

ಮೇಷ: ಕೆಲವು ಸ್ನೇಹಿತರನ್ನು ನಂಬಿಕೊಂಡಿದ್ದೀರಿ. ಆದರೆ ಹಿತಶತ್ರುಗಳಂತಹ ಮಿತ್ರರನ್ನು ದೂರಕ್ಕೆ ಸರಿಸಿ. ಇಲ್ಲವಾದರೆ ತೊಂದರೆ ಆದೀತು. ಶುಭಸಂಖ್ಯೆ: 5
ವೃಷಭ: ಕಚೇರಿಯಲ್ಲಿ ಮೇಲಧಿಕಾರಿಗಳು ನಿಮ್ಮ ಪ್ರಶಂಸೆ ಮಾಡಬಹುದು. ಆದರೆ ಶೀಘ್ರ ಯಶಸ್ಸಿಗಾಗಿ ಅನ್ಯಾಯದ ಪಥದಲ್ಲಿ ಸಾಗದಿರಿ. ಶುಭಸಂಖ್ಯೆ: 2
ಮಿಥುನ: ಕ್ಷೀಣವಾದ ಆಸೆಯೊಂದು ಲಾಟರಿಯ ಬಗ್ಗೆ ಉತ್ಸಾಹವನ್ನು ಮೂಡಿಸಬಹುದು. ಅವಸರದಲ್ಲಿ ದುಡುಕಿ ನಷ್ಟಕ್ಕೆ ಒಳಗಾಗದಿರಿ. ಶುಭಸಂಖ್ಯೆ: 6
ಕಟಕ: ಹಲವು ದಿನಗಳ ಕನಸು ಸಾಕಾರ ರೂಪವನ್ನು ಪಡೆಯಲಿದೆ. ಉತ್ಸಾಹಕ್ಕೂ ಕಾರಣವಾಗಲಿದೆ. ರಾಮನನ್ನು ಭಕ್ತಿಯಿಂದ ಸ್ಮರಿಸಿ. ಶುಭಸಂಖ್ಯೆ: 4
ಸಿಂಹ: ವಿವಾಹಯೋಗಕ್ಕೆ ಪಾರ್ವತಿಯ ಕೃಪಾಶೀರ್ವಾದ ಒದಗಿಬರಲಿದೆ. ಶ್ರೀ ಶನೈಶ್ಚರ ಸ್ತೋತ್ರವನ್ನು ಪಠಿಸಿ. ಬಹು ಬೇಗನೆ ಗೆಲುವು ಸಿಗಲಿದೆ. ಶುಭಸಂಖ್ಯೆ: 1
ಕನ್ಯಾ: ಪ್ರಮುಖ ಘಟನೆಯೊಂದರಲ್ಲಿ ಪಾಲ್ಗೊಳ್ಳುವ ಕಾರಣದಿಂದ ಆಯಾಸವೇ ಉಂಟಾದೀತು. ಆರೋಗ್ಯದತ್ತ ಗಮನ ಇರಲಿ. ಶುಭಸಂಖ್ಯೆ: 3
ತುಲಾ: ಸ್ವಲ್ಪ ಮಟ್ಟಿಗೆ ಅಪಘಾತದ ಹೆದರಿಕೆ ನಿಮ್ಮನ್ನು ಕಾಡಬಹುದು. ಸಾಧ್ಯವಾದಷ್ಟು ಎಚ್ಚರದಿಂದಲೇ ವಾಹನವನ್ನು ಓಡಿಸಿದರೆ ಕ್ಷೇಮ. ಶುಭಸಂಖ್ಯೆ: 9
ವೃಶ್ಚಿಕ: ಕೆಲಸ ಸಿಗದಿದ್ದರೂ ಖಂಡಿತ ನಿರಾಶರಾಗದಿರಿ. ಮಹತ್ವದ ಅವಕಾಶಗಳೇ ನಿಮ್ಮನ್ನು ಹುಡುಕುತ್ತ ಬರಬಹುದಾದ ಸಾಧ್ಯತೆಗಳಿವೆ. ಶುಭಸಂಖ್ಯೆ: 8
ಧನುಸ್ಸು: ನಿಮ್ಮ ನಡೆನುಡಿಗಳೆಲ್ಲ ಈ ಕಾಲಕ್ಕೆ ಒಗ್ಗುವಂತೆ ಬದಲಾಗಬೇಕು. ಇದರಿಂದ ಯಶಸ್ಸಿನೆಡೆಗಿನ ಮಾರ್ಗಗಳೂ ಲಭ್ಯವಾಗುತ್ತವೆ. ಶುಭಸಂಖ್ಯೆ: 7
ಮಕರ: ಉದ್ಯೋಗದ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮ ಬಗ್ಗೆ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಅದನ್ನು ನೀವೂ ಚೆನ್ನಾಗಿ ಕಾಪಾಡಿಕೊಳ್ಳಿ. ಶುಭಸಂಖ್ಯೆ: 5
ಕುಂಭ: ಯಶಸ್ಸಿನತ್ತ ನಿಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸುವುದಕ್ಕೆ ಬೇಗನೆ ಹಲವು ದಾರಿಗಳು ಸಿಗಲಿವೆ. ಕ್ರಿಯಾಶೀಲರಾಗಿರಿ. ಶುಭಸಂಖ್ಯೆ: 2
ಮೀನ: ಸತ್ಯದ ನಡೆ, ಎಚ್ಚರದ ಸ್ವಭಾವ, ಚಾತುರ್ಯಗಳನ್ನು ಕರಗತ ಮಾಡಿಕೊಂಡಿದ್ದೀರಿ. ಇವುಗಳೇ ನಿಮಗೆ ಗೆಲುವನ್ನೂ ತಂದುಕೊಡಲಿವೆ. ಶುಭಸಂಖ್ಯೆ: 6