

ಮೇಷ: ನಿಮ್ಮ ಪರಿಶ್ರಮದಿಂದಾಗಿ ಕಾರ್ಯದಲ್ಲಿ ಯಶಸ್ಸು. ಎದುರಾಳಿಗಳ ಕುತಂತ್ರಗಳು ಬಯಲಾಗಲಿದೆ. ಚಿಂತೆಗೆ ಅವಕಾಶವಿಲ್ಲ. ಶುಭಸಂಖ್ಯೆ: 9
ವೃಷಭ: ಬಂಧುಗಳ ಆಗಮನದಿಂದ ನೆಮ್ಮದಿ. ಆರೋಗ್ಯ ಸುಧಾರಣೆಗೆೆ ಯೋಗದ ಮೊರೆ ಹೋಗಿ. ಪಶು ಪಕ್ಷಿಗಳಿಗೆ ಆಹಾರ ನೀಡಿ. ಶುಭಸಂಖ್ಯೆ: 3
ಮಿಥುನ: ಉಲ್ಲಾಸದಿಂದ ಮೈ ಮರೆಯುವ ಸಾಧ್ಯತೆ. ಉದ್ಯೋಗದಲ್ಲಿ ಆತ್ಮವಿಶ್ವಾಸ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನ. ಶುಭಸಂಖ್ಯೆ: 8
ಕಟಕ: ಸರ್ಕಾರಿ ನೌಕರರಿಗೆ ಕಿರಿಕಿರಿ. ಅನಿರೀಕ್ಷಿತವಾದ ತಲೆನೋವು ಅಥವಾ ಬೆನ್ನುನೋವು ಕಂಡುಬರಲಿದೆ. ಧನಾಗಮನದ ಸಾಧ್ಯತೆ. ಶುಭಸಂಖ್ಯೆ:1
ಸಿಂಹ: ವ್ಯವಹಾರದಲ್ಲಿ ಉನ್ನತಿಯಾಗಿ ಸಾಮಾಜಿಕ ಗೌರವ ಪಡೆಯುವಿರಿ. ಸತ್ಪುರುಷರ ದರ್ಶನ ಮಾಡಲಿದ್ದೀರಿ. ಚಿನ್ನಾಭರಣ ಖರೀದಿ. ಶುಭಸಂಖ್ಯೆ: 2
ಕನ್ಯಾ: ವಸ್ತ್ರವಿನ್ಯಾಸಕಾರರಿಗೆ ಆರ್ಥಿಕ ಲಾಭ. ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ಸು. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳುವಿರಿ. ಶುಭಸಂಖ್ಯೆ: 5
ತುಲಾ: ಕೆಲಸದ ನಿರೀಕ್ಷೆಯಲ್ಲಿರುವಿರಿ. ವ್ಯವಹಾರದಲ್ಲಿ ಪ್ರಗತಿ. ಗ್ರಹಬಲಗಳು ನಿಮಗೆ ಕೂಡಿಬರಲಿವೆ. ತೀರ್ಥಕ್ಷೇತ್ರ ದರ್ಶನ ಭಾಗ್ಯ. ಶುಭಸಂಖ್ಯೆ: 9
ವೃಶ್ಚಿಕ: ಆರ್ಥಿಕರಂಗದಲ್ಲಿ ಪ್ರಗತಿ. ದೂರಪ್ರಯಾಣ. ಆರೋಗ್ಯದಲ್ಲಿ ಪ್ರಗತಿ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ. ಉದ್ಯೋಗದಲ್ಲಿ ಆಸಕ್ತಿ. ಶುಭಸಂಖ್ಯೆ: 4
ಧನುಸ್ಸು: ಕಾರ್ಯದಲ್ಲಿ ಬದಲಾವಣೆಯಾದರೂ ಫಲಿತಾಂಶ ನಿಮ್ಮ ಪರವಾಗಿರಲಿದೆ. ರಕ್ಷಣಾ ಕ್ಷೇತ್ರದಲ್ಲಿ ಕಠಿಣ ಸವಾಲು ಸಾಧ್ಯತೆ. ಶುಭಸಂಖ್ಯೆ: 1
ಮಕರ: ಸಮಾಧಾನಚಿತ್ತದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು. ದುಡುಕುತನ ಒಳ್ಳೆಯದಲ್ಲ. ಯೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 6
ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಅಧಿಕಾರ ಹೊಂದು ವಿರಿ. ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವಂತಹ ಕಾರ್ಯಸಾಧನೆ. ಶುಭಸಂಖ್ಯೆ: 7
ಮೀನ: ವೈದ್ಯವೃತ್ತಿಯವರಿಗೆ ಅಧಿಕ ಶ್ರಮವಾಗಿ ವಿಪರೀತ ಆಯಾಸ. ಸ್ತ್ರೀಯರಿಗೆ ಅನುಕೂಲಕರ ಪರಿಸ್ಥಿತಿ. ಚಿನ್ನಾಭರಣ ಖರೀದಿ ಸಾಧ್ಯತೆ. ಶುಭಸಂಖ್ಯೆ: 3