ಈ ರಾಶಿಯವರಿಂದು ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ಮಕ್ಕಳಿಂದ ಕುಟುಂಬದಲ್ಲಿ ಗೌರವ. ಕಾನೂನುಬಾಹಿರ ಧನ ಸಂಪಾದನೆ ಮಾಡುವಿರಿ. ಶುಭಸಂಖ್ಯೆ: 9

ವೃಷಭ: ಅನಿರೀಕ್ಷಿತ ತಿರುವುಗಳು ಅಚ್ಚರಿ ಹುಟ್ಟಿಸುವವು. ಅನಾರೋಗ್ಯ ಸಮಸ್ಯೆ ಕಾಡಬಹುದು. ಸಾಲ ಮಾಡುವ ಆಲೋಚನೆ ಮಾಡುವಿರಿ. ಶುಭಸಂಖ್ಯೆ: 1

ಮಿಥುನ: ಅಧಿಕ ಧನ ನಷ್ಟ. ಪ್ರೀತಿ, ಪ್ರೇಮದ ವಿಷಯಗಳಿಂದ ಸಮಸ್ಯೆ. ಮಕ್ಕಳ ನಡವಳಿಕೆಯಲ್ಲಿ ಹೆಮ್ಮೆ. ಸಂತಾನ ದೋಷ ನಿವಾರಣೆ. ಶುಭಸಂಖ್ಯೆ:3

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಆತ್ಮಗೌರವಕ್ಕೆ ಧಕ್ಕೆ ಮತ್ತು ನೋವು. ಭಾವನೆ ಆಸೆ- ಆಕಾಂಕ್ಷೆಗಳಿಗೆ ವಿರೋಧ. ಶುಭಸಂಖ್ಯೆ:2

ಸಿಂಹ: ಮಾನಸಿಕ ವೇದನೆ ಸಂಕಟ. ಪತ್ರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುವುದು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಂಭವ. ಶುಭಸಂಖ್ಯೆ: 4

ಕನ್ಯಾ: ಸಹೋದರಿಯರಿಂದ ಲಾಭ ಬರಲಿದೆ. ಉದ್ಯೋಗ ದೊರೆಯುವ ಯೋಗವಿದೆ. ವಸ್ತ್ರಾಭರಣ ಖರೀದಿಗೆ ಹೆಚ್ಚು ಹಣವ್ಯಯ. ಶುಭಸಂಖ್ಯೆ: 1

ತುಲಾ: ಉತ್ತಮ ಧನ ಸಂಪಾದನೆ. ಅನಿರೀಕ್ಷಿತ ಅದೃಷ್ಟ ಒದಗಿಬರಲಿದೆ. ಪೂರ್ವಿಕರ ಗುಪ್ತನಿಧಿ ಲಭಿಸುವುದು. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 7

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ. ಅವಕಾಶಗಳು ಕೈ ತಪ್ಪುವುದು. ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಜಾಸ್ತಿ. ಸಾಲಬಾಧೆ ಕಾಡಲಿದೆ. ಶುಭಸಂಖ್ಯೆ: 5

ಧನುಸ್ಸು: ಸಂಕಷ್ಟ ಅನುಭವಿಸುವಿರಿ. ಪ್ರೀತಿಯ ವಿಷಯಗಳಿಂದ ಚಿಂತೆ ಉಂಟಾಗಲಿದೆ. ಅಧಿಕ ನಷ್ಟ ಮತ್ತು ಸಮಸ್ಯೆ ಉಂಟಾಗುವುದು. ಶುಭಸಂಖ್ಯೆ:7

ಮಕರ: ದಾಂಪತ್ಯ ಸಮಸ್ಯೆ ಹೆಚ್ಚಾಗುವುದು. ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗ ಲಾಭ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 7

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಅಧಿಕ ಖರ್ಚು ಮಾಡಬೇಕಾದ ಸ್ಥಿತಿ. ಮನೆಯ ವಾತಾವರಣದಲ್ಲಿ ಸಂತಸ. ಶುಭಸಂಖ್ಯೆ: 9

ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ವಣ. ಶತ್ರು ದಮನ. ವ್ಯವಸಾಯಗಾರರಿಗೆ ವ್ಯಾಪಾರದಲ್ಲಿ ಮೋಸ. ಪ್ರಯಾಣದಲ್ಲಿ ಉಲ್ಲಾಸ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net