

ಮೇಷ: ವ್ಯಾಪಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ನಿಮಗೆ ಹೊಸ ಅವಕಾಶವನ್ನು ನೀಡುತ್ತವೆ. ಉದ್ವಿಗ್ನತೆ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ಅನವಶ್ಯಕ ಖರ್ಚನ್ನು ತಪ್ಪಿಸಿ. ಯಾವುದೇ ವಿವಾದಗಳಿಂದ ದೂರವಿರಿ. ನಿಮ್ಮ ಪ್ರತಿಭೆ ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಶುಭಸಂಖ್ಯೆ : 2
ಮಿಥುನ: ನಿಮ್ಮ ಸಹೋದರರೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ವೃದ್ಧಿ. ಆತ್ಮೀಯರ ಆಗಮನ. ಶುಭಸಂಖ್ಯೆ: 3
ಕಟಕ: ಸಹೋದ್ಯೋಗಿಗಳು ಸಹಕರಿಸುತ್ತಾರೆ. ನಿಮ್ಮ ವ್ಯಕ್ತಿತ್ವಕ್ಕೆ ಹೊಳಪು ಕೊಡುವ ಘಟನೆ. ಪಾಲುದಾರಿಕೆ ವ್ಯಾಪಾರಕ್ಕೆ ನಿರ್ಧಾರ. ಶುಭಸಂಖ್ಯೆ: 3
ಸಿಂಹ: ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 1
ಕನ್ಯಾ: ಪಾಲುದಾರರೊಂದಿಗೆ ಮನಸ್ತಾಪ. ಪ್ರತಿಭಾನ್ವಿತರಿಗೆ ಶುಭ. ನಿರುದ್ಯೋಗಿಗಳಿಗೆ ಉದ್ಯೋಗ. ಹೊಸ ಸ್ನೇಹಿತರು ಸಿಗುವರು. ಶುಭಸಂಖ್ಯೆ: 7
ತುಲಾ: ಶಿಕ್ಷಕರಿಗೆ ವಿಶೇಷ ಮನ್ನಣೆ. ಸಮರ್ಪಣಾ ಭಾವದಿಂದ ಯೋಗ ನಿರ್ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಶುಭಸಂಖ್ಯೆ: 2
ವೃಶ್ಚಿಕ: ಕಚೇರಿಯಲ್ಲಿ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ಅನವಶ್ಯಕ ತಿರುಗಾಟದಿಂದ ಆಯಾಸ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 8
ಧನುಸ್ಸು: ಅಸಾಧ್ಯವಾದುದನ್ನು ಸಾಧಿಸಿದ ತೃಪ್ತಿ ನಿಮ್ಮದಾಗಲಿದೆ. ಸಜ್ಜನರೊಂದಿಗೆ ಸಂವಹನ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 4
ಮಕರ: ಯಾವುದೇ ರೀತಿಯ ವಿವಾದಗಳಿಂದ ದೂರವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಸ್ತಿ ಲಾಭದ ಸಾಧ್ಯತೆ. ಶುಭಸಂಖ್ಯೆ: 9
ಕುಂಭ: ಸ್ನೇಹಿತರೊಂದಿಗೆ ಪ್ರಯಾಣ ಸಾಧ್ಯತೆ. ವಿದ್ಯಾರ್ಥಿಗಳಿಗೆ ಅಡೆತಡೆಗಳು. ಸಂಗಾತಿಗೆ ಬಡ್ತಿ. ನಿರುದ್ಯೋಗಿಗಳಿಗೆ ಅನುಕೂಲ. ಶುಭಸಂಖ್ಯೆ: 7
ಮೀನ: ಸಹೋದ್ಯೋಗಿಗಳೊಂದಿಗೆ ವಾಗ್ವಾದದಿಂದ ತೊಂದರೆ. ನಿಮ್ಮ ಕೌಶಲದಿಂದ ಕಾರ್ಯಸಿದ್ಧಿ. ಮನೆಯಲ್ಲಿ ಶುಭಕಾರ್ಯ. ಶುಭಸಂಖ್ಯೆ: 9