ನಿತ್ಯ ಭವಿಷ್ಯ: ಬಾಳಸಂಗಾತಿ ಮೋಸ ಮಾಡುವ ಆಲೋಚನೆಯೇ- ಈ ರಾಶಿಭವಿಷ್ಯ ನೋಡೋದೊಳಿತು

Nithya Bhavishya vvani
Published on

ಮೇಷ: ಕಚೇರಿಯಲ್ಲಿ ಅನ್ಯಲಿಂಗಿಗಳ ಜತೆಗೆ ಅತಿಯಾಗಿ ಒಡನಾಡುವುದು ಬೇಡ. ನಿಮಗೇ ಸುಮ್ಮನೆ ತೊಂದರೆ ಆದೀತು. ಶುಭಸಂಖ್ಯೆ: 3

ವೃಷಭ: ಮಕ್ಕಳ ಶಿಕ್ಷಣದ ವಿಚಾರದಲ್ಲಿ ಒತ್ತಡ ಉಂಟಾಗಲಿದೆ. ಮದುವೆಯ ಚಿಂತೆಯೂ ಕಾಡಲಿದೆ. ಶಿವನನ್ನು ಸ್ತುತಿಸಿ. ಶುಭಸಂಖ್ಯೆ: 6

ಮಿಥುನ: ಆತ್ಮೀಯರನ್ನು ದೂರ ಮಾಡಿಕೊಳ್ಳದಿರಿ. ಅವರೇ ಮುಂದೆ ನಿಮಗೆ ಅನಿವಾರ್ಯ ಎನಿಸಬಹುದು. ತಾಳ್ಮೆ ಇರಲಿ. ಶುಭಸಂಖ್ಯೆ: 9

ಕಟಕ: ಟೀಕೆಗಳಿಂದ ವ್ಯವಸ್ಥೆ ಬದಲಾಗದು. ಆತ್ಮವಿಮರ್ಶೆ ಮಾಡಿಕೊಳ್ಳಿ. ಹತಾಶೆ ತಡೆಗೆ ವಿಷ್ಣುಸಹಸ್ರನಾಮವನ್ನು ಓದಿ. ಶುಭಸಂಖ್ಯೆ: 7

ಸಿಂಹ: ಸರ್ಕಾರಿ ಉದ್ಯೋಗಿಗಳಿಗೆ ಪದೋನ್ನತಿ ಲಭ್ಯ. ಕೆಲವರಿಗೆ ಕಚೇರಿಯಲ್ಲಿ ಕಿರುಕುಳದ ಅನುಭವವೂ ಆಗಬಹುದು. ಶುಭಸಂಖ್ಯೆ: 4

ಕನ್ಯಾ: ರಾಜಕಾರಣದಲ್ಲಿ ಇರುವವರಿಗೆ ಶತ್ರುಗಳಿಂದ ಸಂಕಷ್ಟವಿದೆ. ಮಹಾಗಣಪತಿಯನ್ನು ಭಕ್ತಿಯಿಂದ ಸ್ಮರಣೆ ಮಾಡಿ. ಶುಭಸಂಖ್ಯೆ: 1

ತುಲಾ: ಜಮೀನಿನ ವಿಚಾರದಲ್ಲಿ ಆಶಾಕಿರಣ ಗೋಚರಿಸಲಿದೆ. ಬಾಳಸಂಗಾತಿಗೆ ಮೋಸ ಮಾಡುವ ಯೋಚನೆ ಬೇಡ. ಶುಭಸಂಖ್ಯೆ: 2

ವೃಶ್ಚಿಕ: ದಿನದ ಆರಂಭದಲ್ಲೇ ಒತ್ತಡಗಳ ಕಾಟ ಶುರುವಾಗುತ್ತದೆ. ಅದನ್ನು ದೂರ ಮಾಡಲು ದುರ್ಗಾಂಬೆಯನ್ನು ಧ್ಯಾನಿಸಿ. ಶುಭಸಂಖ್ಯೆ: 5

ಧನುಸ್ಸು: ದಿಟ್ಟ ಮಾತುಗಳಿಂದ ಲಾಭ, ನಷ್ಟ ಎರಡೂ ಇದೆ. ಆದರೂ ನಿಮ್ಮ ಮಾತು ಸ್ವಲ್ಪ ಮೃದುವಾಗಿದ್ದರೆ ಕ್ಷೇಮಕರ. ಶುಭಸಂಖ್ಯೆ: 8

ಮಕರ: ಎದುರಾಳಿಗಳ ನಯವಾದ ಮಾತುಗಳನ್ನು ನಂಬಿಬಡಿಬೇಡಿ. ಆಸ್ತಿಯ ವಿಚಾರದಲ್ಲಿ ಗೆಳೆಯರಿಂದ ಲಾಭವಿದೆ. ಶುಭಸಂಖ್ಯೆ: 6

ಕುಂಭ: ವಿವಾಹಾಪೇಕ್ಷಿಗಳಿಗೆ ಹಿರಿಯರ ಸಹಕಾರ ಸಿಗಲಿದೆ. ಮಹಾವಿಷ್ಣುವಿನ ಕೃಪೆಯಿಂದ ಇಚ್ಛಿತ ಕಾರ್ಯಗಳಲ್ಲಿ ಸಿದ್ಧಿಯಿದೆ. ಶುಭಸಂಖ್ಯೆ: 4

ಮೀನ: ಇತರರ ತೊಂದರೆಗಳಿಗೆ ಸ್ಪಂದಿಸುತ್ತೀರಿ. ಆದರೆ ನಿಮ್ಮನ್ನೇ ಕಷ್ಟಕ್ಕೆ ಸಿಲುಕಿಸಿಕೊಳ್ಳುವ ಸಂದರ್ಭ ಸೃಷ್ಟಿಸಿಕೊಳ್ಳದಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net