ಈ ರಾಶಿಯವರಿಗೆ ಇಂದು ದೂರ ಪ್ರದೇಶಕ್ಕೆ ಪ್ರಯಾಣ ಮಾಡುವ ಸಂದರ್ಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮನಸಿನ ಆಸೆಗಳು ಈಡೇರುವವು. ತಂದೆಯ ಬಂಧುಗಳಿಂದ ನಷ್ಟ. ಪುಣ್ಯಕರ್ಮ ಫಲಪ್ರಾಪ್ತಿ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 9

ವೃಷಭ: ಹತ್ತಿರದ ಪ್ರಯಾಣ. ರಾಜಕೀಯ ವ್ಯಕ್ತಿಗಳ ಭೇಟಿ, ಆಸ್ತಿಯಿಂದ ಲಾಭ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ ದೊರೆಯಲಿದೆ. ಶುಭಸಂಖ್ಯೆ:1

ಮಿಥುನ: ಧನ, ಉದ್ಯೋಗ ನಷ್ಟ ಸಾಧ್ಯತೆ. ಕುಟುಂಬದಲ್ಲಿ ವಾಗ್ವಾದವನ್ನು ಸಮಾಧಾನದಿಂದ ಬಗೆಹರಿಸಿ. ಪತ್ರ ವ್ಯವಹಾರಕ್ಕೆ ಅನುಕೂಲ. ಶುಭಸಂಖ್ಯೆ: 3

ಕಟಕ: ಸ್ವಂತ ಉದ್ಯೋಗದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ, ಯತ್ನ ಕಾರ್ಯಜಯ. ಶುಭಸಂಖ್ಯೆ: 7

ಸಿಂಹ: ನಷ್ಟದ ಪ್ರಮಾಣ ಜಾಸ್ತಿ. ತಂದೆಯಿಂದ ಅನುಕೂಲ. ಉದ್ಯೋಗಿಗಳಿಗೆ ಬಡ್ತಿ ಸಂಭವ, ಪ್ರಶಂಸೆ. ಅವಿವಾಹಿತರಿಗೆ ಕಾರ್ಯ ಸಿದ್ಧಿ. ಶುಭಸಂಖ್ಯೆ: 8

ಕನ್ಯಾ: ಆಸ್ತಿ ನಷ್ಟವಾಗಬಹುದು. ಅಧಿಕಾರಿಗಳಿಗೆ ಲಾಭದ ದಿನವಲ್ಲ. ದಾಂಪತ್ಯ ಸಮಸ್ಯೆ ಅಧಿಕ. ಸಾಲಗಾರರಿಂದ ಕಿರುಕುಳ. ಶುಭಸಂಖ್ಯೆ: 3

ತುಲಾ: ಉದ್ಯೋಗ ಲಾಭ. ಕೆಲಸ ಕಾರ್ಯಗಳಲ್ಲಿ ಜಯ. ಶತ್ರು ದಮನ. ರೋಗ ಬಾಧೆಗಳಿಂದ ಮುಕ್ತಿದೊರೆತು ಸಮಾಧಾನ. ಶುಭಸಂಖ್ಯೆ: 4

ವೃಶ್ಚಿಕ: ದೂರ ಪ್ರದೇಶಕ್ಕೆ ಪ್ರಯಾಣ ಮಾಡುವ ಸಂದರ್ಭ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಸಂತಾನ ಅಪೇಕ್ಷಿತ ರಿಗೆ ಶುಭ ಸುದ್ದಿ. ಶುಭಸಂಖ್ಯೆ: 5

ಧನುಸ್ಸು: ಬಹುಮಾನ ರೂಪದಲ್ಲಿ ಹಣ ದೊರಕುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆ ವಾತಾವರಣ ಕಲುಷಿತವಾದೀತು. ಶುಭಸಂಖ್ಯೆ: 9

ಮಕರ: ಶುಭಕಾರ್ಯ ರದ್ದಾಗುವ ಸಂಭವ. ಸ್ವಯಂ ಕೃತಾಪರಾಧದಿಂದ ಸ್ನೇಹಿತರು ದೂರ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ: 9

ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆ. ಗಾಯಕರಿಗೆ ವಿಶೇಷ ದಿನ. ಶುಭಸಂಖ್ಯೆ: 9

ಮೀನ: ಗರ್ಭಿಣಿಯರು ಎಚ್ಚರದಿಂದಿರಿ. ಮನೋರೋಗ ಅಧಿಕ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net