮಾಡಿ. ಸತ್ಕಾರ್ಯದಲ್ಲಿ ಆಸಕ್ತಿ. ಮಿತ್ರರಿಂದ ಕೆಡುಕು. ಸಾಧಾರಣ ಫಲ. ಶುಭಸಂಖ್ಯೆ: 3

ಮಕರ: ಹಣ ಬಂದರೂ ಉಳಿಯುವದಿಲ್ಲ. ಅಧಿಕ ಧನವ್ಯಯ. ಅಕಾಲ ಭೋಜನ ಮಾಡಬೇಕಾದೀತು. ತೀರ್ಥಯಾತ್ರಾ ದರ್ಶನ. ಶುಭಸಂಖ್ಯೆ: 6

ಕುಂಭ: ಮಾನಸಿಕ ನೆಮ್ಮದಿ. ಆಲಸ್ಯ ಮನೋಭಾವ ಕಾಡಲಿದೆ. ಕಾರ್ಯ ಸಾಧನೆ ಮಾಡುವಿರಿ. ದುಡುಕು ಸ್ವಭಾವ ಒಳ್ಳೆಯದಲ್ಲ. ಶುಭಸಂಖ್ಯೆ: 5

ಮೀನ: ಮಾತಿನಿಂದ ಕಲಹ. ನೆಮ್ಮದಿ ಇಲ್ಲದ ಜೀವನ. ದೂರ ಪ್ರಯಾಣ. ಆರೋಗ್ಯದ ಸಮಸ್ಯೆ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net