ವಿವಾಹಕ್ಕೆ ಈ ರಾಶಿಯವರು ಇನ್ನೂ ಸ್ವಲ್ಪ ದಿನ ಕಾಯಲೇಬೇಕು...

Nitya-Bhavishya-vvani-1-2-1
Published on

ಮೇಷ: ಎಷ್ಟೇ ಹಣ ಇದ್ದರೂ ಸಾಲದು ಎನಿಸಬಹುದು. ಆರೋಗ್ಯದ ಸಲುವಾಗಿ ಆಸ್ಪತ್ರೆಯ ಖರ್ಚು ಹೆಚ್ಚಾಗಬಹುದು. ಶುಭಸಂಖ್ಯೆ: 1

ವೃಷಭ: ಅಪರಿಚಿತರಿಗೆ ಹೆಚ್ಚು ಸಲುಗೆ ನೀಡಿ ಕಷ್ಟಕ್ಕೆ ಗುರಿಯಾಗುವಿರಿ. ಅವರಿಂದ ದೂರ ಇರುವುದೇ ಒಳ್ಳೆಯದು. ಶುಭಸಂಖ್ಯೆ: 3

ಮಿಥುನ: ಕೈಗೊಂಡ ಕೆಲಸಗಳಲ್ಲಿ ಅಡಚಣೆ ಬಾರದಿರಲಿ ಎಂದು ಗಣೇಶನನ್ನು ಪ್ರಾರ್ಥಿಸಿ. ಸಂಗಾತಿಯ ಜತೆ ವಾದವಿವಾದ ಬೇಡ. ಶುಭಸಂಖ್ಯೆ: 5

ಕಟಕ: ಮೇಲಧಿಕಾರಿಗಳು ಕಿರುಕುಳ ನೀಡಿದರೂ ತಾಳ್ಮೆ ಇರಲಿ. ಏಕೆಂದರೆ ನೀವು ಮಾಡಿರುವ ಕೆಲಸ ಸರಿಯಾಗಿದೆ. ಶುಭಸಂಖ್ಯೆ: 7

ಸಿಂಹ: ನಿಮ್ಮ ಬಳಿಗೆ ಬರುವ ಜನರ ಗುಣ ಅವಗುಣಗಳನ್ನು ತಿಳಿಯಲಾಗದು. ಯಾರ ವೈರತ್ವವನ್ನೂ ಹೊಂದದಿರಿ. ಶುಭಸಂಖ್ಯೆ: 9

ಕನ್ಯಾ: ದಣಿವಾದರೆ ಕೆಲಸ ಮುಂದೂಡಿ. ನಿಮ್ಮಿಂದ ಸಾಧ್ಯವಾಗುವಷ್ಟು ಕೆಲಸಗಳನ್ನು ಒಪ್ಪಿಕೊಳ್ಳಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ. ಶುಭಸಂಖ್ಯೆ: 2

ತುಲಾ: ಬಂಧುಗಳ ಒಳಜಗಳ ನಿಮ್ಮನ್ನು ಆಯಾಸಗೊಳಿಸುವುದು. ಬಹು ವಿವೇಕದಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಶುಭಸಂಖ್ಯೆ: 4

ವೃಶ್ಚಿಕ: ಬಹಳ ಜನ ನಿಮ್ಮ ಕೆಲಸದ ಬಗ್ಗೆ ಗೌರವ ಹೊಂದಿರುತ್ತಾರೆ. ನ್ಯಾಯಬದ್ಧ ಹಣದಲ್ಲಿಯೇ ಸಾಲಗಳನ್ನು ತೀರಿಸುವಿರಿ. ಶುಭಸಂಖ್ಯೆ: 6

ಧನಸ್ಸು: ಕೆಲಸ ನಿಧಾನವಾಗಿ ಸಾಗಲಿದೆ. ಹಣದ ಮುಗ್ಗಟ್ಟು ಅಧೈರ್ಯ ಉಂಟುಮಾಡಬಹುದು. ಪರಶಿವನನ್ನು ಸ್ತುತಿಸಿ. ಶುಭಸಂಖ್ಯೆ: 8

ಮಕರ: ಅಯೋಗ್ಯ ಜನ ತಲೆ ತಿನ್ನುವ ಸಾಧ್ಯತೆ. ದಂಪತಿಯ ಮಧ್ಯೆ ವಿರಸ ಉಂಟಾಗಬಹುದು. ದೂರಪ್ರಯಾಣ ಬೇಡ. ಶುಭಸಂಖ್ಯೆ: 5

ಕುಂಭ: ಆರ್ಥಿಕ ವಿಚಾರದಲ್ಲಿ ಎಚ್ಚರವಿರಲಿ. ಬರಬೇಕಿದ್ದ ಹಣ ಸದ್ಯದಲ್ಲೇ ಕೈ ಸೇರಲಿದೆ. ವಿವಾಹಕ್ಕೆ ಸ್ವಲ್ಪ ಕಾಯಬೇಕು. ಶುಭಸಂಖ್ಯೆ: 2

ಮೀನ: ನಿಮ್ಮ ಪರ ಅನಿರೀಕ್ಷಿತ ಬೆಳವಣಿಗೆಗಳಿಂದ ನಿಂತಿದ್ದ ಕೆಲಸಗಳಿಗೆ ಚಾಲನೆ. ಹೊಸ ಆಶಾಕಿರಣ ಮೂಡಲಿದೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net