

ಮೇಷ: ಸಾರ್ವಜನಿಕ ರಂಗದಲ್ಲಿ ಅಸಹನೆ. ಮೇಲಧಿಕಾರಿಗಳ ಪ್ರಶಂಸೆ. ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ವಾಗ್ವಾದ. ಶುಭಸಂಖ್ಯೆ: 1
ವೃಷಭ: ವಿದೇಶ ಪ್ರವಾಸ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿ. ಗೃಹೋಪಕರಣ ಖರೀದಿಯಲ್ಲಿ ಮೋಸ. ಅತಿ ವಿಶ್ವಾಸದಿಂದ ದ್ರೋಹ. ಶುಭಸಂಖ್ಯೆ: 9
ಮಿಥುನ: ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ. ಶುಭಸಂಖ್ಯೆ: 8
ಕಟಕ: ಪ್ರೀತಿ ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದಾಂಪತ್ಯದಲ್ಲಿ ಮಧುರ ಕ್ಷಣಗಳು. ಶುಭಸಂಖ್ಯೆ: 7
ಸಿಂಹ: ಧಾರ್ವಿುಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಯಬಿಡುವ ಸಾಧ್ಯತೆ. ಜೀವನದ ಅರ್ಥ, ಮರ್ಮಗಳಿಗಾಗಿ ಹುಡುಕಾಟ. ಶುಭಸಂಖ್ಯೆ: 9
ಕನ್ಯಾ: ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಗೆಳೆತನಗಳು ಕೂಡಿಬರುವ ಸಾಧ್ಯತೆ. ಶುಭಸಂಖ್ಯೆ: 6
ತುಲಾ: ನಿಮ್ಮ ಬಗೆಗೆ ಬೇರೆಯವರ ಮನದಾಳದ ಮಾತುಗಳನ್ನು ಆಲಿಸುವ ಆತುರ. ಉತ್ತಮ ಅಭಿಪ್ರಾಯ ಗಳಿಂದಾಗಿ ಹಿತಾನುಭವ. ಶುಭಸಂಖ್ಯೆ: 4
ವೃಶ್ಚಿಕ: ನಿರಾಶೆಯಿಂದ ಹೊರಬಂದು ಕಾರ್ಯಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ. ಶುಭಸಂಖ್ಯೆ: 5
ಧನುಸ್ಸು: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ನಿಮ್ಮಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಉತ್ತಮ ಸಲಹೆ ಯಶಸ್ಸು. ಶುಭಸಂಖ್ಯೆ: 3
ಮಕರ: ವೃತ್ತಿಯ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯದಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಕುಂಭ: ಕುಟುಂಬದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಶುಭಸಂಖ್ಯೆ:1
ಮೀನ: ನಿಮ್ಮ ಮಾತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಸಂತೋಷ ಗೊಳಿಸುವಿರಿ. ನಿಮ್ಮ ನಿರ್ಧಾರ ಪ್ರಶಂಸೆಗೆ ಪಾತ್ರವಾಗುವುದು. ಶುಭಸಂಖ್ಯೆ: 8