

ಮೇಷ: ಇಷ್ಟು ಹೊತ್ತು ಕಾದದ್ದು ವ್ಯರ್ಥ ಎಂಬುದು ಬಹಳ ಹೊತ್ತು ಕಾದ ನಂತರ ಸಂಜೆಯ ವೇಳೆಗೆ ತಿಳಿಯುತ್ತದೆ. ಅದೃಷ್ಟಸಂಖ್ಯೆ: 1
ವೃಷಭ: ರಹಸ್ಯ ವಿಚಾರ ತಿಳಿಯಲಿದೆ. ಆದನ್ನು ಯಾರಿಗೂ ತಿಳಿಸದಿದ್ದರೂ ನಿಮ್ಮ ಮೇಲೆ ಆರೋಪ ಬರುತ್ತದೆ. ಅದೃಷ್ಟಸಂಖ್ಯೆ: 4
ಮಿಥುನ: ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತೀರಿ. ಇದರಿಂದ ಶ್ಲಾಘನೆ ದೊರೆಯಲಿದೆ. ಕೆಲಸ ನಿಧಾನವಾಗಲಿದೆ. ಅದೃಷ್ಟಸಂಖ್ಯೆ: 7
ಕಟಕ: ಸದಾ ಏನೋ ಕೆಲಸ ಮಾಡಿಕೊಂಡು ಚುರುಕಾಗಿರುವ ನಿಮಗೆ ಮಾಡಲು ಏನೂ ಕೆಲಸ ಇಲ್ಲದೆ ಪರದಾಟ. ಅದೃಷ್ಟಸಂಖ್ಯೆ: 5
ಸಿಂಹ: ಕೆಲವು ಸನ್ನಿವೇಶಗಳಿಗೆ ಇದೇ ಕಾರಣ ಎಂದು ಹಿಂದೆ ತಿಳಿದುಕೊಂಡದ್ದು ತಪ್ಪು ಎಂಬ ಅರಿವು ಮೂಡುತ್ತದೆ. ಅದೃಷ್ಟಸಂಖ್ಯೆ: 1
ಕನ್ಯಾ: ಚಿಂತಿಸುವುದಕ್ಕೆ ಬಹಳ ವಿಚಾರಗಳು ಇರುತ್ತವೆ. ಕೆಲವು ಆಪಾದನೆಗಳನ್ನು ಸಹ ಎದುರಿಸಬೇಕಾಗಿ ಬಂದೀತು. ಅದೃಷ್ಟಸಂಖ್ಯೆ: 3
ತುಲಾ: ಬಹಳ ಯೋಚಿಸಿ ಯಾವುದೋ ಕೆಲಸ ನಿಲ್ಲಿಸಲು ಪ್ರಯತ್ನ ಮಾಡುತ್ತೀರಿ. ಆದರೆ ಅದೇನೂ ಸುಲಭವಲ್ಲ. ಅದೃಷ್ಟಸಂಖ್ಯೆ: 2
ವೃಶ್ಚಿಕ:ನಿಮ್ಮ ತಾಳ್ಮೆಯ ಕೊರತೆ ಮನೆಯ ಅಶಾಂತಿಯನ್ನು ಹೆಚ್ಚಿಸುತ್ತದೆ. ಶಾಂತವಾಗಿದ್ದರೆ ಮನೆಯಲ್ಲಿ ಸಂತಸವಿರಲಿದೆ. ಅದೃಷ್ಟಸಂಖ್ಯೆ: 5
ಧನಸ್ಸು:ನಿಮ್ಮದು ಹೆಚ್ಚು ಶ್ರಮವಿರದೆ ಸುಲಭಕ್ಕೆ ಮಾಡಬಹುದಾದ ಕೆಲಸವೆಂದು ಅನ್ಯರು ಅಸಡ್ಡೆ ತೋರುತ್ತಾರೆ. ಅದೃಷ್ಟಸಂಖ್ಯೆ: 9
ಮಕರ:ಅಗತ್ಯ ಇಲ್ಲದೆ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡದೆ ಇದ್ದಲ್ಲಿ ಉತ್ತಮ. ಹೆಚ್ಚು ಎಚ್ಚರ ಅವಶ್ಯ. ಅದೃಷ್ಟಸಂಖ್ಯೆ: 4
ಕುಂಭ:ಆಲಸ್ಯ ಹೆಚ್ಚಾಗಿ ಬಹಳ ಮುಖ್ಯ ಕೆಲಸವನ್ನು ಮರೆಯುತ್ತೀರಿ ಅಥವಾ ಆ ಕೆಲಸಕ್ಕೆ ಬರಲು ತಡವಾಗುತ್ತದೆ. ಅದೃಷ್ಟಸಂಖ್ಯೆ: 3
ಮೀನ:ಅತ್ಯಂತ ಬುದ್ಧಿವಂತಿಕೆಯಿಂದ ಕೂಡಿದ ನಿಮ್ಮ ಕೆಲಸಗಳಿಗೆ ಶ್ಲಾಘನೆ ದೊರಕುವ ಸಾಧ್ಯತೆಗಳೂ ಬಹಳ ಇವೆ. ಅದೃಷ್ಟಸಂಖ್ಯೆ: 1