ಈ ರಾಶಿಯ ಮಹಿಳಾ ವ್ಯಾಪಾರಸ್ಥರಿಗೆ ಅನಪೇಕ್ಷಿತ ಧನಲಾಭ, ಮನೆಯಲ್ಲಿ ಸಂತಸದ ವಾತಾವರಣ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಪರಿಚಿತರಿಂದ ಸಹಾಯ. ಮಹಿಳೆಯರಿಗೆ ಕೆಲಸದ ಒತ್ತಡ. ಸಹೋದರರಿಂದ ಸಲಹೆ ದೊರೆತು ಕಾರ್ಯದಲ್ಲಿ ನಿರಾಳ. ಶುಭಸಂಖ್ಯೆ: 9

ವೃಷಭ: ಪಿತ್ರಾರ್ಜಿತ ಆಸ್ತಿ ವಿವಾದ ನ್ಯಾಯಾಲಯಕ್ಕೆ. ಕಚೇರಿಯಲ್ಲಿ ಅಸಮಾಧಾನ. ಕಲಾವಿದರಿಗೆ ವಿಶೇಷ ಲಾಭವಾಗುವ ಸಾಧ್ಯತೆ. ಶುಭಸಂಖ್ಯೆ: 1

ಮಿಥುನ: ಆತ್ಮೀಯರ ಅಗಲಿಕೆ. ಸಾಧನೆಯಲ್ಲಿ ಸಹೋದ್ಯೋಗಿ ಗಳಿಂದ ವಿರೋಧ. ಕೆಲಸಗಳಲ್ಲಿ ಅಪಜಯ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 4

ಕಟಕ: ಸ್ನೇಹಿತರ ಸಮಾಗಮ. ಹಿರಿಯರಿಂದ ಮುಖ್ಯ ವಾದ ವಿಚಾರದಲ್ಲಿ ಸಲಹೆ. ಅನಾರೋಗ್ಯ ಬಾಧಿಸಬಹುದು, ಎಚ್ಚರದಿಂದಿರಿ. ಶುಭಸಂಖ್ಯೆ: 6

ಸಿಂಹ: ಎಷ್ಟೋ ಕಾಲದಿಂದ ಬಾಧಿಸುತ್ತಿದ್ದ ರೋಗಕ್ಕೆ ಚಿಕಿತ್ಸೆ. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ. ನಂಬಿದವರಿಂದಲೇ ಮೋಸ. ಶುಭಸಂಖ್ಯೆ: 9

ಕನ್ಯಾ: ಲೇಖನ ವೃತ್ತಿಯವರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ವಿದ್ಯಾರ್ಥಿಗಳಿಗೆ ಫಲ ಸಿಗುವ ಸಮಯದಲ್ಲಿ ವಿಘ್ನ. ಶುಭಸಂಖ್ಯೆ: 6

ತುಲಾ: ನೂತನ ವಾಹನ ಖರೀದಿ ಸಾಧ್ಯತೆ. ಉದ್ಯೋಗದ ವಿಚಾರದಲ್ಲಿ ಸ್ಥಾನಮಾನದ ನಿರೀಕ್ಷೆ. ದಿನಾಂತ್ಯದಲ್ಲಿ ಉತ್ತಮ ಭೋಜನ. ಶುಭಸಂಖ್ಯೆ: 3

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಸಹೋದರರಿಂದಲೇ ಮೋಸ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7

ಧನುಸ್ಸು: ಮಗಳ ವಿವಾಹದ ವಿಷಯದಲ್ಲಿ ಕುಟುಂಬದಲ್ಲಿ ಗೊಂದಲ. ಮಾಡದ ತಪ್ಪಿಗೆ ಶಿಕ್ಷೆ ಎದುರಿಸಬೇಕಾ ದೀತು. ಸಾಲಗಾರರ ಕಾಟ. ಶುಭಸಂಖ್ಯೆ: 4

ಮಕರ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಆತ್ಮೀಯ ಸ್ನೇಹಿತನ ಭೇಟಿ. ಯೋಚಿಸಿ ಮಾತನಾಡಿ. ದಿನಾಂತ್ಯದಲ್ಲಿ ಶುಭವಾರ್ತೆ ಬರಲಿದೆ. ಶುಭಸಂಖ್ಯೆ: 1

ಕುಂಭ: ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ. ಪತ್ನಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಮಕ್ಕಳಿಂದ ನಿರೀಕ್ಷಿತ ಬೆಂಬಲ ಸಿಗಲಿದೆ. ಶುಭಸಂಖ್ಯೆ: 9

ಮೀನ: ಪ್ರಿಯರಿಂದ ಸಹಾಯ. ಮಹಿಳಾ ವ್ಯಾಪಾರಸ್ಥರಿಗೆ ಅನಪೇಕ್ಷಿತ ಧನಲಾಭ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net