ಈ ರಾಶಿಯವರಿಗಿಂದು ಹಣಕಾಸಿನ ಮುಗ್ಗಟ್ಟು, ವಿಚಲಿತರಾಗಬೇಡಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಶುಭವಾರ್ತೆ ಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಶುಭಸಂಖ್ಯೆ: 5

ವೃಷಭ: ಬ್ಯಾಂಕಿಂಗ್ ವ್ಯವಹಾರಸ್ಥರಿಗೆ ಆದಾಯ. ಬಂಧುಗಳಿಂದ ಸಹಕಾರ. ದೈಹಿಕವಾಗಿ ಬಳಲುವಿರಿ. ಯೋಗ, ಧ್ಯಾನದ ಮೊರೆಹೋಗಿ. ಶುಭಸಂಖ್ಯೆ: 9

ಮಿಥುನ: ಗುತ್ತಿಗೆ ವ್ಯಾಪಾರಸ್ಥರಿಗೆ ಅಭಿವೃದ್ಧಿ. ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಪಡೆದುಕೊಳ್ಳುವುದು ಜಾಣತನ. ಶುಭಸಂಖ್ಯೆ: 9

ಕಟಕ: ವಿವಾಹ ವಿಚಾರದಲ್ಲಿ ತೊಂದರೆ. ಲೋಹದ ವಸ್ತುಗಳಿಂದ ಎಚ್ಚರ. ಲೇವಾದೇವಿಯ ವ್ಯವಹಾರದಿಂದ ದೂರವಿರಿ. ಶುಭಸಂಖ್ಯೆ: 2

ಸಿಂಹ: ಷೇರು ವ್ಯವಹಾರಗಳಲ್ಲಿ ಮಿಶ್ರಫಲ. ಉದ್ಯೋಗದಲ್ಲಿ ಬದಲಾವಣೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಶುಭಸಂಖ್ಯೆ: 9

ಕನ್ಯಾ: ತೈಲ ಮಾರಾಟದಿಂದ ಅಧಿಕ ಲಾಭ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ. ಪ್ರಯಾಣದಲ್ಲಿ ಜಾಗೃತರಾಗಿರಿ. ಶುಭಸಂಖ್ಯೆ: 2

ತುಲಾ: ಹಣಕಾಸಿನ ಮುಗ್ಗಟ್ಟು. ವಿಚಲಿತರಾಗಬೇಡಿ. ಪ್ರಯಾಣದಲ್ಲಿ ತೊಂದರೆ ಉಂಟಾಗಬಹುದು. ವ್ಯವಹಾರದಲ್ಲಿ ಎಚ್ಚರದಿಂದಿರಿ. ಶುಭಸಂಖ್ಯೆ: 7

ವೃಶ್ಚಿಕ: ಪುಸ್ತಕ ವ್ಯಾಪಾರಸ್ಥರಿಗೆ ಉತ್ತಮ ದಿನ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ತೋರುವಿರಿ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಾಗಲಿದೆ. ಶುಭಸಂಖ್ಯೆ: 6

ಧನುಸ್ಸು: ಸಂಯಮದ ಅವಶ್ಯಕತೆಯಿದೆ. ಸಾಕುಪ್ರಾಣಿಗಳಿಂದ ತೊಂದರೆಯಾಗಬಹುದು. ರಾಸಾಯನಿಕ ವ್ಯಾಪಾರಸ್ಥರಿಗೆ ಧನಲಾಭ. ಶುಭಸಂಖ್ಯೆ: 3

ಮಕರ: ವಿವಾಹ ವಿಚಾರದಲ್ಲಿ ಶುಭಸುದ್ದಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ವಿಶೇಷ ಪ್ರಗತಿ. ಆಹಾರ ಕ್ರಮದಲ್ಲಿ ಕಾಳಜಿ ವಹಿಸಿ. ಶುಭಸಂಖ್ಯೆ: 4

ಕುಂಭ: ರಾಜಕಾರಣಿಗಳಿಗೆ ಶುಭಸಮಯ. ಔಷಧ ವ್ಯಾಪಾರಸ್ಥರಿಗೆ ಲಾಭ. ಕೃಷಿಕರಿಗೆ ಶುಭಫಲ. ಕುಲದೇವರನ್ನು ಸ್ಮರಣೆ ಮಾಡಿ. ಶುಭಸಂಖ್ಯೆ: 7

ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭಫಲ. ಹಾಲು- ಹಣ್ಣು ವ್ಯಾಪ್ಙಾರಸ್ಥರಿಗೆ ಉತ್ತಮ ದಿನ. ಸಮಯ ಸಾಧಕರಿಂದ ಅಂತರವಿರಲಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net