ಈ ರಾಶಿಯವರಿಗಿಂದು ವಿಶೇಷ ವ್ಯಕ್ತಿಗಳ ಭೇಟಿ, ಹೊಸ ಯೋಜನೆಗೆ ಸ್ನೇಹಿತನ ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕುಟುಂಬ ಕಲಹ ನಿವಾರಣೆಯಾಗಿ, ನೆಮ್ಮದಿ ಸಿಗಲಿದೆ. ಸಾಲ ಮರುಪಾವತಿ ಬಗ್ಗೆ ಗಮನವಿರಲಿ. ವೃತ್ತಿ ಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 9

ವೃಷಭ: ಅಸಮಾಧಾನ ವ್ಯಕ್ತಪಡಿಸಲು ಈ ದಿನ ಸೂಕ್ತ. ಮೇಲಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ವೈದ್ಯರಿಗೆ ಯಶಸ್ಸು. ಶುಭಸಂಖ್ಯೆ:1

ಮಿಥುನ: ದೊಡ್ಡ ಮೊತ್ತದ ಧನ ನಷ್ಟ. ಜವಾಬ್ದಾರಿಯ ಕೆಲಸವನ್ನು ಈ ದಿನ ಒಪ್ಪಿಕೊಳ್ಳಬೇಡಿ. ಕೆಲವು ನಿರ್ಧಾರ ಬದಲಿಸಬೇಕಾಗಬಹುದು. ಶುಭಸಂಖ್ಯೆ: 5

ಕಟಕ: ಆಪ್ತರ, ಪ್ರೀತಿಪಾತ್ರರ ವಿಯೋಗ ಸಾಧ್ಯತೆ. ಮಗಳ ಮದುವೆಯ ವಿಚಾರದಲ್ಲಿ ಉತ್ತಮ ಫಲ. ಹೂವಿನ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 6.

ಸಿಂಹ: ಬದುಕಿನ ಯೋಚನೆಯಲ್ಲಿ ತೊಡಗುವಿರಿ. ಆಧ್ಯಾತ್ಮಿಕ ವಿಚಾರದತ್ತ ಗಮನ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ವಾದಕರಿಗೆ ಶುಭದಿನ. ಶುಭಸಂಖ್ಯೆ: 9

ಕನ್ಯಾ: ಸ್ವಪ್ರತಿಷ್ಠೆಗಾಗಿ ಸಹವರ್ತಿಗಳ ಮೇಲೆ ಅಪವಾದ. ಪ್ರವಾಸವು ದೇಹದ ಆಯಾಸ ಇಂಗಿಸಲಿದೆ. ಮಕ್ಕಳೊಡನೆ ಕಾಲ ಕಳೆಯುವಿರಿ. ಶುಭಸಂಖ್ಯೆ: 2

ತುಲಾ: ಕಾಲಹರಣ ಮಾಡದಿರಿ, ಕಚೇರಿಯಲ್ಲಿ ಕೆಲಸದ ಒತ್ತಡ. ನಟರಿಗೆ ವಿಶೇಷ ಅವಕಾಶ ಲಭ್ಯ. ರಾಜಕಾರಣಿಗಳಿಗೆ ಅವಮಾನ. ಶುಭಸಂಖ್ಯೆ: 5

ವೃಶ್ಚಿಕ: ಜೀವನೋತ್ಸಾಹದ ಚಿಲುಮೆ ಇಮ್ಮಡಿ. ಪಾಲುದಾರಿಕೆ ಯಲ್ಲಿ ನಿಮ್ಮ ಇಚ್ಚೆಯಂತೆ ನಡೆಯುವುದು. ಆರೋಗ್ಯದಲ್ಲಿ ಗಮನವಿರಲಿ. ಶುಭಸಂಖ್ಯೆ: 4

ಧನುಸ್ಸು: ದಾಂಪತ್ಯದ ಸಮಸ್ಯೆ ಮರುಪರಿಶೀಲಿಸಲು ಸಮಯ ಮೀಸಲಿಡಿ. ವ್ಯಾಪಾರದಲ್ಲಿ ಪ್ರಗತಿ. ನ್ಯಾಯಾಲಯದ ಪ್ರಕರಣ ಇತ್ಯರ್ಥ. ಶುಭಸಂಖ್ಯೆ: 7

ಮಕರ: ರಾಜಕೀಯದಲ್ಲಿ ಕಾರ್ಯತಂತ್ರ ಸುಧಾರಣೆಗೆ ಚಿಂತಿಸಿ. ನಷ್ಟದ ಪ್ರಮಾಣ ನಿಯಂತ್ರಿಸಿ ಸ್ನೇಹಿತನಿಗೆ ಸಾಲ ನೀಡಿಕೆ ಉಚಿತವಲ್ಲ. ಶುಭಸಂಖ್ಯೆ: 9

ಕುಂಭ: ವಿಶೇಷ ವ್ಯಕ್ತಿಗಳ ಭೇಟಿ. ಹೊಸ ಯೋಜನೆಗೆ ಸ್ನೇಹಿತನ ಸಹಾಯ. ಹಿರಿಯರ ಮಾರ್ಗದರ್ಶನದಿಂದ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 2

ಮೀನ: ವ್ಯವಹಾರದಲ್ಲಿ ಸಹನೆ ಅಗತ್ಯ. ಪ್ರಯತ್ನಕ್ಕೆ ಸೂಕ್ತ ಫಲಿತಾಂಶ ಸಿಗಲಿದೆ. ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net