ನಿತ್ಯ ಭವಿಷ್ಯ: ಈ ರಾಶಿಯವರಿಗೆ ಸಹೋದ್ಯೋಗಿಗಳಿಂದ ಹೆಚ್ಚಿನ ಸಹಾಯ

Nithya Bhavishya vvani
Published on

ಮೇಷ: ಧನಲಾಭಕ್ಕೆ ದಾರಿ ಇದೆಯಾದರೂ, ಮಾನಸಿಕ ಆರೋಗ್ಯದ ಸಮತೋಲನವೂ ಅಗತ್ಯ. ಆದಷ್ಟು ಎಚ್ಚರ ಇರಲಿ. ಶುಭಸಂಖ್ಯೆ: 2

ವೃಷಭ: ಕೆಲಸದ ಸ್ಥಳದಲ್ಲಿ ಸಂಭವಿಸುವ ಅನಿರೀಕ್ಷಿತ ಬೆಳವಣಿಗೆಗಳಿಂದ ಭಯವಾಗಬಹುದು. ದತ್ತಾತ್ರೇಯನನ್ನು ಸ್ತುತಿಸಿ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ವಿಚಾರಗಳ ಬಗೆಗೆ ಸ್ವಲ್ಪ ಎಚ್ಚರ ವಹಿಸಬೇಕಾದುದು ಈಗಿನ ಅಗತ್ಯವಾಗಿದೆ. ಗೆಲ್ಲುವಂಥ ಚಾತುರ್ಯವಿರಲಿ. ಶುಭಸಂಖ್ಯೆ: 3

ಕಟಕ: ಕ್ರಿಯಾಶೀಲತೆಯಿಂದ ಲಾಭದ ಸಿದ್ಧಿ ಸಿಗಲಿದೆ. ತಲ್ಲಣಗಳಿಂದ ವಿಮುಕ್ತಿ ಪಡೆಯಲು ನವಗ್ರಹ ಸ್ತೋತ್ರ ಪಠಿಸಿ. ಶುಭಸಂಖ್ಯೆ: 8

ಸಿಂಹ: ಕಚೇರಿಯಲ್ಲಿ ಸಂತಸದಿಂದ ಇರುವಿರಿ. ಆದರೆ ಹಿತಶತ್ರುಗಳ ಕಿರಿಕಿರಿಗಳಿಂದ ಉಸಿರುಗಟ್ಟುವ ಹಾಗಾಗಲೂಬಹುದು. ಶುಭಸಂಖ್ಯೆ: 4

ಕನ್ಯಾ: ಉತ್ತಮವಾದ ಸಮಾಚಾರವನ್ನು ಕೇಳಲಿದ್ದೀರಿ. ಸಹೋದ್ಯೋಗಿಗಳಿಂದ ಹೆಚ್ಚಿನ ಸಹಾಯ ಸಹಕಾರಗಳು ಲಭ್ಯವಾಗಲಿವೆ. ಶುಭಸಂಖ್ಯೆ: 6

ತುಲಾ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು. ಜೀವನದ ಪಾಠಗಳನ್ನು ಕಲಿಸಲು ಇದು ಸಕಾಲವೇ ಆಗಿದೆ. ಶುಭಸಂಖ್ಯೆ: 5

ವೃಶ್ಚಿಕ: ಅವಿಶ್ರಾಂತ ದುಡಿಮೆಯು ದೈಹಿಕ ಬಳಲಿಕೆ ಉಂಟುಮಾಡಬಹುದು. ಯಾವುದಕ್ಕೂ ಕೆರಳದೆ ಶಾಂತವಾಗಿರಿ. ಶುಭಸಂಖ್ಯೆ: 1

ಧನುಸ್ಸು: ಇತರರಿಗೆ ನಿಮ್ಮನ್ನು ಎದುರಿಸುವ ಸಾಮರ್ಥ್ಯ ಇರಲಾರದು. ಮನೆಯಲ್ಲಿ ವಿವಾದ ಆಗದ ಹಾಗೆ ನೋಡಿಕೊಳ್ಳಿ. ಶುಭಸಂಖ್ಯೆ: 7

ಮಕರ: ಖರ್ಚುಗಳ ಪಟ್ಟಿಯನ್ನು ಮಕ್ಕಳು ತುಸು ಬೆಳೆಸಬಹುದು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸುವುದು ಅಗತ್ಯ. ಶುಭಸಂಖ್ಯೆ: 2

ಕುಂಭ: ಸಾಲ ಕೇಳುವವರು ಗಂಟುಬೀಳಬಹುದು. ಆದರೆ ಹಣ ಕೊಡದಿರಿ. ಮಾನಸಿಕ ದೃಢತೆಯನ್ನು ಬಿಡದಿರಿ. ಶುಭಸಂಖ್ಯೆ: 9

ಮೀನ: ಅನಿರೀಕ್ಷಿತ ಕಿರಿಕಿರಿಯಿಂದ ಧೈರ್ಯವು ಕುಂದಬಹುದು. ಶ್ರದ್ಧಾಭಕ್ತಿಗಳಿಂದ ಆಂಜನೇಯ ಸ್ತೋತ್ರ ಪಠಿಸಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net