ಈ ರಾಶಿಯವರ ಕುಟುಂಬದ ಆರೋಗ್ಯದ ಬಗ್ಗೆ ಇಂದು ಕಾಳಜಿ ಇರಲಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಹೋದ್ಯೋಗಿಗಳಿಂದ ಗೌರವ ಪಡೆಯುವಿರಿ. ಉದ್ಯೋಗ ಬದಲಾವಣೆಯ ಆಸೆ ಈಡೇರಲಿದೆ. ಸಂಗಾತಿಯಿಂದ ಉತ್ತಮ ಬೆಂಬಲ. ಶುಭಸಂಖ್ಯೆ :5

ವೃಷಭ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ವಾಹನ ಚಾಲನೆಯಲ್ಲಿ ಎಚ್ಚರ. ಹೂಡಿಕೆಗೆ ಅವಕಾಶ. ಶುಭ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ :1

ಮಿಥುನ: ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಅನಾರೋಗ್ಯ ಉಲ್ಬಣಿಸಬಹುದು. ಧರ್ಮ ಅಧ್ಯಾತ್ಮದ ಕಡೆ ಸೆಳೆತ. ಸ್ನೇಹಿತರೊಂದಿಗೆ ಮನರಂಜನೆ. ಶುಭಸಂಖ್ಯೆ : 4

ಕಟಕ: ಒಳ್ಳೆಯ ದಿನ. ತಂದೆ ತಾಯಿಯ ಪ್ರೀತಿ, ಬೆಂಬಲ ಪಡೆಯಲಿದ್ದೀರಿ. ಹಿತಶತ್ರುಗಳು ಅಪಪ್ರಚಾರ ಮಾಡಬಹುದು. ಸ್ನೇಹಿತರ ಸಹಾಯ. ಶುಭಸಂಖ್ಯೆ : 9

ಸಿಂಹ: ಮಾನಸಿಕ ಅಶಾಂತಿ ನಿಯಂತ್ರಿಸಿಕೊಳ್ಳಿ. ಹಿರಿಯರ ಮಾರ್ಗದರ್ಶನ. ವ್ಯಾಪಾರಿಗಳಿಗೆ ಹೊಸ ಯೋಜನೆ ಪೂರ್ಣಗೊಳಿಸಲು ಸುದಿನ. ಶುಭಸಂಖ್ಯೆ : 2

ಕನ್ಯಾ: ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ವ್ಯಾಪಾರದಲ್ಲಿ ಸಮಸ್ಯೆ. ಬಿಡುವಿಲ್ಲದ ಕೆಲಸಗಳ ನಡುವೆ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ : 8

ತುಲಾ: ಆಸ್ತಿ ವಿಚಾರದಲ್ಲಿ ಕುಟುಂಬದಿಂದ ಪೂರ್ಣ ಬೆಂಬಲ. ವ್ಯವಹಾರಸ್ಥರಿಗೆ ಹೊಸ ಬದಲಾವಣೆಯಿಂದ ಆರ್ಥಿಕ ಅಭಿವೃದ್ಧಿ. ಶುಭಸಂಖ್ಯೆ : 7.

ವೃಶ್ಚಿಕ: ವ್ಯಾಪಾರದಲ್ಲಿ ಮಾಡಿದ ಬದಲಾವಣೆ ಫಲಕೊಡುವುದಿಲ್ಲ. ಕಚೇರಿಯಲ್ಲಿ ಎಚ್ಚರಿಕೆಯಿಂದಿರಿ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಶುಭಸಂಖ್ಯೆ : 6

ಧನುಸ್ಸು: ಧಾರ್ವಿುಕ ವಿಧಿಗಳಲ್ಲಿ ಭಾಗವಹಿಸಲಿದ್ದೀರಿ. ಜಟಿಲ ಸಮಸ್ಯೆಯ ಪರಿಹಾರಕ್ಕೆ ಸಹ ಉದ್ಯೋಗಿಗಳ ಬೆಂಬಲ. ಮಾನಸಿಕ ನೆಮ್ಮದಿ. ಶುಭಸಂಖ್ಯೆ : 8

ಮಕರ: ಬೆಲೆಬಾಳುವ ವಸ್ತುವನ್ನು ಪಡೆಯಲಿದ್ದೀರಿ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಅವಸರದ ನಿರ್ಧಾರದಿಂದ ತೊಂದರೆಯಾದೀತು. ಶುಭಸಂಖ್ಯೆ : 4

ಕುಂಭ: ಹೊಸ ಆವಿಷ್ಕಾರಗಳನ್ನು ಮಾಡಲಿದ್ದೀರಿ. ಅಗತ್ಯ ಸಮಯದಲ್ಲಿ ಕುಟುಂಬದ ಸಲಹೆ. ಸೇವಕರ ಅಚಾತುರ್ಯದಿಂದ ಧನನಷ್ಟ. ಶುಭಸಂಖ್ಯೆ :3

ಮೀನ: ದೀರ್ಘಕಾಲದ ಅನಾರೋಗ್ಯದ ನಿವಾರಣೆ. ಸಾಮಾಜಿಕ ಗೌರವ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಅನಿರೀಕ್ಷಿತ ಖರ್ಚು. ಶುಭಸಂಖ್ಯೆ : 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net